ಗತಯೌವನ
ಈತನ ಬೂನು ಸ್ವಲ್ಪ ಗೂನು
ಇವನ ಇಷ್ಟದ ಛಂದಸ್ಸೆಂದರೆ ವಾರ್ಧಕ್ಯ ಷಟ್ಪದಿ
ಮಾಜಿ ಯುವಕ
ಪ್ರಾಯದಲ್ಲಿ ಕೈಲಾದಷ್ಟು ಮಾಡಿ ಈಗ ಮಕ್ಕಳಿಂದ ಕೈಲಾಗದವನೆಂದು ಸರ್ಟಿಫಿಕೇಟ್ ಪಡೆದವ
ವೃದ್ಧ- ಸಾಯಲು ಸಿದ್ಧ
ಯಮಾಲಯದ ದಿಕ್ಕಿನತ್ತ ಮುಖ ಮಾಡಿ ಮಲಗುವವ
ಇವನನ್ನು ಹೆಂಡತಿ ಮಕ್ಕಳಷ್ಟೇ ಅಲ್ಲ, ಕೂದಲು, ಹಲ್ಲು ಕೂಡ ಇವನ ಜೊತೆಗಿರಲು ಬಯಸುವುದಿಲ್ಲ
ವೃದ್ಧನ ಸಿಟ್ಟು ಹಲ್ಲು ಸೆಟ್ಟಿಗೆ ಮೂಲ
ಕೋ(ಲು)ದಂಡ ಪಾಣಿ
ಚಾವಿ ಕೊಡದೇ ಆಡಬಹುದಾದ ಮೊಮ್ಮಕ್ಕಳ ಸಜೀವ ಗೊಂಬೆ
ವೃದ್ಧಾಶ್ರಮಗಳ ಕೋರಂ ಭರ್ತಿ ಮಾಡುವವ
ಅರ್ಧ ಸನ್ಯಾಸಿ
ಇವನ ಜೊತೆಗಿರುವುದೆಂದರೆ ಹಸೆ ಮತ್ತು ದಿಂಬು
ಚಾಳೀಸು ಹಾಕಿಕೊಂಡರೂ ಹಳೆ ಚಾಳಿ ಬಿಡದವ
-ವಿಶ್ವನಾಥ ಸುಂಕಸಾಳ
vishwasunkasal@yahoo.com