ಸಂಪಾದಕೀಯ

ಮೈಸೂರು ಮಹಾರಾಜರು ಬಂದರೂ ಗೇಟು ತೆರೆಯೋಲ್ಲ!

ಒಂದು ಕಾಲದಲ್ಲಿ ಕಾರು ಇಟ್ಟವರೇ ಬೆರಳೆಣಿಕೆಯಷ್ಟು ಜನ. ಆಗರ್ಭ ಶ್ರೀಮಂತರು, ಸರ್ಕಾರದ ಅತ್ಯುನ್ನತ ಹುದ್ದೆಯಲ್ಲಿರುವವರು ಮಾತ್ರ ಇಂತಹ ಸೌಲಭ್ಯವನ್ನು ಹೊಂದಿದ್ದರು. ಗ್ರಾಮಾಂತರ ಪ್ರದೇಶದಲ್ಲಿ ಎಷ್ಟೋ ಜನ ಕಾರನ್ನೇ ನೋಡಿರಲಿಲ್ಲ. ಅಂತಹ ಕಾಲದಲ್ಲಿ ಡೇಮ್ಲರ್ ಕಾರು ಇಟ್ಟವರೆಂದರೆ ಅವರು ಎಲ್ಲ ಗಣ್ಯರ ಪಟ್ಟಿಯಲ್ಲಿ ಮೊದಲ ಪಂಕ್ತಿಗೆ ಸೇರಿದವರು. ಮ್ಯೆಸೂರಿನಲ್ಲೊಮ್ಮೆ ಸಾತಂತ್ರ್ಯ ಪೂರ್ವದಲ್ಲಿ ಒಂದು ದಿನ ಐಷಾರಾಮಿ ಕಾರು ಡೇಮ್ಲರ್ ವೇಗವಾಗಿ ಬರುತ್ತಿತ್ತು. ಇನ್ನೇನು ರೈಲ್ವೆ ಹಳಿ ದಾಟಬೇಕು ಅಷ್ಟರಲ್ಲಿ ರೈಲ್ವೆಗೇಟು ಹಾಕಲಾಯಿತು. ಆಗ ಕಾರು ನಿಲ್ಲಿಸುವ ಅನಿವಾರ್ಯತೆ ಉಂಟಾಯಿತು. ಎಷ್ಟು ಹೊತ್ತಾದರೂ ನಂಜನಗೂಡು ಕಡೆಯಿಂದ ಬರುವ ರೈಲು ಬರಲೇ ಇಲ್ಲ. ಆಗ ಕಾರಿನ ಚಾಲಕ ಕಾರಿನಿಂದಿಳಿದು ರೈಲ್ವೆ ಕಾವಲುಗಾರನ ಬಳಿ ಹೋಗಿ, ಕಾರಿನ ಒಳಗಡೆ ಪ್ರತಿಷ್ಟಿತ ವ್ಯಕ್ತಿಗಳೊಬ್ಬರು ಕುಳಿತಿರುವುದಾಗಿಯೂ, ರೈಲು ಇನ್ನೂ ಬರಲಿಲ್ಲವಾದುದರಿಂದ ಗೇಟುತೆಗೆದು ಕಾರು ಹೋಗಲು ಅನುವುಮಾಡಿಕೊಡಬೇಕೆಂದು ವಿನಂತಿಸಿದ. ಆದರೆ ಕಾವಲುಗಾರ ಕೇಳಬೇಕಲ್ಲಾ. ಎಷ್ಟೇ ಮನವಿಮಾಡಿಕೊಂಡರೂ ರೈಲು ಬಂದು ಹೋಗದ ಹೊರತು ಮೈಸೂರು ಮಹಾರಾಜರು ಬಂದರೂ ತಾನು ರೈಲ್ವೆ ಗೇಟು ತೆಗೆಯಲು ಸಾಧ್ಯವಿಲ್ಲ ಎಂದು ಖಡಾಖಂಡಿತವಾಗಿ ತಿಳಿಸಿದ. ಸ್ವಲ್ಪ ಸಮಯದ ನಂತರ ರೈಲು ಬಂದು ಹೋದ ನಂತರವೇ ಗೇಟನ್ನು ತೆರೆದ. ಮಾರನೆಯದಿನ ರೈಲ್ವೆ ಕಾವಲುಗಾರನಿಗೆ ಡಿವಿಜನಲ್ ಮ್ಯಾನೇಜರನ್ನು ಭೇಟಿಯಾಗಬೇಕೆಂದು ಕರೆ ಬಂತು. ಆಗ ಮ್ಯಾನೇಜರ್ ಆಗಿದ್ದವರು ಶಿಸ್ತು ಮತ್ತು ದಕ್ಷತೆಗೆ ಹೆಸರಾಗಿದ್ದ ಒಬ್ಬ ಆಂಗ್ಲ ಅಧಿಕಾರಿ. ಅವರಿಗೆ ಇಲಾಖೆಯಲ್ಲಿ ಒಳ್ಳೆಯ ಹೆಸರಿತ್ತು. ಹೀಗಾಗಿ ಅವರಿಂದ ಕರೆ ಬಂದಿದೆಯೆಂದರೆ ಕಾವಲುಗಾರನಿಗೆ ನಡುಕ. ತನ್ನಿಂದ ಯಾವ ತಪ್ಪಾಗಿರಬಹುದು ಅದಕ್ಕೆ ವಿಧಿಸುವ ಶಿಕ್ಷೆ ಏನಿರಬಹುದು ಎಂದು. ಭಯದಿಂದ ನಡುಗುತ್ತಾ ಬಂದ ಕಾವಲುಗಾರನನ್ನು ನೋಡಿ ಎದ್ದು ನಿಂತು, ಹಸ್ತಲಾಘವ ನೀಡಿ ಬರಮಾಡಿಕೊಂಡ ಆ ಅಧಿಕಾರಿ ಮುಚ್ಚಿದ ಲಕೋಟೆಯೊಂದನ್ನು ಕಾವಲುಗಾರನಿಗೆ ನೀಡಿ ಮುಗುಳ್ನಕ್ಕರು. ತನ್ನನ್ನು ಕೆಲಸದಿಂದ ತೆಗೆದುಹಾಕಿರುವ ಆದೇಶವಿರಬಹುದೆ ಎಂದು ನಡುಗುವ ಕೈಗಳಿಂದ ಲಕೋಟೆಯನ್ನು ತೆರೆದಾಗ ಅವನಿಗೆ ಅಚ್ಚರಿ ಕಾದಿತ್ತು. ಅದು ಆತನ ಕರ್ತವ್ಯ ನಿಷ್ಠೆಗೆ ನೀಡಿದ ಪ್ರಶಂಸಾಪತ್ರ ಮತ್ತು ಒಂದುನೂರು ರುಪಾಯಿಗಳ ಬಹುಮಾನ. ಹಿಂದಿನ ದಿನ ತಡೆದು ನಿಲ್ಲಿಸಿದ್ದ ಕಾರಿನಲ್ಲಿ ಸ್ವತಃ ಮೈಸೂರಿನ ಮಹಾರಾಜರಾಗಿದ್ದ ಕೃಷ್ಣರಾಜ ಒಡೆಯರ್ ಅವರಿದ್ದರು. ಆ ಕಾವಲುಗಾರ ಯಾವ ಒತ್ತಡಕ್ಕೂ ಮಣಿಯದೆ ತನ್ನ ಕರ್ತವ್ಯವನ್ನು  ನಿಷ್ಠೆಯಿಂದ ಮಾಡಿದ್ದಕ್ಕೆ ಮಹಾರಾಜರಿಂದ ಪುರಸೃತನಾಗಿದ್ದ.

 ಪ್ರೊ. ಎಂ. ಎನ್. ಸುಂದರರಾಜ್, ಶಿವಮೊಗ್ಗ


Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ನಾಳೆ CJPಯ ತಿರಂಗಾ ಮೆರವಣಿಗೆ ನಡೆಯಬೇಕಿದ್ದ ದೆಹಲಿಯ ಸೆಂಟ್ರಲ್ ಪಾರ್ಕ್ ಅನ್ನು 2 ದಿನ ಮುಚ್ಚಿದ NDMC!

ಕನ್ನಡಿಗರು ಕೊಟ್ಟ ದುಡ್ಡಲ್ಲೇ AR Rahman ತಮ್ಮ ಮೊದಲ ಸ್ಟುಡಿಯೋ ಕಟ್ಟಿದ್ದು: ನಟ ಯಶ್

ದೇಶಕ್ಕೆ ಹೇಗೆ ಬೆಂಕಿ ಹಚ್ಚಬೇಕು ಎಂಬುದನ್ನು ಬಾಂಗ್ಲಾದೇಶ ನಮಗೆ ತೋರಿಸಿಕೊಟ್ಟಿದೆ: ನೇಹಾ ಬೋರಾ ಹೇಳಿಕೆಗೆ ಬಿಜೆಪಿ ಆಕ್ರೋಶ!

Ramayana: 'ರಾಮಾಯಣ'ದ ರನ್ ಟೈಮ್ ಮೂರು ಗಂಟೆಗೂ ಹೆಚ್ಚು; ಅಮೆರಿಕದಲ್ಲಿ 'PG-13' ರೇಟಿಂಗ್!

ದೆಹಲಿಯ ರಾಮಲೀಲಾದಲ್ಲಿ ಈ ಬಾರಿ ರಾವಣನ ಜೊತೆಗೆ 30 ಅಡಿ ಎತ್ತರದ ಕಾಕ್ರೋಚ್ ಪ್ರತಿಕೃತಿ ದಹನ!