ಉತ್ತರ ಕನ್ನಡ

ಸತೀಶ ಸೈಲ್ ವಿರುದ್ಧ ಲೋಕಾ ದೂರು

Mainashree

ಕಾರವಾರ:  ಬೇಲೆಕೇರಿ ಅದಿರು ಹಗರಣಕ್ಕೆ ಸಂಬಂಧಿಸಿದಂತೆ ಮುಖ್ಯ ಆರೋಪಿಯಾಗಿರುವ ಸತೀಶ ಸೈಲ್ ವಿರುದ್ಧ ಲೋಕಾಯುಕ್ತ ಹಾಗೂ ಸಿಬಿಐಗೆ ದೂರು ನೀಡಲು ಸಿದ್ಧತೆ ನಡೆಸುತ್ತಿರುವುದಾಗಿ ಮೀನುಗಾರಿಕೆ ಸಚಿವ ಆನಂದ ಅಸ್ನೋಟಿಕರ್ ಹೇಳಿದ್ದಾರೆ.
ನಗರದಲ್ಲಿ ಬುಧವಾರ ರಾತ್ರಿ ಸುದ್ದಿಗೋಷ್ಠಿ ನಡೆಸಿದ ಅವರು, ಕಾರವಾರ-ಅಂಕೋಲಾ ಕ್ಷೇತ್ರ ಕಳಂಕ ರಹಿತವಾಗಿರಬೇಕು. ಈ ಹಿನ್ನೆಲೆಯಲ್ಲಿ ತಾವು ಸೈಲ್ ವಿರುದ್ಧ ದೂರು ನೀಡಲು ಮುಂದಾಗಿದ್ದಾಗಿ ಹೇಳಿದರು. ನಗರಸಭೆಗೆ ನೂತನವಾಗಿ ಆಯ್ಕೆಯಾದ ನಾಲ್ವರು ಸದಸ್ಯರು ಬಿಜೆಪಿಗೆ ಬೆಂಬಲ ಸೂಚಿಸಿದ್ದಾರೆ. ಅವರಿಗೆ ಕಾಂಗ್ರೆಸ್‌ನವರು ಆಮಿಷ ಒಡ್ಡಲು, ಬೆದರಿಕೆ ಹಾಕುವ ಕೃತ್ಯದಲ್ಲಿ ತೊಡಗಿದ್ದಾರೆ. ಇದು ಕೊನೆಗೊಳ್ಳಬೇಕು. ಈ ಸದಸ್ಯರು ಬೆಂಬಲ ಸೂಚಿಸಿದ್ದರಿಂದ ಕಾರವಾರ ನಗರಸಭೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲಿದೆ. ಅಂಕೋಲಾದಲ್ಲೂ ಬಿಜೆಪಿ ಅಧಿಕಾರಕ್ಕೇರುವುದು ನಿಶ್ಚಿತ ಎಂದು ಅವರು ಹೇಳಿದರು. ನಗರಸಭೆ ಮಾಜಿ ಅಧ್ಯಕ್ಷ ಗಣಪತಿ ಉಳ್ವೇಕರ, ಪಕ್ಷೇತರ ಸದಸ್ಯರಾದ ರವಿ ಕುಡ್ತಲಕರ, ಪಾಂಡುರಂಗ ರೇವಂಡಿಕರ, ಪ್ರಶಾಂತ ಹರಿಕಂತ್ರ, ಪ್ರೇಮಾನಂದ ಗುನಗ ಮತ್ತಿತರರು ಇದ್ದರು.
 

SCROLL FOR NEXT