ಹೆಂಡತಿ(ಸಾಯುವಾಗ): ರೀ, ನಿಮ್ಹತ್ರ ಕೆಲವು ವಿಷಯ ಮುಚ್ಚಿಟ್ಟಿದ್ದೆ. ಈಗ ಎಲ್ಲಾ ಹೇಳ್ಬಿಡ್ತೀನಿ.
ಗಂಡ: ಬೇಡ, ಆಯಾಸ ಆಗುತ್ತೆ. ನೀನು ಸುಮ್ನೆ ಮಲಗು...
ಹೆಂಡತಿ: ಇಲ್ಲಾರೀ ನಾನು ಬದುಕೋಲ್ಲ ಅನ್ಸುತ್ತೆ. ಪ್ಲೀಸ್ ಇಲ್ಲಿ ಕೇಳಿ: 'ಪ್ರತಿದಿನ ನಿಮ್ಮ ಜೇಬಿನಿಂದ ದುಡ್ಡು ಕದ್ದು ನನ್ನ ಬಾಯ್ಫ್ರೆಂಡ್ಗೆ ಕೊಡುತ್ತಿದ್ದೆ, ಚಿಂಟು ನಿಮ್ಮ ಮಗ ಅಲ್ಲ, ಅತ್ತೆಯನ್ನು ಮನೆಯಿಂದ ಹೊರಗೆ ಹಾಕ್ಬೇಕು ಅಂತ ನಿಮ್ಮ ಬಂಗಾರದ ಗಡಿಯಾರ ಕದ್ದು ಅವರ ಪರ್ಸ್ನಲ್ಲಿ ಬಚ್ಚಿಟ್ಟಿದ್ದು ನಾನೇ...ದಯವಿಟ್ಟು ನನ್ನನ್ನ ಕ್ಷಮಿಸಿಬಿಡಿ...
ಗಂಡ: ನನಗೆಲ್ಲ ಗೊತ್ತು ಡಾರ್ಲಿಂಗ್. ಅದಕ್ಕೆ ನಾನು ನಿನಗೆ ವಿಷ ಹಾಕಿದ್ದು. ಸುಮ್ನೆ ಮಲಗು, ವಿಷ ಸರಿಯಾಗಿ ಕೆಲಸ ಮಾಡಬೇಕು...