ದಾಂಡೇಲಿ: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕಾರ್ಮಿಕ ಸಂಘಟನೆಗಳು ಕರೆ ನೀಡಿರುವ ಎರಡು ದಿನಗಳ ಬಂದ್ಗೆ ದಾಂಡೇಲಿಯಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಆಟೋ ಚಾಲಕರು ಮುಷ್ಕರದಲ್ಲಿ ಪಾಲ್ಗೊಂಡರು. ಬೆಳಗ್ಗೆ 8ರ ವರೆಗೆ ಬಸ್ ಸಂಚಾರ ಇತ್ತು, ಕೆಲ ಅಂಗಡಿಗಳು ತೆರೆದಿದ್ದವು. 10 ಘಂಟೆ ಬಳಿಕ ಅವುಗಳೂ ಬಂದ್ ಆದವು. ಶಾಲೆ ಕಾಲೇಜುಗಳು ಬೆಳಗ್ಗೆ 10ರ ವರೆಗೆ ಕಾರ್ಯ ನಿರ್ವಹಿಸಿದವು. ಕಾರ್ಮಿಕ ಮುಖಂಡರು ನಗರದ ಬಸ್ ನಿಲ್ದಾಣ ಮುಂಭಾಗದಲ್ಲಿ ಮಾನವ ಸರಪಳಿ ನಿರ್ಮಿಸಿ ಘೋಷಣೆಗಳನ್ನು ಕೂಗಿದರು.
ಕೇಂದ್ರ ಸರ್ಕಾರದ ಆರ್ಥಿಕ ನೀತಿಯನ್ನು ಖಂಡಿಸಲಾಯಿತು. ಪ್ರಮುಖ ಸ್ಥಳಗಳಲ್ಲಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.