ಉತ್ತರ ಕನ್ನಡ

ಅಡಕೆ ಆಮದು ತಡೆಯಲು ನಿರ್ಣಯ

ಶಿರಸಿ: ಅಡಕೆ ದರ ಏರಿಕೆಯಾಗುತ್ತಿದೆ. ಇದು ಸ್ವಾಗತಾರ್ಹವಾಗಿದೆ. ಇದಕ್ಕೆ ಪೂರಕವಾಗಿ ವಿದೇಶದಿಂದ ಆಮದಾಗುವ ಅಡಕೆಯನ್ನು ಸಂಪೂರ್ಣ ನಿಷೇಧಿಸಿ ಅಡಕೆ ಬೆಳೆಗಾರರಿಗೆ ಅನುಕೂಲ ಮಾಡಿಕೊಡುವಂತೆ ಹಾಗೂ ಅಡಕೆ ಬೆಲೆ ಸ್ಥಿರತೆ ಕಾಪಾಡುವಂತೆ ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯಲು ಶನಿವಾರ ನಗರದ ತಾಪಂ ಅಬ್ದುಲ್ ನಜೀರ್‌ಸಾಬ್ ಸಭಾಂಗಣದಲ್ಲಿ ನಡೆದ ತಾಲೂಕು ಪಂಚಾಯ್ತಿ ಪ್ರಗತಿ ಪರಿಶೀಲನಾ ಸಭೆ ನಿರ್ಧರಿಸಿದೆ.
ವಿಷಯ ಪ್ರಸ್ತಾಪಿಸಿದ ಸದಸ್ಯ ಸಂತೋಷ ಗೌಡರ್, ಪ್ರಸ್ತುತ ಅಡಕೆ ಧಾರಣೆಯಿಂದ ಸರ್ಕಾರ ಅಡಕೆ ಬೆಳೆಗಾರರ ಪರ ತಪ್ಪು ಭಾವನೆ ಹೊಂದಬಾರದು. ಒಂದೊಮ್ಮೆ ಅಡಕೆ ದರ ಹಿಮ್ಮುಖವಾದರೆ ಹೆಚ್ಚಿರುವ ಕೂಲಿ ದರದಿಂದ ರೈತರು ಕಂಗಾಲಾಗುವ ಪರಿಸ್ಥಿತಿ ಬರುತ್ತದೆ. ಬೆಲೆ ಸ್ಥಿರತೆಯ ಕುರಿತು ಸರ್ಕಾರ ಗಮನ ನೀಡಬೇಕು ಎಂದರು.
ಮಳೆ ಕೊರತೆಯಿಂದ ಬತ್ತ ಬಿತ್ತನೆಗೆ ಅಡ್ಡಿಯಾಗಿದೆ. ಬರಗಾಲದ ಜತೆಗೆ ಬಿತ್ತನೆ ಬೀಜದ ಕೊರತೆ ಇದೆ. ಸರ್ಕಾರ ರೈತರಿಗೆ ಉಚಿತವಾಗಿ ಬಿತ್ತನೆ ಬೀಜ ವಿತರಿಸಬೇಕು ಎಂದು ಪತ್ರ ಬರೆಯಲು ಸಭೆ ನಿರ್ಣಯಿಸಿತು.
ನಾಯಕರ ವೈಫಲ್ಯ: ಶಿರಸಿಗೆ ಮಂಜೂರಾಗಿರುವ ಡಯಾಲಿಸಿಸ್ ಘಟಕ ಇಲ್ಲಿಯೇ ಸ್ಥಾಪನೆ ಆಗದಿದ್ದರೆ ರಾಜ್ಯ ಪ್ರತಿನಿಧಿಸುವ ಜಿಲ್ಲಾ ನಾಯಕರು ದುರ್ಬಲರೆಂದು ಭಾವಿಸಬೇಕಾಗುತ್ತದೆ. ಘಟಕವನ್ನು ಶಿರಸಿಯಲ್ಲೇ ಆರಂಭಿಸಲು ಕ್ರಮ ಕೈಗೊಳ್ಳುವಂತೆ ಸದಸ್ಯ ಗುರುಪಾದ ಹೆಗಡೆ ಆಗ್ರಹಿಸಿದರು.
ವಾನಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ 5 ಗ್ರಾಮಗಳಿಗೆ ಬಸ್ ಸೌಲಭ್ಯ ಸ್ಥಗಿತಗೊಂಡಿದ್ದು, ಅನಾರೋಗ್ಯದ ಸಮಸ್ಯೆ ಎದುರಾದರೆ ಜನರು ಬವಣೆ ಪಡುವಂತಾಗಿದೆ. ಕಕ್ಕಳ್ಳಿಯಲ್ಲಿ ಆರೋಗ್ಯ ಕೇಂದ್ರವಿದ್ದರೂ ವಾರಕ್ಕೊಮ್ಮೆ ವೈದ್ಯರು ಭೇಟಿ ನೀಡುತ್ತಾರೆ ಎಂದು ಸದಸ್ಯ ದತ್ತಾತ್ರೇಯ ವೈದ್ಯ ಆಗ್ರಹಿಸಿದರು.
ಮೇವು ಅಭಿವೃದ್ಧಿ ಹಿನ್ನೆಲೆಯಲ್ಲಿ 1751 ಕಿರು ಮೇವು ಬೀಜ ಪೊಟ್ಟಣಗಳನ್ನು ಹಂಚಲಾಗಿದೆ. ಪ್ರತಿ ಗ್ರಾಪಂ ಮಟ್ಟದಲ್ಲಿ 20 ಬಿಪಿಎಲ್ ಫಲಾನುಭವಿಗಳಿಗೆ ಕೋಳಿ ಸಾಕಣೆ ಯೋಜನೆಯಡಿ ಈ ತಿಂಗಳ ಅಂತ್ಯದೊಳಗೆ ಕೋಳಿಮರಿ ವಿತರಿಸುವ ವ್ಯವಸ್ಥೆ ಮಾಡಲಾಗುತ್ತದೆ ಎಂದು ಪಶುಸಂಗೋಪನಾ ಇಲಾಖೆ ಅಧಿಕಾರಿ ತಿಳಿಸಿದರು.
ತಾಲೂಕಿನಲ್ಲಿ ಮಂಜೂರು ಇರುವ 15 ಪಶುವೈದ್ಯ ಹುದ್ದೆಗಳಲ್ಲಿ 9 ಖಾಲಿ ಇವೆ. ಬನವಾಸಿ, ಮಾಳಂಜಿ, ಹುಲೇಕಲ್, ಸೋಂದಾದಲ್ಲಿ ವೈದ್ಯ ಹುದ್ದೆ ಖಾಲಿ ಇದೆ ಎಂದು ಅವರು ತಿಳಿಸಿದರು. ತಾಪಂ ಅಧ್ಯಕ್ಷೆ ಶೈಲಜಾ ನಾಯ್ಕ, ಜಿಲ್ಲಾ ಪಂಚಾಯ್ತಿ ಸದಸ್ಯೆ ಶೋಭಾ ನಾಯ್ಕ ಉಪಸ್ಥಿತರಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಬಲಿತ ದಲಿತ'ನೇ, ನಿಮಗೆ, ನಿಮ್ಮಪ್ಪನಿಗೆ ಇನ್ನೆಷ್ಟು ವರ್ಷ ಮೀಸಲು ಕ್ಷೇತ್ರಗಳು ಬೇಕು?: ಖರ್ಗೆ ವಿರುದ್ಧ ಕುಮಾರಸ್ವಾಮಿ ಕೆಂಡಾಮಂಡಲ

ದೆಹಲಿಯ ಕನ್ನಾಟ್ ಪ್ಲೇಸ್‌ನಲ್ಲಿ ಅ.16ರ CJPಯ ಪ್ರತಿಭಟನೆಗೆ ತಡೆ ನೀಡಲು ಹೈಕೋರ್ಟ್ ನಕಾರ!

ಕಾಕ್ರೋಚ್ ಜನತಾ ಪಾರ್ಟಿ, ಕಾಂಗ್ರೆಸ್ ಎರಡೂ ಒಂದೇ; ಇಲ್ಲಿ ನಿಮ್ಮನ್ನು ಯಾರೂ ಬಂಧಿಸಲ್ಲ: ಪ್ರಿಯಾಂಕ್ ಖರ್ಗೆ ಸ್ಫೋಟಕ ಹೇಳಿಕೆ!

ಪೊಲೀಸ್ ಕಮಿಷನರ್ ಕಚೇರಿ ಮುಂದೆ HDK ಧರಣಿ: ಸ್ಟಿಂಗ್‌ ರೂವಾರಿಯ ಬಂಧನಕ್ಕೆ ಆಗ್ರಹ; ಎರಡು ದಿನಗಳ ಡೆಡ್‌ಲೈನ್‌!

Indian Stock Market: ಕೊನೆಗೂ ಪುಟಿದಿದ್ದ ಭಾರತೀಯ ಷೇರು ಮಾರುಕಟ್ಟೆ, ಸೆನ್ಸೆಕ್ಸ್ ದಾಖಲೆಯ ಏರಿಕೆ