ಭಟ್ಕಳ: ಆರೋಗ್ಯ ಸಮಸ್ಯೆಯಿಂದ ನೊಂದ ವ್ಯಕ್ತಿಯೋರ್ವ ಚಲಿಸುತ್ತಿದ್ದ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡ ಘಟನೆ ಪುರವರ್ಗ ರೈಲ್ವೆ ಟ್ರಾಕ್ ಬಳಿ ಶನಿವಾರ ಮಧ್ಯಾಹ್ನ ನಡೆದಿದೆ. ಆತ್ಮಹತ್ಯೆ ಮಾಡಿಕೊಂಡವನನ್ನು ರಾಘವೇಂದ್ರ ಶ್ರೀಧರ ಜೋಗಿ (32) ಹದ್ಲೂರು ಎಂದು ಗುರುತಿಸಲಾಗಿದೆ. ಈತ ಕಳೆದ ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದು ಅದನ್ನೇ ಮನಸ್ಸಿಗೆ ಹಚ್ಚಿಕೊಂಡು ಮುಂಬಯಿಯಿಂದ ಮಂಗಳೂರಿಗೆ ಹೋಗುತ್ತಿದ್ದ ಸಿಎಸ್ಟಿಎಂ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಮರ ಬಿದ್ದು ಕೊಟ್ಟಿಗೆ ಹಾನಿ
ಸಿದ್ದಾಪುರ: ಭಾರೀ ಗಾಳಿ-ಮಳೆಗೆ ತಾಲೂಕಿನ ಹಾರ್ಸಿಕಟ್ಟಾದಲ್ಲಿ ದೊಡ್ಡ ಗಾತ್ರದ ಬೂರಲು ಮರ ಬಿದ್ದು, ರವಿ ಎಂ. ನಾಯ್ಕ ಅವರ ಕೊಟ್ಟಿಗೆ ಮನೆ ನಾಶವಾಗಿದೆ. ಮರ ಬೀಳುವ ಮುನ್ಸೂಚನೆ ಅರಿತ ಮನೆಯವರು ಕೊಟ್ಟಿಗೆಯಲ್ಲಿದ್ದ ಮೂರು ಆಕಳನ್ನು ಹೊರಗೆ ತಂದು ರಕ್ಷಿಸಿದರು.