ಉತ್ತರ ಕನ್ನಡ

ಮತದಾರರ ಜಾಗೃತಿ ಜಾಥಾಗೆ ಚಾಲನೆ

ಕಾರವಾರ:  ಎಸ್.ಆರ್. ಹಿರೇಮಠ ನೇತೃತ್ವದಲ್ಲಿ ಜನ ಸಂಗ್ರಾಮ ಪರಿಷತ್ ಕಾರವಾರದಿಂದ ಬಳ್ಳಾರಿ ತನಕ ನಡೆಸಲಿರುವ ಮತದಾರರ ಜಾಗೃತಿ ಜ ಾಥಾಕ್ಕೆ ಕಾರವಾರದಲ್ಲಿ ಮಂಗಳವಾರ ಚಾಲನೆ ನೀಡಲಾಯಿತು.
ನಗರದ ಮಿತ್ರ ಸಮಾಜದ ಆವರಣದಿಂದ ಬೆಳಗ್ಗೆ 9.30ಕ್ಕೆ ಜಾಥಾ ಆರಂಭವಾಯಿತು. ಅನಾರೋಗ್ಯದ ಹಿನ್ನೆಲೆಯಲ್ಲಿ ಎಸ್.ಆರ್. ಹಿರೇಮಠ ಜಾಥಾ ಆರಂಭದ ವೇಳೆ ಉಪಸ್ಥಿತರಿರಲಿಲ್ಲ. ಉದ್ಯಮಿ ಬಿ.ಜಿ. ಮೋಹನ್ ಮಾತನಾಡಿ, ಮತದಾನ ಪ್ರಬಲವಾದ ಅಸ್ತ್ರವಾಗಿದೆ. ಇದನ್ನು ಬಳಸಿ, ಪ್ರಾಮಾಣಿಕರು ಹಾಗೂ ನಿಜವಾದ ಸಮಾಜ ಸೇವಕರನ್ನು ಆಯ್ಕೆ ಮಾಡಬೇಕಾದ ಮಹತ್ತರವಾದ ಜವಾಬ್ದಾರಿ ನಮ್ಮ ಮೇಲಿದೆ. ಯಾವುದೆ ಆಸೆ, ಆಮಿಷಗಳಿಗೆ ಬಲಿಯಾಗದೆ ಮತದಾನ ಮಾಡುವ ಬಗ್ಗೆ ಈ ಜಾಥಾದ ಮೂಲಕ ಮತದಾರರಲ್ಲಿ ಜಾಗೃತಿ ಮೂಡಿಸಲಾಗುವುದು ಎಂದು ಹೇಳಿದರು. ಮಿತ್ರ ಸಮಾಜದಿಂದ ಕಾಲ್ನಡಿಗೆಯಲ್ಲಿ ನಗರದಲ್ಲಿ ಸಂಚರಿಸಿ, ವಾಹನದ ಮೂಲಕ ಜಾಥಾ ಹೊರಟಿತು.
ಅದಿರು ಕಂಪನಿಗಳಿಂದ ಮೀನುಗಾರರು, ಸಾರ್ವಜನಿಕರು ನಾಶವಾಗಿದ್ದಾರೆ. ಭ್ರಷ್ಟರೇ ಸಾರ್ವಜನಿಕ ಜೀವನ ಬಿಟ್ಟು ಹೋಗಿ, ಅಕ್ರಮ ಗಣಿಗಾರಿಕೆಯಿಂದ ಗಳಿಸಿದ ಹಣವನ್ನು ಮರಳಿಸಬೇಕು. ಅರಣ್ಯ ಹಾಗೂ ಮನುಕುಲವನ್ನು ರಕ್ಷಿಸಬೇಕು ಎಂಬ ಫಲಕಗಳನ್ನು ಜಾಥಾದಲ್ಲಿ ಪಾಲ್ಗೊಂಡಿದ್ದವರು ಹಿಡಿದು, ಗಣಿಗಾರಿಕೆ, ಭ್ರಷ್ಟಾಚಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.
ಜ. 25ರ ತನಕ ಈ ಜಾಥಾ ನಡೆಯಲಿದ್ದು, ಧಾರವಾಡ, ಬೆಳಗಾವಿ, ಬಾಗಲಕೋಟ, ಇಳಕಲ್, ಕುಷ್ಟಗಿ, ಕಂಪ್ಲಿ ಮೂಲಕ ಬಳ್ಳಾರಿಯಲ್ಲಿ ಮುಕ್ತಾಯವಾಗಲಿದೆ. ಗ್ರಾಮ ಗಣರಾಜ್ಯ ವೇದಿಕೆಯ ಆರ್.ಬಿ. ಪಾಟೀಲ, ಸಮಾಜ ಪರಿವರ್ತನಾ ಸಮುದಾಯದ ವೀರಣ್ಣಾ ಜ್ಯೋತಿ, ಬಳ್ಳಾರಿ ಜನ ಸಂಗ್ರಾಮ ಪರಿಷತ್‌ನ ಎಸ್. ಪನ್ನರಾಜ, ಭಾವನಾ ಪಾಟೀಲ್ ಮತ್ತಿತರರು ಇದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಸ್ಟಿಂಗ್‌ ಆಪರೇಷನ್‌ ಪ್ರಕರಣ: ಮುಂದಿನ ನಿರ್ಧಾರ ಸಿಎಂ ಡಿಕೆ ಶಿವಕುಮಾರ್`ಗೆ ಬಿಟ್ಟ ಸಂಪುಟ, ಸಾಕ್ಷ್ಯಾಧಾರ ಮೇಲೆ ಮುಂದಿನ ಕ್ರಮ!

15 ವರ್ಷದ ಹಳೆ ವಿಡಿಯೋ ಅದಂತೆ, ರಾಜಕೀಯ ತೆವಲಿಗೆ ಮಾಡುತ್ತಿದ್ದಾರೆ: ಬಿಕೆ ಹರಿಪ್ರಸಾದ್ ಗರಂ

'ಕುಟುಂಬದ ಕನಸು ನನಸು': ‘ಜೈಲರ್ 2’ ಬಿಡುಗಡೆ ಬೆನ್ನಲ್ಲೇ ನಟಿ ಮೇಘನಾ ರಾಜ್ ಮಾತು!

ನೀಲಿ ಡ್ರಮ್‌ ಪ್ರಕರಣ: ಮರಣದಂಡನೆ ಶಿಕ್ಷೆ ಪ್ರಕಟ ಬಳಿಕ ಊಟ-ನಿದ್ರೆ ಬಿಟ್ಟು ಕಂಗಾಲಾಗಿರುವ ಮುಸ್ಕಾನ್-ಸಾಹಿಲ್!

'ಬಲಿತ ದಲಿತ'ನೇ, ನಿಮಗೆ, ನಿಮ್ಮಪ್ಪನಿಗೆ ಇನ್ನೆಷ್ಟು ವರ್ಷ ಮೀಸಲು ಕ್ಷೇತ್ರಗಳು ಬೇಕು?: ಖರ್ಗೆ ವಿರುದ್ಧ ಕುಮಾರಸ್ವಾಮಿ ಕೆಂಡಾಮಂಡಲ