ಹೋಗುವಾಗ ಖಾಲಿ ಕೈಯಲ್ಲಿ ಹೋದರೂ ಬರುವಾಗ ಮಾತ್ರ ಕೈ ತುಂಬಾ ಹಿಡಿದು ಬರುವವ
ಅಂಗಡಿಕಾರನ ಬಂಧು. ಆಗಾಗ ಬಂದು ಹೋಗುವುದರಿಂದ
ಬೆಲೆ ಏರಿದಂತೆ ಇವನ ಸ್ಥಿತಿ ಬೀಳುವ ಮೀನು
ಕೊಳ್ಳುವವನೆ ಮಹಾಶೂರ ಎಂದು ನಂಬಿಸಲ್ಪಟ್ಟವ
ಜಾಹೀರಾತಿಗೆ ಕೊರಳ ಹೊರಳಿಸುವ ಮರುಳ
ಕಂಪೆನಿಗಳೆಂಬ ಬಕಗಳಿಗೆ ಬಲಿಯಾಗುವ ಕೊಳ್ಳುಬಾಕ
ಬಾಕಿ ಬರೆಸಿಟ್ಟು ಹೋಗುವ ಗಿರಾಕಿ
ಖರೀದು ಮೂಲಕ ಕಿಸೆ ಬರಿದು ಮಾಡಿಕೊಳ್ಳುವವ
ಸಾಕು ಮತ್ತು ಬೇಕುಗಳ ಮಧ್ಯೆ ಬಿದ್ದು ಒದ್ದಾಡುವವ
ಉದ್ರಿ ಬರೆಸಿಡುವುದರಲ್ಲಿ ಉದಾರ ನೀತಿ ಪಾಲಿಸುವವ
ಕಷ್ಟಗಳೆಲ್ಲ ಏನಿದ್ದರೂ ಕಸ್ಟಮರ್ ಪಾಲಿಗೇ...
ಬೇಕೇ ಬೇಕು... ಎನ್ನುವುದೇ ಈತನ ಮಂತ್ರ
ಕಂಜೂಸು ಕನ್ಸ್ಯೂಮರ್
ಚಿಲ್ಲರೆಗಾಗಿ ಜಗಳ ಕಾಯುವವ
-ವಿಶ್ವನಾಥ ಸುಂಕಸಾಳ