ಸಂಪಾದಕೀಯ

ಕಳ್ಳತನದಿಂದ ಗಳಿಸಿದ್ದೇನು?

ಕ್ರಿ.ಶ.1150-1200ರ ಸಮಯ. ಆಗ ಉತ್ತರ ಕರ್ನಾಟಕ ಭಾಗದಲ್ಲಿ 'ಉರಿಲಿಂಗ ಪೆದ್ದಿ' ಎಂಬ ದಲಿತ ಪಂಗಡಕ್ಕೆ ಸೇರಿದ ದರೋಡೆಕೋರನಿದ್ದ. ಈತ ಬಸವಣ್ಣನವರ ಸಮಕಾಲೀನ. ಅವನ ಉದ್ಯೋಗವೇ ಕಳ್ಳತನ ಮಾಡುವುದು. ಇದರಿಂದ ಅವನ ಜೀವನ ರಥ ಹೇಗೋ ಸಾಗುತ್ತಿತ್ತು. ಅವನೊಮ್ಮೆ ಸೂರಯ್ಯ ಎಂಬ ಶ್ರೀಮಂತನ ಮನೆಗೆ ಕಳ್ಳತನಕ್ಕಾಗಿ ಹೋಗಿದ್ದ. ಅಂದು ಅವರ ಮನೆಯಲ್ಲಿ 'ಉರಿಲಿಂಗ ದೇವ' ಎಂಬ ಬಹುದೊಡ್ಡ ಶೈವಸ್ವಾಮಿಗಳಿಂದ ಉಪನ್ಯಾಸ ಕಾರ್ಯಕ್ರಮವಿತ್ತು. ಉಪನ್ಯಾಸ ಮುಗಿಯುವವರೆಗೆ ಬೇರೆ ದಾರಿ ಕಾಣದೆ ಪೆದ್ದಿಯೂ ಸಹ ಆ ಉಪನ್ಯಾಸ ಕೇಳುತ್ತಾ ಕುಳಿತ. ಕೇಳುತ್ತಾ ಕೇಳುತ್ತಾ ಅವನಲ್ಲಿದ್ದ ಕುಬುದ್ಧಿಯೆಲ್ಲಾ ನಾಶವಾಗಿ ಇಷ್ಟು ದಿನ ತಾನೆಂತಹ ಅಪರಾಧ ಮಾಡುತ್ತಿದ್ದೆ ಎಂದು ಅರಿತುಕೊಂಡ. ಇನ್ನೂ ಹೆಚ್ಹೆಚ್ಚು ಅವರ ಉಪದೇಶ ಕೇಳಲು ಅವನ ಮನಸ್ಸು ತುಡಿಯಿತು. ಇನ್ನು ಮುಂದೆ  ಕಳ್ಳತನ ಮಾಡುವುದಿಲ್ಲವೆಂದು ನಿರ್ಧರಿಸಿದ. ತಾನು ಅದುವರೆಗೆ ಮಾಡಿದ ತಪ್ಪಿಗೆ ಪ್ರಾಯಶ್ಚಿತ್ತ ರೂಪವಾಗಿ ಪೆದ್ದಿಯು ಹನ್ನೆರಡು ವರ್ಷಗಳ ಕಾಲ ಪ್ರತಿದಿನ ಒಂದು ಹೊರೆ ಕಟ್ಟಿಗೆಯನ್ನು ತೆಗೆದುಕೊಂಡು ಹೋಗಿ ಯಾರಿಗೂ ತಿಳಿಯದಂತೆ ಉರಿಲಿಂಗದೇವನ ಆಶ್ರಮಕ್ಕೆ ಸೇರಿಸುತ್ತಿದ್ದ. ಹಾಗೆಯೇ ಪ್ರತಿದಿನ ಅವರು ಶಿಷ್ಯರಿಗೆ ಬೋಧಿಸುತ್ತಿದ್ದ ಉಪದೇಶಗಳನ್ನು ರಹಸ್ಯವಾಗಿ ಕೇಳಿ ಅವರನ್ನು ತನ್ನ ಗುರುವೆಂದು ಮನದಲ್ಲಿಯೇ ಸಮೀಕರಿಸಿದ. ಇದೊಂದು ರೀತಿ ಏಕಲವ್ಯ-ದ್ರೋಣಾಚಾರ್ಯರ ಸಂಬಂಧವನ್ನು ನೆನಪಿಗೆ ತರುತ್ತದೆ. ಒಮ್ಮೆ ಕಟ್ಟಿಗೆ ಹೊರೆಯನ್ನು ಇಳಿಸುತ್ತಿದ್ದಾಗ ಅಕಸ್ಮಾತ್ ಉರಿಲಿಂಗದೇವನ ಕೈಗೆ ಸಿಕ್ಕು ಬಿದ್ದಾಗ ಪೆದ್ದಿಯು ತನ್ನೆಲ್ಲ ವಿಷಯವನ್ನೂ ಹೇಳಿ ಅವರ ಶಿಷ್ಯನನ್ನಾಗಿ ಸ್ವೀಕರಿಸಲು ಕೇಳಿಕೊಂಡ. ಅದಕ್ಕೆ ಸ್ವಾಮಿಗಳು ಒಪ್ಪಿ ಕಲಿಸಲು ಪ್ರಾರಂಭಿಸಿದರು. ಮುಂದೆ ಆತ ಕನ್ನಡ ಮತ್ತು ಸಂಸ್ಕೃತಗಳಲ್ಲಿ ಪರಿಣಿತನಾದನಲ್ಲದೆ, ಗುರುವಿನಿಂದ ಶಾಸ್ತ್ರ ಮತ್ತು ಶೈವಸಿದ್ಧಾಂತದ ಬಗ್ಗೆ ಕಲಿತು ದೊಡ್ಡ ವಿದ್ವಾಂಸನಾದ. ಅಲ್ಲದೆ ಅವನೂ ಸಹ ಅನೇಕ ವಚನಗಳನ್ನು ರಚಿಸಿ ಒಳ್ಳೆಯ ವಚನಕಾರ ಎಂಬ ಹೆಸರು ಗಳಿಸಿದ. ಅವನ ಪತ್ನಿ ಕಾಳವ್ವೆ ಸಹ ಅನೇಕ ವಚನಗಳನ್ನು ರಚಿಸಿದ್ದಾಳೆ. ಉರಿಲಿಂಗ ದೇವರು ಕೊನೆಗಾಲದಲ್ಲಿ  ತಮ್ಮ ಮಠಕ್ಕೆ ಪೆದ್ದಿಯನ್ನು ಉತ್ತರಾಧಿಕಾರಿಯನ್ನಾಗಿ ಮಾಡಿದರು. ಇಂದಿಗೂ ಬಸವಣ್ಣನವರ ಸಮಕಾಲೀನರಾಗಿದ್ದ ಉರಿಲಿಂಗ ಪೆದ್ದಿಯವರು ನಿತ್ಯ ಸ್ಮರಣೀಯರಾಗಿದ್ದಾರೆ.

- ಪ್ರೊ. ಎಂ. ಎನ್. ಸುಂದರರಾಜ್, ಶಿವಮೊಗ್ಗ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಮೋದಿ, ಶಾ ಭಯಗೊಂಡಿದ್ದು ನಮ್ಮ ಹೋರಾಟದಲ್ಲಿ ಅರ್ಧ ಗೆದ್ದಿದ್ದೇವೆ, CEC ರಾಜೀನಾಮೆ ನೀಡುವವರೆಗೆ ಹಿಂಜರಿಯುವುದಿಲ್ಲ': ಇಂದು CJP ಪ್ರತಿಭಟನೆ ಮುಂದುವರಿಕೆ

Riyadh ವಿಮಾನ ನಿಲ್ದಾಣದ ಮೇಲೆ ಕ್ಷಿಪಣಿ ದಾಳಿ: 12 ಮಂದಿ ಸಾವು, 300ಕ್ಕೂ ಹೆಚ್ಚು ಜನರಿಗೆ ಗಾಯ

Operation Sindoor ನಮ್ಮ ಆತ್ಮರಕ್ಷಣೆಯ ಕ್ರಮ, ಪರಮಾಣು ಬೆದರಿಕೆಗೆ ಎಂದಿಗೂ ಮಣಿಯಲ್ಲ: 3 'ಲಕ್ಷ್ಮಣ ರೇಖೆ' ಎಳೆದು ಪಾಕ್'ಗೆ ಭಾರತ ಖಡಕ್ ಎಚ್ಚರಿಕೆ..!

ದೆಹಲಿಯಲ್ಲಿ ನಾಯಕರ ಬಂಧನ, ಮೆಟ್ರೋ ಸ್ಥಗಿತ ಕುರಿತ ನ್ಯಾಯಾಂಗ ನಿಂದನೆ: ಭಾನುವಾರವೂ 'ಸುಪ್ರೀಂ' ವಿಶೇಷ ಪೀಠದಿಂದ ವಿಚಾರಣೆ!

CJP ಪ್ರತಿಭಟನೆಗೆ ದೇಶವಿರೋಧಿ ಶಕ್ತಿಗಳ ಸಾಥ್‌: ಭಾರತದ ವರ್ಚಸ್ಸಿಗೆ ಮಸಿ ಬಳಿಯುವ ಪ್ರಯತ್ನ..!