ಮನೆಗೆ ಮಹಾರಾಯ. ಮನೆ ಭಾರ ಹೊರುವ ರಾಯ ಭಾರಿಯೂ ಹೌದು
ಅಪ್ಪನಿಗೆ ಕುಮಾರ, ಮನೆಗೆ ಸ್ವಾಮಿ ಈ ಕುಮಾರ ಸ್ವಾಮಿ
ಉತ್ತರಾಧಿಕಾರಿ, ಅಪ್ಪ ಮಾಡಿದಕ್ಕೆಲ್ಲ ಉತ್ತರ ಹೇಳುವುದೇ ಈತನ ಕೆಲಸ
ಕುಲ-ಶೇಖರ
ಶ್ರೀಮಂತನ ಮಗ ಮಧ್ಯರಾತ್ರಿಯಲ್ಲೂ ಕೊಡೆ ಹಿಡಿಯುತ್ತಾನೆ
ವಿಲ್ ಪವರ್ ಉಳ್ಳವ
ಇವನಿಗೆ ಅಪ್ಪನೇ A.T.M
ಸೋತ ತಂದೆಯ ಭರವಸೆ ಈ ಸುತ
ಮನೆ ಮತ್ತು ಮಾನ ಎರಡೂ ಇವನದೇ ತಲೆ ಮೇಲೆ
ಭಾವೀ ಯಜಮಾನ. ಮನೆಗೆ ಮತ್ತು ಮನೆಯೊಡತಿಗೆ
ಸತ್ತ ಮೇಲೆ ಪಿಂಡ ಹಾಕಲು ಬೇಕೆಂದು ಪಿತೃಗಳು ಬಯಸುವ ಪುಂಡ
ತಂದೆ ತಾಯಿ ಬದುಕಿರುವಾಗ ಎಷ್ಟು ಶೃದ್ಧೆಯಿಂದ ನೋಡಿಕೊಂಡಿದ್ದ ಎಂಬುದಕ್ಕಿಂತ ಸತ್ತ ಮೇಲೆ ಹೇಗೆ ಶ್ರಾದ್ಧ ಮಾಡಿದ ಎಂಬುದನ್ನೇ ಸಮಾಜ ಗಮನಿಸುತ್ತದೆ
ಆದರ್ಶ ಪುತ್ರನಿಗೆ ಉತ್ತಮ ಉದಾಹರಣೆ ಹೆತ್ತವರನ್ನು ಹೊತ್ತು ತಿರುಗಿದ ಶ್ರವಣಕುಮಾರ
ವಿಶ್ವನಾಥ ಸುಂಕಸಾಳ