ಭಟ್ಕಳ: ಇಲ್ಲಿನ ಮುಠ್ಠಳ್ಳಿ ರೈಲ್ವೆ ಬ್ರಿಜ್ ಬಳಿ ವ್ಯಕ್ತಿ ಶವ ಪತ್ತೆಯಾಗಿದ್ದು, ಕಲ್ಲಿನಿಂದ ಜಜ್ಜಿ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಮೃತನನ್ನು ಮಹಮ್ಮದ ಅಕ್ರಂ ಅಬ್ದುಲ್ ಸಮದ್ (32) ಎಂದು ಗುರುತಿಸಲಾಗಿದೆ. ಈತನ ತಲೆ ಮೇಲೆ ಕಲ್ಲು ಹಾಕಿ ಕೊಲೆ ಮಾಡಿರಬಹುದು ಎನ್ನಲಾಗಿದ್ದು, ಭಟ್ಕಳ ಸಿಪಿಐ ಪ್ರಶಾಂತ ನಾಯಕ ಹಾಗೂ ಗ್ರಾಮಾಂತರ ಠಾಣಾ ಪಿಎಸ್ಐ ಮಂಜುನಾಥ ಸ್ಥಳಕ್ಕೆ ಭೇಟಿ ನೀಡಿ ಶವದ ಪರಿಶೀಲನೆ ನಡೆಸಿದರು. ಈ ಸಂಬಂಧ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವೃದ್ಧೆ ಆಭರಣ ಕಳವು
ಹೊನ್ನಾವರ: ನಿದ್ರಿಸುತ್ತಿದ್ದ ವೃದ್ಧೆಯ ಮೇಲೆ ಹಲ್ಲೆ ಮಾಡಿ, ಆಕೆಯ ಕೈಬಳೆ, ಸರ ಹಾಗೂ ಸೊಸೆಯ ಕೊರಳಲ್ಲಿದ್ದ ಸರ ಸೇರಿದಂತೆ ರು. 1.25 ಲಕ್ಷ ಮೌಲ್ಯದ ಆಭರಣ ದೋಚಿದ ಘಟನೆ ತಾಲೂಕಿನ ಚಂದಾವರದ ನೂರಾನಿ ಮೊಹಲ್ಲಾದಲ್ಲಿ ಸೋಮವಾರ ನಸುಕಿನ ವೇಳೆ ನಡೆದಿದೆ. ಈ ಕುರಿತು ಕೈರುನ್ನೀಸಾ ಹಮ್ಜಾ ಸಾಬ್ ಗನಿ (76) ಪೊಲೀಸರಿಗೆ ಈ ಕುರಿತು ದೂರು ನೀಡಿದ್ದಾರೆ.