ಸಂಪಾದಕೀಯ

ದೂರು

ವಿಪಕ್ಷಗಳ ಪೂರ್ಣಕಾಲಿಕ ವೃತ್ತಿ
    ದುಮ್ಮಾನದ ಸಹೋದರ
    ಮೇಲಿನವರು ಕೆಳಗೆ ದೂಡುತ್ತಾರೆಂಬ ಆಕ್ಷೇಪ
    ಕಂಪೆನಿಯ ಮೇಲಿನ ಕಂಪ್ಲೇಂಟ್
    ಎಲ್ಲರೂ ನನ್ನನ್ನೇ ದುರುದುರು ನೋಡುತ್ತಾರೆ ಎನ್ನುವ ಹುಡುಗಿಯ ಗೊಣಗಾಟ
    ನನ್ನನ್ನು ಪದೇ ಪದೆ ದೂರದೂರಿಗೆ ವರ್ಗಾಯಿಸುತ್ತಾರೆಂಬ ನೌಕರನ ಅಳಲು
    ದೂರುವ ಸಂಬಂಧಿಕರೇ ಎಲ್ಲ. ದೂರದ ಸಂಬಂಧಿಕರು ಇಲ್ಲ
    ದಾರಾ (ಹೆಂಡತಿ) ಸಲ್ಲಿಸುವ ಕೊರತೆಗಳ ಕಂತೆ
    ಉರುವಲಿಗೆ ದಾರು (ಕಟ್ಟಿಗೆ) ಸಿಗುತ್ತಿಲ್ಲವೆಂಬ ಹಳಹಳಿಕೆ
    ಕೆಲವರದು ದೂರದೃಷ್ಟಿ, ಹಲವರದು ದೂರುವ ದೃಷ್ಟಿ
    ಧಾರಾವಾಹಿಗಳನ್ನು ದಾರದಂತೆ ಎಳೆಯುತ್ತಿದ್ದಾರೆಂಬ ಅಸಮಾಧಾನ
    ದೂರುವವರನ್ನು ದೂರವಿಡು
    ಕೊಂಕು ತೆಗೆವ ಮಂಕು ಬುದ್ಧಿಯವರ ದೂರುವ ರೋಗದ ದೂರಗಾಮಿ ಪರಿಣಾಮವೇನೆಂದರೆ ಯಾರೂ ಅವರ ಬಳಿಸಾರಲಾರರು
    ದರ ಏರಿದಾಗೆಲ್ಲ ದೊರೆಯ ದೂರುವುದು ಜವಾಬ್ದಾರಿ ಪ್ರಜೆಯ ಲಕ್ಷಣವಲ್ಲ
    ಯಾವತ್ತೂ ಏನಾದರೊಂದು ಹುಳುಕನ್ನು ಹುಡುಕಿ ದೂರುವ ದೃಷ್ಟಿಕೋನಕ್ಕೆ ದೂರದೃಷ್ಟಿ ಎನ್ನಬಹುದು.



-ವಿಶ್ವನಾಥ ಸುಂಕಸಾಳ
vishwasunkasal@yahoo.com


Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ನಾಳೆ CJPಯ ತಿರಂಗಾ ಮೆರವಣಿಗೆ ನಡೆಯಬೇಕಿದ್ದ ದೆಹಲಿಯ ಸೆಂಟ್ರಲ್ ಪಾರ್ಕ್ ಅನ್ನು 2 ದಿನ ಮುಚ್ಚಿದ NDMC!

ಕನ್ನಡಿಗರು ಕೊಟ್ಟ ದುಡ್ಡಲ್ಲೇ AR Rahman ತಮ್ಮ ಮೊದಲ ಸ್ಟುಡಿಯೋ ಕಟ್ಟಿದ್ದು: ನಟ ಯಶ್

ದೇಶಕ್ಕೆ ಹೇಗೆ ಬೆಂಕಿ ಹಚ್ಚಬೇಕು ಎಂಬುದನ್ನು ಬಾಂಗ್ಲಾದೇಶ ನಮಗೆ ತೋರಿಸಿಕೊಟ್ಟಿದೆ: ನೇಹಾ ಬೋರಾ ಹೇಳಿಕೆಗೆ ಬಿಜೆಪಿ ಆಕ್ರೋಶ!

Ramayana: 'ರಾಮಾಯಣ'ದ ರನ್ ಟೈಮ್ ಮೂರು ಗಂಟೆಗೂ ಹೆಚ್ಚು; ಅಮೆರಿಕದಲ್ಲಿ 'PG-13' ರೇಟಿಂಗ್!

ದೆಹಲಿಯ ರಾಮಲೀಲಾದಲ್ಲಿ ಈ ಬಾರಿ ರಾವಣನ ಜೊತೆಗೆ 30 ಅಡಿ ಎತ್ತರದ ಕಾಕ್ರೋಚ್ ಪ್ರತಿಕೃತಿ ದಹನ!