ಉತ್ತರ ಕನ್ನಡ

ಕಮಾರಗಾಂವ್ ಗ್ರಾಮಸ್ಥರೊಡನೆ ಚರ್ಚೆ

ಕಾರವಾರ: ಇಲ್ಲಿನ ಗೋಟೆಗಾಳಿ ಗ್ರಾಪಂ ವ್ಯಾಪ್ತಿಯ ಕಮಾರಗಾಂವ್ ಗ್ರಾಮಕ್ಕೆ ಅಂಕೋಲಾ ತಾಲೂಕು ಜೆಡಿಎಸ್ ಅಧ್ಯಕ್ಷ ಪುರುಷೋತ್ತಮ ಸಾವಂತ ಈಚೆಗೆ ಭೇಟಿ ನೀಡಿ ಅಲ್ಲಿನ ಸಮಸ್ಯೆಗಳ ಕುರಿತು ಗ್ರಾಮಸ್ಥರೊಡನೆ ಚರ್ಚಿಸಿದರು.
ಗ್ರಾಮದಲ್ಲಿ ಸುಮಾರು 38 ಮನೆಗಳಿವೆ. 400ಕ್ಕಿಂತ ಹೆಚ್ಚಿನ ಜನಸಂಖ್ಯೆ ಇದೆ. ಇಲ್ಲಿ ಕುಣಬಿ ಜನಾಂಗ ಹೆಚ್ಚಿಗೆ ವಾಸಿಸುತ್ತಾರೆ. ಇವತ್ತಿಗೂ ಗ್ರಾಮಕ್ಕೆ ವಿದ್ಯುತ್ ಸಂಪರ್ಕವಿಲ್ಲ. ಓಡಾಡಲು ರಸ್ತೆ ಇಲ್ಲ. ಅರಣ್ಯದಿಂದ 10 ಕಿಮೀ ಕಾಲುದಾರಿಯಿಂದ ನಡೆದು ಗೋಯರ್ ಗ್ರಾಮದ ಮೂಲಕ ಗೋಟೆಗಾಳಿ ಗ್ರಾಪಂಕ್ಕೆ ಹೋಗಬೇಕಾಗುತ್ತದೆ. ಬೇಸಿಗೆ ಕಾಲದಲ್ಲಿ ಕುಡಿಯುವ ನೀರಿನ ಅಭಾವ. ರಾಜಕೀಯ ಮುಖಂಡರಾಗಲಿ, ಜಿಲ್ಲಾಡಳಿತ ಅಧಿಕಾರಿಗಳಾಗಲಿ ಗ್ರಾಮದ ಸಮಸ್ಯೆ ಆಲಿಸಿ, ಪರಿಹರಿಸಿಲ್ಲ. ಹೀಗಾಗಿ ಗ್ರಾಮ ಸಂಪೂರ್ಣ ನಿರ್ಲಕ್ಷ್ಯಕ್ಕೊಳಗಾಗಿದೆ. ಸರ್ಕಾರದ ಯಾವ ಸೌಲಭ್ಯವೂ ನಮಗೆ ಸಿಗುತ್ತಿಲ್ಲ ಎಂದು ಗ್ರಾಮಸ್ಥರು ಸಾವಂತರ ಮುಂದೆ ಸಮಸ್ಯೆ ತೋಡಿಕೊಂಡರು.
ಮುಖ್ಯಮಂತ್ರಿ ಬಳಿ ನಿಯೋಗ: ಸಮಸ್ಯೆ ಕೇಳಿ ಮಾತನಾಡಿದ ಸಾವಂತ, ಸ್ವಾತಂತ್ರ್ಯ ಬಂದು ಆರು ದಶಕ ಕಳೆದಿದೆ. ಮೂಲಭೂತ ಸೌಕರ್ಯ ಸಿಗದೆ ವಂಚಿತ ಕಮಾರಗಾಂವ ಗ್ರಾಮ ಯಾವುದೇ ಅಭಿವೃದ್ಧಿ ಕಂಡಿಲ್ಲ. ವಿದ್ಯುತ್ ಸಂಪರ್ಕ ಕಲ್ಪಿಸಲು ಸರ್ಕಾರ ವಿಫಲವಾಗಿದೆ. ಇದಕ್ಕೆ ಜಿಲ್ಲಾಡಳಿತ ವೈಫಲ್ಯವೇ ಕಾರಣ. ಗ್ರಾಮಕ್ಕೆ ವಿದ್ಯುತ್ ಸಂಪರ್ಕ, ರಸ್ತೆ ನಿರ್ಮಾಣದ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳನ್ನು ಭೇಟಿಯಾಗುತ್ತೇನೆ. ಆವಶ್ಯಕತೆ ಬಿದ್ದರೆ ಗ್ರಾಮಸ್ಥರ ನಿಯೋಗವನ್ನು  ಮುಖ್ಯಮಂತ್ರಿ ಬಳಿ ಕರೆದುಕೊಂಡು ಹೋಗಿ ಮೂಲ ಸೌಕರ್ಯ ಅಭಿವೃದ್ಧಿ ಬಗ್ಗೆ ಮನವರಿಕೆ ಮಾಡಿ ನ್ಯಾಯ ದೊರಕಿಸಿ ಕೊಡುವುದಾಗಿ ಭರವಸೆ ನೀಡಿದರು. ಈ ಸಂದರ್ಭದಲ್ಲಿ ಜೆಡಿಎಸ್‌ನ ಸುಭಾಷ್ ನಾಯ್ಕ, ಆನಂದು ನಾಯ್ಕ, ದಿಲೀಪ ನಾಯ್ಕ, ಗ್ರಾಮಸ್ಥರಾದ ತಾಂಬಡೋ ವೇಳಿಪ್, ಗುರುದಾಸ್ ವೇಳಿಪ್, ಶಾಂತು ಗಾಂವಕರ, ವಿಠ್ಠಲ್ ಜೆ. ವೇಳಿಪ್, ಲಕ್ಷ್ಮಣ ವೇಳಿಪ್, ಚಂದ್ರು ವೇಳಿಪ್ ಹಾಗೂ ಮಹಿಳೆಯರು ಪಾಲ್ಗೊಂಡಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ನಾಳೆ CJPಯ ತಿರಂಗಾ ಮೆರವಣಿಗೆ ನಡೆಯಬೇಕಿದ್ದ ದೆಹಲಿಯ ಸೆಂಟ್ರಲ್ ಪಾರ್ಕ್ ಅನ್ನು 2 ದಿನ ಮುಚ್ಚಿದ NDMC!

ಕನ್ನಡಿಗರು ಕೊಟ್ಟ ದುಡ್ಡಲ್ಲೇ AR Rahman ತಮ್ಮ ಮೊದಲ ಸ್ಟುಡಿಯೋ ಕಟ್ಟಿದ್ದು: ನಟ ಯಶ್

ದೇಶಕ್ಕೆ ಹೇಗೆ ಬೆಂಕಿ ಹಚ್ಚಬೇಕು ಎಂಬುದನ್ನು ಬಾಂಗ್ಲಾದೇಶ ನಮಗೆ ತೋರಿಸಿಕೊಟ್ಟಿದೆ: ನೇಹಾ ಬೋರಾ ಹೇಳಿಕೆಗೆ ಬಿಜೆಪಿ ಆಕ್ರೋಶ!

Ramayana: 'ರಾಮಾಯಣ'ದ ರನ್ ಟೈಮ್ ಮೂರು ಗಂಟೆಗೂ ಹೆಚ್ಚು; ಅಮೆರಿಕದಲ್ಲಿ 'PG-13' ರೇಟಿಂಗ್!

ದೆಹಲಿಯ ರಾಮಲೀಲಾದಲ್ಲಿ ಈ ಬಾರಿ ರಾವಣನ ಜೊತೆಗೆ 30 ಅಡಿ ಎತ್ತರದ ಕಾಕ್ರೋಚ್ ಪ್ರತಿಕೃತಿ ದಹನ!