ಉತ್ತರ ಕನ್ನಡ

ಅಕ್ರಮ ಮದ್ಯ: ಆರೋಪಿಯೊಂದಿಗೆ ವಾಹನ ವಶ

ಶಿರಸಿ: ಅಬಕಾರಿ ಇಲಾಖೆ ಅಧಿಕಾರಿಗಳ ಚುರುಕಿನ ಕಾರ್ಯಾಚರಣೆಯಿಂದಾಗಿ ಸೋಮವಾರ ಮಧ್ಯಾಹ್ನ ಗೋವಾದಿಂದ ಅಕ್ರಮವಾಗಿ ಸಾಗಿಸುತ್ತಿದ್ದ ಮದ್ಯ, ಆರೋಪಿತರೊಂದಿಗೆ ವಾಹನವನ್ನು ವಶಪಡಿಸಿಕೊಂಡ ಘಟನೆ ನಡೆದಿದೆ.
ಖಚಿತ ಮಾಹಿತಿ ಮೇರೆಗೆ ಅಬಕಾರಿ ಇಲಾಖೆ ನಿರೀಕ್ಷಕ ಡಿ.ಟಿ. ನಾಯ್ಕ, ಉಪ ನಿರೀಕ್ಷಕ ವಿಜಯಕುಮಾರ್, ಸುಧೀರಕುಮಾರ್ ಅವರನ್ನೊಳಗೊಂಡ ತಂಡ ಶಿರಸಿ ಯಲ್ಲಾಪುರ ರಸ್ತೆಯ ಸೋಂದಾ ಕ್ರಾಸ್ ಬಳಿ ಕಾರ್ಯಾಚರಣೆ ನಡೆಸಿ ಗೋವಾ ನೋಂದಣಿ ಹೊಂದಿದ ಜಿ.ಎ 02, ಜೆ 6004 ನಂಬರಿನ ಟಾಟಾ ಇಂಡಿಕಾ ಕಾರನ್ನು ಹಿಡಿದು ಚಾಲಕನನ್ನು ವಿಚಾರಣೆಗೊಳಪಡಿಸಿದಾಗ ಅಕ್ರಮ ಮದ್ಯ ಸಾಗಣೆ ಬೆಳಕಿಗೆ ಬಂದಿತು. ರು. 10850 ಮೌಲ್ಯದ ವಿವಿಧ ಬ್ರಾಂಡ್‌ಗಳ 38 ಲೀಟರ್ ಅಕ್ರಮ ಮದ್ಯ ವಶಪಡಿಸಿಕೊಳ್ಳಲಾಗಿದೆ. ವಾಹನದ ಮೊತ್ತವನ್ನು ರು. 2 ಲಕ್ಷ ಎಂದು ಅಂದಾಜಿಸಲಾಗಿದೆ. ಅಕ್ರಮ ಮದ್ಯವನ್ನು ಹಾವೇರಿ ಜಿಲ್ಲೆಯ ಚಿಕ್ಕೇರೂರಿನವರಾದ ಸಿರಾಜ್ ಹನೀಫ್ ಸಾಬ್ ಬಳ್ಳಾರಿ, ಜಖ್ರಿಯಾ ಹನೀಫ್ ಸಾಬ್ ಬಳ್ಳಾರಿ ಎನ್ನುವ ಆರೋಪಿತರು ಗೋವಾದಿಂದ ಯಲ್ಲಾಪುರ-ಶಿರಸಿ ಮಾರ್ಗವಾಗಿ ಚೆಕ್ಕೇರೂರಿಗೆ ಸಾಗಿಸುವ ಸಂದರ್ಭದಲ್ಲಿ ಅಬಕಾರಿ ಇಲಾಖೆ ಅಧಿಕಾರಿಗಳ ಕೈಗೆ ಸಿಕ್ಕಿಹಾಕಿಕೊಂಡಿದ್ದಾರೆ. ಉಪನಿರೀಕ್ಷಕ ವಿಜಯಕುಮಾರ ಪಿ.ಎಸ್. ಆರೋಪಿತರನ್ನು ಬಂಧಿಸಿ ವಾಹನವನ್ನು ಮುಟ್ಟುಗೋಲು ಹಾಕಿಕೊಂಡು, ಪ್ರಕರಣ ದಾಖಲಿಸಿಕೊಂಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ನಾಳೆ CJPಯ ತಿರಂಗಾ ಮೆರವಣಿಗೆ ನಡೆಯಬೇಕಿದ್ದ ದೆಹಲಿಯ ಸೆಂಟ್ರಲ್ ಪಾರ್ಕ್ ಅನ್ನು 2 ದಿನ ಮುಚ್ಚಿದ NDMC!

ಕನ್ನಡಿಗರು ಕೊಟ್ಟ ದುಡ್ಡಲ್ಲೇ AR Rahman ತಮ್ಮ ಮೊದಲ ಸ್ಟುಡಿಯೋ ಕಟ್ಟಿದ್ದು: ನಟ ಯಶ್

ದೇಶಕ್ಕೆ ಹೇಗೆ ಬೆಂಕಿ ಹಚ್ಚಬೇಕು ಎಂಬುದನ್ನು ಬಾಂಗ್ಲಾದೇಶ ನಮಗೆ ತೋರಿಸಿಕೊಟ್ಟಿದೆ: ನೇಹಾ ಬೋರಾ ಹೇಳಿಕೆಗೆ ಬಿಜೆಪಿ ಆಕ್ರೋಶ!

Ramayana: 'ರಾಮಾಯಣ'ದ ರನ್ ಟೈಮ್ ಮೂರು ಗಂಟೆಗೂ ಹೆಚ್ಚು; ಅಮೆರಿಕದಲ್ಲಿ 'PG-13' ರೇಟಿಂಗ್!

ದೆಹಲಿಯ ರಾಮಲೀಲಾದಲ್ಲಿ ಈ ಬಾರಿ ರಾವಣನ ಜೊತೆಗೆ 30 ಅಡಿ ಎತ್ತರದ ಕಾಕ್ರೋಚ್ ಪ್ರತಿಕೃತಿ ದಹನ!