ಸಂಪಾದಕೀಯ

ಆಕೆಯನ್ನು ಮೊದಲು ಕೆಲಸದಿಂದ ಬಿಡುಗಡೆಗೊಳಿಸಿ

ಜಾನ್ ಎಫ್.ಕೆನಡಿ ಕೊಲೆಯಾದ ನಂತರ ಲಿಂಡನ್ ಬಿ.ಜಾನ್ಸನ್ ಅಮೆರಿಕದ ಅಧ್ಯಕ್ಷನಾಗಿ ಸೇವೆ ಸಲ್ಲಿಸುತ್ತಿದ್ದ ಸಮಯ. ಆಗ ಭಾರತದ ರಾಯಭಾರಿಯಾಗಿ ಜಾನ್ ಕೆನೆತ್ ಕಾರ್ಯನಿರ್ವಹಿಸುತ್ತಿದ್ದರು. ಅವರ ಕಚೇರಿಯಲ್ಲಿ ಸ್ಟೆನೋ ಮತ್ತು ಆಪ್ತಕಾರ್ಯದರ್ಶಿಯಾಗಿದ್ದವರು ಎಮಿಲಿ ಎಂಬ ಮಹಿಳೆ. ದಕ್ಷತೆ ಮತ್ತು ಪ್ರಾಮಾಣಿಕತೆಗೆ ಇನ್ನೊಂದು ಹೆಸರೇ ಅವಳಾಗಿದ್ದಳು. ರಾಯಭಾರಿ ಜಾನ್ ಕೆನೆತ್ರ ಅಚ್ಚುಮೆಚ್ಚಿನ ನೌಕರ ಳಾಗಿ, ನಿರ್ವಹಿಸಿದ ಯಾವುದೇ ಕೆಲಸವನ್ನು ಅಚ್ಚುಕಟ್ಟಾಗಿ ಮಾಡುತ್ತಿದ್ದ ಅವಳ ಕಾರ್ಯ ವೈಖರಿ ಶ್ಲಾಘನೆಗೆ ಗುರಿಯಾಗಿತ್ತು. ಒಮ್ಮೆ ಜಾನ್ಸನ್ ಕಚೇರಿಗೆ ಬಂದಾಗ ಅವರಿಗೆ ತುಂಬಾ ಆಯಾಸವಾಗಿತ್ತು. ತಲೆನೋವು ಬೇರೆ. ಅವರಿಗೆ ಕೆಲಕಾಲವಾದರೂ ವಿಶ್ರಾಂತಿ ತೆಗೆದುಕೊಳ್ಳಬೇಕೆಂಬ ಬಯಕೆಯಾಯಿತು. ಎಂದಿನ ಚಟುವಟಿಕೆ ಇರಲಿಲ್ಲ. ಹೀಗಾಗಿ ಎಮಿಲಿಯನ್ನು ಕರೆದು, ತಾನು ನಾಲ್ಕುಗಂಟೆಯವರೆಗೆ ವಿಶ್ರಾಂತಿ ತೆಗೆದುಕೊಳ್ಳ ಬೇಕಾಗಿರುವುದರಿಂದ ಯಾವುದಾದರೂ ದೂರವಾಣಿ ಕರೆ ಬಂದರೆ ಅದನ್ನು ತಮಗೆ ಸಂಪರ್ಕಿಸಬಾರದೆಂದೂ. ಏನಾದರೂ ಸಂದೇಶವಿದ್ದರೆ, ಅದನ್ನು ಬರೆದಿಟ್ಟುಕೊಂಡು ಆಮೇಲೆ ತಮಗೆ ತಿಳಿಸಬೇಕೆಂತಲೂ ತಾಕೀತು ಮಾಡಿದರು. ಸರಿಯಾಗಿ ಮಧ್ಯಾಹ್ನ ಎರಡೂವರೆಗೆ ಒಂದು ದೂರವಾಣಿ ಕರೆ ಬಂತು. ತಾನು ಜಾನ್ ಕೆನೆತ್ ಅವರೊಡನೆ ಮಾತನಾಡಬೇಕಿದೆಯೆಂದೂ, ತಕ್ಷಣ ಅವರಿಗೆ ಸಂಪರ್ಕಿಸಬೇಕೆಂದೂ ಕರೆಮಾಡಿದ ವ್ಯಕ್ತಿ ಹೇಳಿದರು.
ಆದರೆ ಫೋನ್ ಕರೆಯನ್ನು ಸಂಪರ್ಕಿಸಲು ಸಾಧ್ಯವಿಲ್ಲವೆಂದು ಎಮಿಲಿ ನುಡಿದಳು. ವಿಷಯ ಗಂಭೀರವಾಗಿರುವುದರಿಂದ ತಕ್ಷಣ ಸಂಪರ್ಕ ನೀಡಬೇಕೆಂದು ಸ್ವಲ್ಪ ಗಡುಸಾಗಿಯೇ ಹೇಳಿತು ಆ ಕಡೆಯ ಧ್ವನಿ.  ಕೆನೆತ್ ತನ್ನನ್ನು ನೇಮಕಮಾಡಿಕೊಂಡಿರುವುದರಿಂದ ಅವರ ಆದೇಶವನ್ನು ಮಾತ್ರ ಪಾಲಿಸುವುದಾಗಿ ದೂರವಾಣಿ ಸಂಪರ್ಕವನ್ನು ಕಟ್ ಮಾಡಿದಳು ಎಮಿಲಿ. ಕೊನೆಗೆ ನಾಲ್ಕುಗಂಟೆಯ ಮೇಲೆ ಮತ್ತೆ ಅದೇ ವ್ಯಕ್ತಿ ಕೆನೆತ್ಗೆ ಫೋನ್ ಮಾಡಿ ಮಾತನಾಡಿದರು. ಅವರು ಬೇರೆ ಯಾರೋ ಆಗಿರದೆ, ಅಮೆರಿಕ ಅಧ್ಯಕ್ಷ ಲಿಂಡನ್.ಬಿ ಜಾನ್ಸನ್ ಆಗಿದ್ದರು. ಮಾತಿನ ಕೊನೆಗೆ ತನ್ನ ಆದೇಶವನ್ನು ಧಿಕ್ಕರಿಸಿ ಮಾತನಾಡಿದ ವ್ಯಕ್ತಿಯಾರೆಂದು ವಿಚಾರಿಸಿದರು. ಅವಳನ್ನು ತಕ್ಷಣ ಕೆಲಸದಿಂದ ರಿಲೀವ್ ಮಾಡಬೇಕೆಂದು ಆದೇಶಿಸಿದರು. ಅದಕ್ಕೆ ಕೆನೆತ್ ಅವರು ತನ್ನಿಂದ ನೇಮಕವಾದ ಎಮಿಲಿಯನ್ನು ಯಾವುದೇ ಕಾರಣಕ್ಕೂ ಬಿಡುಗಡೆ ಮಾಡುವುದಿಲ್ಲವೆಂದೂ ಅವಳ ತಪ್ಪನ್ನು ಮನ್ನಿಸಬೇಕೆಂದು ವಿನಂತಿಸಿಕೊಂಡರು. ಆಗ ಜಾನ್ಸನ್ ಹೇಳಿದರು, 'ಅವಳನ್ನು ತಕ್ಷಣ ಬಿಡುಗಡೆಗೊಳಿಸಿ ನನ್ನ ವೈಟ್ ಹೌಸ್ಗೆ ಕಳುಹಿಸಿ, ಅವಳ ಪ್ರಾಮಾಣಿಕತೆಗೆ  ಸೂಕ್ತವಾದ ಉನ್ನತ ಹುದ್ದೆ ನೀಡುತ್ತೇನೆ' ಎಂದು ತಿಳಿಸಿದಾಗ ಕೆನೆತ್ರಿಗೆ ತುಂಬಾ ಸಂತಸವಾಯಿತು.

 ಪ್ರೊ. ಎಂ. ಎನ್. ಸುಂದರರಾಜ್, ಶಿವಮೊಗ್ಗ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ನಾಳೆ CJPಯ ತಿರಂಗಾ ಮೆರವಣಿಗೆ ನಡೆಯಬೇಕಿದ್ದ ದೆಹಲಿಯ ಸೆಂಟ್ರಲ್ ಪಾರ್ಕ್ ಅನ್ನು 2 ದಿನ ಮುಚ್ಚಿದ NDMC!

ಕನ್ನಡಿಗರು ಕೊಟ್ಟ ದುಡ್ಡಲ್ಲೇ AR Rahman ತಮ್ಮ ಮೊದಲ ಸ್ಟುಡಿಯೋ ಕಟ್ಟಿದ್ದು: ನಟ ಯಶ್

ದೇಶಕ್ಕೆ ಹೇಗೆ ಬೆಂಕಿ ಹಚ್ಚಬೇಕು ಎಂಬುದನ್ನು ಬಾಂಗ್ಲಾದೇಶ ನಮಗೆ ತೋರಿಸಿಕೊಟ್ಟಿದೆ: ನೇಹಾ ಬೋರಾ ಹೇಳಿಕೆಗೆ ಬಿಜೆಪಿ ಆಕ್ರೋಶ!

Ramayana: 'ರಾಮಾಯಣ'ದ ರನ್ ಟೈಮ್ ಮೂರು ಗಂಟೆಗೂ ಹೆಚ್ಚು; ಅಮೆರಿಕದಲ್ಲಿ 'PG-13' ರೇಟಿಂಗ್!

ದೆಹಲಿಯ ರಾಮಲೀಲಾದಲ್ಲಿ ಈ ಬಾರಿ ರಾವಣನ ಜೊತೆಗೆ 30 ಅಡಿ ಎತ್ತರದ ಕಾಕ್ರೋಚ್ ಪ್ರತಿಕೃತಿ ದಹನ!