ಸಂಪಾದಕೀಯ

ತಪ್ಪಾಯ್ತು ತಿದ್ಕೋತೀವಿ

ಬೆಂಗಳೂರಿನ ಟಿ.ದಾಸರಹಳ್ಳಿಯಿಂದ ರಾಜೀವ ಪಟವರ್ಧನ್ ಅವರು ಬರೆಯುತ್ತಾರೆ- 'ಜ.11ರಂದು ಪುಟ 7ರಲ್ಲಿ 'ಸುದ್ದಿ ಸಂಕ್ಷೇಪ'ದಲ್ಲಿ 'ಸಾಲಬಾಧೆ: ರೈತ ನೇಣಿಗೆ ಶರಣು' ವರದಿಯ ಕೊನೆಯ ಸಾಲಿನಲ್ಲಿ 'ಸಾಲ ತೀರಿಸಲಾಗದೇ ಮನನೊಂದು ಗ್ರಾಮದ ಹೊರವಲಯದ ಹಳ್ಳದಲ್ಲಿ 15 ದಿನಗಳ ಹಿಂದೆ ಗಿಡವೊಂದಕ್ಕೆ ನೇಣು ಹಾಕಿಕೊಂಡುಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ಹೇಳಲಾಗಿದೆ' ಎಂದಿದೆ. ಅದು ಗಿಡವೋ? ಮರವೋ?'
'ಅದೇ ದಿನದ 'ಬೈಟು ಕಾಫಿ'ಯಲ್ಲಿ 'ಶಿಖರ ಸಾಧಕಿ- ಮಹಾಪರ್ವತದಲ್ಲಿ ಮಂದಸ್ಮಿತ' ವರದಿಯ ಮುಖ್ಯಾಂಶಗಳಲ್ಲಿ '5.5 ಅಡಿ ಎತ್ತರ, 25 ವರ್ಷದ ಕನ್ನಡತಿ, ಮಂಡ್ಯದ ಕುವರಿ ಸ್ಮಿತಾ' ಎಂದಿದೆ. ಆದರೆ ಇಂಜಿನಿಯರಿಂಗ್ ಪರಿಭಾಷೆಯಲ್ಲಿ 5.5 ಅಡಿ ಎಂದು ಬರೆಯುವುದಿಲ್ಲ. ಒಂದೋ ಅದು 5 ಅಡಿ 5ಇಂಚು ಆಗಬೇಕು ಅಥವಾ ಐದುವರೆ ಅಡಿ ಆಗಬೇಕು.'
'ಜ.23ರಂದು 'ಕನ್ನಡಪ್ರಭ'ದ ಪುಟ 14ರಲ್ಲಿ 'ಸುದ್ದಿ ಸಂಕ್ಷೇಪ'ದಲ್ಲಿ 'ಮತಕ್ಕೆ ರಸೀದಿ' ಸುದ್ದಿ ಪ್ರಕಟಿಸಿದ್ದೀರಿ. ಇದು ಅಪೂರ್ಣವಾದ ಸುದ್ದಿ ಎಂದೆನಿಸುತ್ತದೆ. ಕೇಂದ್ರ ಚುನಾವಣಾ ಆಯೋಗ ಜತೆಗೂಡಿ ಜನತಾಪಕ್ಷದ ಅಧ್ಯಕ್ಷ ಸುಬ್ರಹ್ಮಣ್ಯಸ್ವಾಮಿ ಮತ್ತು ಸುಪ್ರೀಂಕೋರ್ಟ್‌ನ ಹಿರಿಯ ನ್ಯಾಯವಾದಿ ಅಶೋಕ ದೇಸಾಯಿ ಅವರ ಅರ್ಜಿಯನ್ನಾಧರಿಸಿ, ಕೇಂದ್ರ ಚುನಾವಣಾ ಆಯೋಗ ಮಾನ್ಯ ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿದೆ.'
'ಪ್ರಯೋಗಾರ್ಥವಾಗಿ ಹವಾಮಾನದ ಮಾನದಂಡದ ಮೇಲೆ ಎರಡು ಸುತ್ತು ದೆಹಲಿ, ಲೇಹ್, ತಿರುವನಂತಪುರಂ, ಜೈಸಲ್ಮೇರ್ ಮತ್ತು ಚಿರಾಪುಂಜಿಯಲ್ಲಿ ಪ್ರಾಯೋಗಿಕವಾಗಿ ಪರೀಕ್ಷಿಸಲಾಗುತ್ತಿದೆ ಎಂದು ವರದಿ ಮಾಡಬೇಕಿತ್ತು. ಇದು ಓದುಗರಿಗೆ ಮತ್ತಷ್ಟು ಮಾಹಿತಿ ಸಿಕ್ಕಂತಾಗುತ್ತಿತ್ತು' ಎಂದಿದ್ದಾರೆ.
ಎಂಜಿನಿಯರಿಂಗ್ ಭಾಷೆಯಲ್ಲಿ 5.5 ಅಡಿ ಎಂದಿಲ್ಲದೇ ಇರಬಹುದು. ಆದರೆ ಪತ್ರಿಕಾಭಾಷೆಯಲ್ಲಿ ಬಳಕೆಯಲ್ಲಿದೆ. ಹಣ, ಅಗಲ, ಉದ್ದ, ಎತ್ತರ ಎಲ್ಲವನ್ನೂ ಇದೇರೀತಿಯಲ್ಲಿ ಬರೆಯುವ ರೂಢಿಯಿದೆ.
ಬೆಂಗಳೂರಿನ ಕುಮಾರಸ್ವಾಮಿ ಬಡಾವಣೆಯಿಂದ ಹೇಮಲತಾ ಮುರಳಿ ಅವರು ಬರೆಯುತ್ತಾರೆ- 'ಜ.19ರಂದು ಪುಟ 11ರಲ್ಲಿ 'ಕಾಡಾನೆ ಅಟ್ಟಲು ಅರಣ್ಯ ಸಿಬ್ಬಂದಿ ಹರಸಾಹಸ' ಎಂಬ ಸುದ್ದಿಯ ಮೊದಲ ಪ್ಯಾರಾದಲ್ಲಿ 'ಎರಡು ದಿನಗಳೊಳಗೆ ಮತ್ತೆ ತಮಿಳುನಾಡಿನ ಅರಣ್ಯ ಪ್ರದೇಶಕ್ಕೆ ವಾಪಸ್ ಕಳುಹಿಸಲು ಇಲ್ಲಿನ ಅರಣ್ಯ ಇಲಾಖೆ ಸುಮಾರು 500 ಮಂದಿಯೊಂದಿಗೆ ಕಾರ್ಯಾಚರಣೆ ಕೈಗೊಂಡಿದೆ' ಎಂದಿದೆ.'
'ಅದೇ ಸುದ್ದಿಯ 3ನೇ ಪ್ಯಾರಾದಲ್ಲಿ 3 ದಿನಗಳೊಳಗೆ ಓಡಿಸಲು ಎಂದಿದೆ. ನಿಜವಾಗಿಯೂ ಎಷ್ಟು ದಿನದೊಳಗೆ ಎಂಬುದನ್ನು ತಿಳಿಸಿ. ಅಥವಾ ಇದು ಅಧಿಕಾರಿಗಳ ಆಶ್ವಾಸನೆಯೇ?' ಎಂದು ಪ್ರಶ್ನಿಸಿದ್ದಾರೆ.
ಅಧಿಕಾರಿಗಳು ಹೇಳಿದ್ದನ್ನೇ ಅಂದರೆ ಅವರ ಭರವಸೆಯ ಮಾತನ್ನೇ ನಮ್ಮ ವರದಿಗಾರರು ಬರೆದಿರುತ್ತಾರೆ. ಅಧಿಕಾರಿಗಳು ಕೂಡ ಖಚಿತವಾಗಿ ಅಷ್ಟೇ ದಿನದಲ್ಲಿ ಓಡಿಸುತ್ತೇವೆ ಎಂದು ಹೇಳುವುದು ಸಾಧ್ಯವಿಲ್ಲ. ಯಾಕೆಂದರೆ ಆನೆಗಳನ್ನು ಓಡಿಸುವ ಸಂದರ್ಭದಲ್ಲಿ ಕೆಲವು ಅನಿರೀಕ್ಷಿತ ತೊಂದರೆ, ಅಡೆತಡೆಗಳು ಎದುರಾಗಬಹುದು. ಆದ್ದರಿಂದ ಬಹುಶಃ ಅಧಿಕಾರಿಗಳು 2-3 ದಿನದಲ್ಲಿ ಎಂದಿರಬೇಕು. ವರದಿಗಾರರು ಬರೆಯುವಾಗ ಒಂದು ಕಡೆ 2 ಎಂದು, ಮತ್ತೊಂದು ಕಡೆ 3 ಎಂದು ತಪ್ಪಾಗಿ ಬರೆದಿರಬೇಕು.

- ವಿಶ್ವೇಶ್ವರ ಭಟ್

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ನಾಳೆ CJPಯ ತಿರಂಗಾ ಮೆರವಣಿಗೆ ನಡೆಯಬೇಕಿದ್ದ ದೆಹಲಿಯ ಸೆಂಟ್ರಲ್ ಪಾರ್ಕ್ ಅನ್ನು 2 ದಿನ ಮುಚ್ಚಿದ NDMC!

ಕನ್ನಡಿಗರು ಕೊಟ್ಟ ದುಡ್ಡಲ್ಲೇ AR Rahman ತಮ್ಮ ಮೊದಲ ಸ್ಟುಡಿಯೋ ಕಟ್ಟಿದ್ದು: ನಟ ಯಶ್

ದೇಶಕ್ಕೆ ಹೇಗೆ ಬೆಂಕಿ ಹಚ್ಚಬೇಕು ಎಂಬುದನ್ನು ಬಾಂಗ್ಲಾದೇಶ ನಮಗೆ ತೋರಿಸಿಕೊಟ್ಟಿದೆ: ನೇಹಾ ಬೋರಾ ಹೇಳಿಕೆಗೆ ಬಿಜೆಪಿ ಆಕ್ರೋಶ!

Ramayana: 'ರಾಮಾಯಣ'ದ ರನ್ ಟೈಮ್ ಮೂರು ಗಂಟೆಗೂ ಹೆಚ್ಚು; ಅಮೆರಿಕದಲ್ಲಿ 'PG-13' ರೇಟಿಂಗ್!

ದೆಹಲಿಯ ರಾಮಲೀಲಾದಲ್ಲಿ ಈ ಬಾರಿ ರಾವಣನ ಜೊತೆಗೆ 30 ಅಡಿ ಎತ್ತರದ ಕಾಕ್ರೋಚ್ ಪ್ರತಿಕೃತಿ ದಹನ!