ಬೇರೆಯವರ ವಸ್ತುಪವನ್ನು ಬಳಸಲು ನಾವು ತೆರುವ ಬೆಲೆ
ಬೇರೆಯವರ 'ಬಾಡಿ'ಯಲ್ಲಿ ಮಗುವನ್ನು ಬೆಳೆಸಿ ನಂತರ ನಮ್ಮದಾಗಿಸಿಕೊಳ್ಳುವುದಕ್ಕೂ ಹೀಗೆ ಹೇಳಬಹುದು
ದಿನದಿಂದ ದಿನಕ್ಕೆ ಏರುವ ಊರ್ಧ್ವಮುಖಿ
ನಗರವಾಸಿಗಳ ಆದಾಯದ ಬಹುಭಾಗ ಸಂದಾಯವಾಗುವುದು ಇದಕ್ಕೇ
'ಮನೆ ಕಟ್ಟಿ ನೋಡು, ಬಾಡಿಗೆ ಕೊಟ್ಟು ನೋಡು' ಇದು ಆಧುನಿಕರ ನೀತಿ
ಓನರ್ ಎಂಬ ವಾನರನ ಕಾಟಕ್ಕೆ ಕಾರಣ ಇದೇ
ಬಾಡಿಗೆಗೇ ಮೀಸಲಾಗಿದ್ದರೂ ಕೆಲವಷ್ಟಕ್ಕೆ ಹಾಗೆ ಬೋರ್ಡ್ ಹಾಕಲಾಗುವುದಿಲ್ಲ
ಹಾಗೆ ನೋಡಿದರೆ ತೆರಿಗೆ ಕಟ್ಟುವರೆಲ್ಲ ಬಾಡಿಗೆದಾರರೇ
ಬಾಡಿ ಹೋಗುವ ತನಕವೂ ಬಾಡಿಗೆ ತೆರುತ್ತಲೇ ಇರುವ ಅನಿವಾರ್ಯತೆ ಎಲ್ಲರದು
ಆಗಾಗ ಹೈಕ್ ಆಗುತ್ತಲೇ ಇರುವುದರಿಂದ ಇದು ಹೈರ್
ಉಡುಗೆ-ತೊಡುಗೆ, ಅಡಿಗೆ, ಕೊನೆಗೆ ಬಡಿಗೆಯೂ ಬಾಡಿಗೆಗೆ ದೊರೆಯುತ್ತದೆ
ಕೆಲವರಿಗೆ ಮನೆ ಮೇಲೆ ಪ್ರೀತಿ, ಬಾಡಿಗೆ ಮೇಲೆ ಆಸೆ
ಬಾಡಿಗೆಗೆ ಪಡೆಯಲಾಗದ ವಸ್ತುವೆಂದರೆ ಪ್ರೀತಿ ಮಾತ್ರ
ಈ ಪ್ರಪಂಚ ಬ್ರಹ್ಮನ ಬಾಡಿಗೆ ಮನೆ, ನಮ್ಮ ಆಯುಷ್ಯವೇ ನಾವು ತೆರುವ ಬಾಡಿಗೆ
-ವಿಶ್ವನಾಥ ಸುಂಕಸಾಳ
ಢ್ಝಝಢಿಛಡ್ಡಟ್ಞಿಛಡಛಟಅಣಝ್ಟ್ಟ.್ಛ್ಟಟ