ಜೆ.ಪಿ. ನಾಗರಾಜ, ದಾವಣಗೆರೆ, 9901193811
ಕೆಲ ಹುಡುಗಿಯರು ತುಂಬಾ ಉದಾರಿಗಳಾಗಿರುತ್ತಾರಲ್ಲ?
ಖರ್ಚು ಮಾಡುವವರು ಬೇರೆಯವರಾಗಿದ್ದಾಗ!
ರಮೇಶ ಭಟ್ ಆವರ್ಸೆ, ಮೈಸೂರು, 9164276058
ಎಲ್ಲಾ ಪರೀಕ್ಷೆಗಳನ್ನು 'ಡೇ'ಟೈಮಲ್ಲೇ ಯಾಕ್ ಇಡ್ತಾರೆ?
ಒಂದು ಪರೀಕ್ಷೆ ನೈಟಲ್ಲೇ ಇರುತ್ತಲ್ಲಾ ಭಟ್ರೇ!
ಕೆಲವರ ಮನೆ ಮುಂದೆ 'ನಾಯಿಗಳಿವೆ ಎಚ್ಚರಿಕೆ' ಎಂದು ಬೋರ್ಡ್ ಹಾಕಿರುತ್ತಾರಲ್ಲ ಯಾಕೆ?
ಒಂದು ಮನೆಯ ಮುಂದೆ ನಾಯಿ ಪರವಾಗಿಲ್ಲ, ಮಾಲಿಕರಿಂದ ಎಚ್ಚರವಿರಲಿ ಎಂತ ಬೋರ್ಡ್ ಹಾಕಿದ್ದರು!
ಆರೀಫ್ (ಅಪ್ಪು), ದಾವಣಗೆರೆ, 9964280609
ಚಿತ್ರನಟಿ ರಮ್ಯಾಳಿಗೆ ನೀರ್ದೋಸೆ ಬೇಡವೆಂದರೆ ನಮ್ ದಾವಣಗೆರೆ ಬೆಣ್ಣೆದೋಸೆ ಬೇಕೇನೋ ಕೇಳಿ ಹೇಳ್ತೀರಾ?
ಅವರಿಗೆ 'ಕೈ'ನಲ್ಲಿ ತಟ್ಟಿರೋ ರೊಟ್ಟಿನೇ ಬೇಕಂತೆ!
ಓಂ ಚನ್ನೇಶ್, ಅರಬಿಳಚಿಕ್ಯಾಂಪ್, ಭದ್ರಾವತಿ, 8861404122
ಪ್ರೇಮಿಗಳಿಬ್ಬರು ಚುಂಬಿಸುವಾಗ ತಂತಾನೆ
ಕಣ್ಣುಗಳು ಮುಚ್ಚಿಕೊಳ್ತಾವಲ್ಲ?
ಕಣ್ಮುಚ್ಚಿಕೊಂಡು ಮುತ್ತು ಕೊಟ್ರೆ ಜಗತ್ತಿಗೆ
ಕಾಣಲ್ಲ ಎಂಬ ನಂಬಿಕೆಯಿಂದ
- ಬಾಣಭಟ್ಟ