ಆಚಾರ ವಿಚಾರವನ್ನೆಲ್ಲಾ ಬಿಟ್ಟವರ ಕಂದಾಚಾರ
ಆಚಾರವೇ ಸ್ವರ್ಗ, ಭ್ರಷ್ಟಾಚಾರವೇ ನರಕ
ಸಮಾಜದ ಗೋಡೆಗೆ ಮಸಿ ಬಳಿಯುವ ಬ್ರಷ್
ಪ್ರಾಮಾಣಿಕತೆಯನ್ನು ತೂಕಕ್ಕಿಟ್ಟು ಮಾರುವ ವ್ಯಾಪಾರ
ಮೋಜಿಗೆ ಹಣ ಸಾಲದಿದ್ದಾಗ ಮೇಜಿನ ಕೆಳಗೆ ಕೈ ತೂರಿಸುವುದು
ಸಾಮಾನ್ಯನ ರಕ್ತ ಹೀರುವ ಇಂಬಳ ಈ ಗಿಂಬಳ
ಸಮಾಜಕ್ಕೆ ಕಂಟಕವಾಗಿರುವ ಈ ಕಂದಾಚಾರವನ್ನು ಮೊದಲು ನಿಷೇಧಿಸಬೇಕು
ಯಾರಿಗೆ ಸಾಲತ್ತೆ ಸಂಬಳ ಎನ್ನುವವರ ಸಾಲ ತೀರಿಸಲು ಇರುವ ಮಾರ್ಗ
ಬಡತನ ಅಸಹಾಯಕತೆಗಳ ಸಂತಾನ
ನೀತಿಗೆಟ್ಟವರ ನಾತ ಬೀರುವ ಕುಕರ್ಮ
ಕೊಟ್ಟಿದ್ದು ತನಗೆ, ಇಸ್ಕೊಂಡಿದ್ದು ತನ್ನ ಕುಟುಂಬಕ್ಕೆ
ದುರ್ಮಾರ್ಗಿಗಳ ಸಂಪನ್ಮೂಲ ವೃದ್ಧಿಗಿದೇ ವಾಮಮಾರ್ಗ
ಭ್ರಷ್ಟಾಚಾರಕ್ಕೆ ಸರ್ಕಾರಕ್ಕಿಂತ ಹೆಚ್ಚು ನಮ್ಮೊಳಗಿನ ಸಂಸ್ಕಾರವೇ ಕಾರಣ
ಆಮ್ ಆದ್ಮಿಯನ್ನು ಸಂತ್ರಸ್ತಗೊಳಿಸುತ್ತಿರುವ ತ್ರಾಸ
ತಾಪತ್ರಯಗಳಲ್ಲಿ ಇದು ಆದಿಭೌತಿಕ ತಾಪ
ಸರ್ಕಾರೀ ವ್ಯಾಧಿ
ಕಷ್ಟ ಪರಂಪರೆಯಲ್ಲಿ ಬಿದ್ದು ತೊಳಲಾಡುವ ಕೆಲವರು ಹಿಡಿವ ಅನಿಷ್ಟ ಮಾರ್ಗ
ವಿಶ್ವನಾಥ ಸುಂಕಸಾಳ
vishwasunkasal@yahoo.com