ಸಂಪಾದಕೀಯ

ಎಣ್ಣೆ ಹೊಡೆಯೋರಿಗೆ ಜಾಸ್ತಿ ಸ್ನೇಹಿತರು ಇರುತ್ತಾರಂತೆ?

ಬಸವನಗೌಡ ಹೆಬ್ಬಳಗೆರೆ, ಚನ್ನಗಿರಿ
ಎಣ್ಣೆ ಹೊಡೆಯೋರಿಗೆ ಜಾಸ್ತಿ ಸ್ನೇಹಿತರು ಇರುತ್ತಾರಂತೆ?
ಕೆಟ್ಟ ಕೆಲಸಕ್ಕೆ ಸ್ನೇಹಿತರು ಜಾಸ್ತಿ!

ಎಂ.ಬಿ. ಕೃಷ್ಣಮೂರ್ತಿ, ಚಾಮರಾಜನಗರ, 9449130531
ಮುದ್ದಿಸುವುದಕ್ಕೂ, ಚುಂಬಿಸುವುದಕ್ಕೂ ವ್ಯತ್ಯಾಸ?
ಸಿಹಿ ತಿಂಡಿಯನ್ನು ನೋಡುವುದಕ್ಕೂ ತಿನ್ನುವುದಕ್ಕೂ ಇರುವಷ್ಟೇ ವ್ಯತ್ಯಾಸ.

ಫ್ಯಾಷನ್ ಡಿಸೈನರ್ ಮಧು, 9945737427
ಹಳೆಯ ಪ್ರೇಮವನ್ನು ಮರೆಯಲು 'ಗುಂಡು' ಹಾಕುವ ಪ್ರೇಮಿಗಳು ಗುಂಡು ಹಾಕಿದ ಮೇಲೂ ಹಳೆಯ ಪ್ರೇಮವನ್ನು ನೆನಪಿಸಿಕೊಂಡು ಒಂದೇ ಕಣ್ಣಿನಲ್ಲಿ ಅಳ್ತಾರಲ್ಲ ಯಾಕೆ?
ಇನ್ನೊಂದು ಕಣ್ಣಿನಿಂದ ಇನ್ನೊಬ್ಬಳನ್ನು ನೋಡುತ್ತಿರುವುದರಿಂದ!

ಚಿರಪ್ರಭ ನಂಜನಗೂಡು, 8553793107
ಸ್ತ್ರೀಯರಿಗೆ ಸ್ತ್ರೀಶಕ್ತಿ, ಕೂಲಿಕಾರರಿಗೆ ಉದ್ಯೋಗಖಾತ್ರಿ, ಬಡವರಿಗೆ 30ಕ್ಕೆ 30 ಕೆ.ಜಿ. ಅಕ್ಕಿ, ದುಡಿಯುವ ರೈತರಿಗೆ?
ಆತ್ಮಹತ್ಯೆ ಮಾಡಿಕೊಂಡರೆ 1 ಲಕ್ಷ!


ಕೆ.ಜೆ. ರಾಮಪ್ರಸಾದ್ ಕಡೂರು
ನಾನು ಕನ್ನಡದ ಕೋಟ್ಯಧಿಪತಿ ಕಾರ್ಯಕ್ರಮಕ್ಕೆ ಸ್ಪರ್ಧಿಸಲು ಹೋಗುತ್ತೇನೆ. ಆಗ ಫೋನ್ ಎ ಫ್ರೆಂಡ್‌ಗೆ ನಿಮ್ಮ ನಂಬರ್ ಕೊಡುವಿರಾ?
ಕೊಡಬಹುದು. ಆದರೆ ಕಾಲ್ ಬಂದಾಗ ತುಂಬಾ ಹೊತ್ತು ಎಂಗೇಜ್ ಇದ್ರೆ ಬೈಕೋಬಾರ್ದು.


 -ಬಾಣಭಟ್ಟ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಭಾರತೀಯರ ಸಾಮೂಹಿಕೆ ಹತ್ಯೆಗೆ ಸಂಚು: ರೈಫಲ್ ಹಿಡಿದು ಅಮೆರಿಕದ ಹಿಂದೂ ದೇವಸ್ಥಾನಕ್ಕೆ ನುಗ್ಗಿದ್ದ ಶೂಟರ್; ಕೊನೆ ಕ್ಷಣದಲ್ಲಿ ಗನ್ ಜಾಮ್, ಆರೋಪಿ ಬಂಧನ..!

ಶೃಂಗೇರಿ ಮತ ಎಣಿಕೆ Video ನಾಪತ್ತೆ: ಚುನಾವಣಾ ಆಯೋಗಕ್ಕೆ ಸುಪ್ರೀಂ ಕೋರ್ಟ್ ತರಾಟೆ..!

ಸ್ಥಳೀಯ ಸಂಸ್ಥೆಗಳಿಗೂ ಜಿಎಸ್‌ಟಿ ಆದಾಯ ಹಂಚಿಕೆ: GST ಮಂಡಳಿಗೆ ರಾಜ್ಯ ಸರ್ಕಾರ ಪ್ರಸ್ತಾವನೆ

ಸ್ಟಿಂಗ್‌ ಆಪರೇಷನ್‌ ಬಗ್ಗೆ ಬೇರೆಯವರು ಮಾತನಾಡುವ ಆಗಿಲ್ಲ ಎನ್ನಲು ನೀವೇನು ಸರ್ವಾಧಿಕಾರಿಯೇ ಪ್ರಿಯಾಂಕ್‌ ಖರ್ಗೆ..?

1 ವರ್ಷ ಗ್ಯಾರಂಟಿ ಯೋಜನೆಗಳ ನಿಲ್ಲಿಸಿ, ಹಣವನ್ನು ರೈತರಿಗೆ ನೀಡಿ: ರಾಜ್ಯ ಸರ್ಕಾರಕ್ಕೆ ದಿಂಗಾಲೇಶ್ವರ ಶ್ರೀಗಳ ಆಗ್ರಹ