ಈರುಳ್ಳಿ ಹೆಚ್ಚಿದಾಗಲೂ...ಅದರ ರೇಟು ಹೆಚ್ಚಿದಾಗಲೂ...
ಗ್ಲಿಸರಿನ್ನಿಂದ ಹುಟ್ಟುವ ದ್ರವ
ಕಣ್ಣುರಿಯಾದಾಗ ಬರುವ ನೆಂಟ
ಹೆಂಡತಿಯ ಪ್ರತಿ ಕಣ್ಣೀರಿನ ಹನಿಗೂ ಒಂದು ರೇಶ್ಮೆ ಸೀರೆಯಷ್ಟು ಬೆಲೆಯಿದೆ
ಕಣ್ವರಿಗೆ ಶಕುಂತಲೆಯನ್ನು ಬೀಳ್ಕೊಡುವಾಗ ಹುಟ್ಟಿದ್ದು
ಗಂಡು ಕಣ್ಣೀರಿಡಬಾರದು...ಒರೆಸಲು ಗಂಡ ಬರುವುದಿಲ್ಲವಲ್ಲ
ಇದು ಸ್ತ್ರೀ ವಾಚಕ ಶಬ್ದ
ಧಾರವಾಹಿಗಳಲ್ಲಿ ಧಾರಾಕಾರವಾಗಿ ಸುರಿಯುವಂಥದ್ದು
ಕಣ್ಣೀರು ಒರೆಸುವ ಕೈ ನಮ್ಮದಾಗಬೇಕು...ಮೂಗು ಒರೆಸಲು ಕರ್ಚೀಫ್ ಇದ್ದೇ ಇದೆ
ಐಸ್ಗಿಂತ ಕರಗಿದಂತೆ ಕರಗುವವರ 'ಐ ಡ್ರಾಪ್'
ಕಣ್ಣೂರಿನ ದುಸ್ಥಿತಿಗೆ ಇದೇ ಉತ್ತರ
ಸತ್ತಾಗ ಕಣ್ಣೀರಿಡುವವರು ಬೇಕೆಂದು ಮಾಡಿದ ಸಾಲವನ್ನು ತೀರಿಸದೇ ಸಾಯಬಾರದು
ಖುಷಿ ಮತ್ತು ದುಃಖ ಇವೆರಡರಲ್ಲೂ ನಮ್ಮ ಜೊತೆಗಿರುವಂಥದ್ದು
ಸುಖ ಸಿಹಿ, ದುಃಖ ಉಪ್ಪುಪ್ಪು...
ಒಳಗಿನಿಂದ ಉಕ್ಕುಕ್ಕಿ ಬರುವ ಬಿಸಿ ನೀರು
ಕುಡಿಯಲು ತೊಟ್ಟು ನೀರು ಇಲ್ಲದಿದ್ದಾಗ ಬರುವ ನೀರು
ಇದು ಹೆಚ್ ಥ್ರೀ ಒ
ವಿಶ್ವನಾಥ ಸುಂಕಸಾಳ
vishwasunkasal@yahoo.com