ಹೆಂಡತಿ ಹೇಳಿದ ಹಾಗೆ ಗಂಡ ಕೇಳಬೇಕಾ? ಗಂಡ ಹೇಳಿದ ಹಾಗೆ ಹೆಂಡತಿ ಕೇಳಬೇಕಾ?
ಹೆಂಡತಿ ಹೇಳಿದ ಹಾಗೆ ಗಂಡ ಕೇಳಬೇಕು ಅಥವಾ ಗಂಡ ಹೆಂಡತಿ ಹೇಳಿದ ಹಾಗೆ ಕೇಳಬೇಕು!
ಬಿ.ಎಂ. ಪರಶಿವಮೂರ್ತಿ, ವಿಜಯನಗರ, ಬೆಂಗಳೂರು
ಅವಳ ಹೃದಯದ ಮೇಲೆ ನನ್ನ ಮನಸ್ಸಿನ 'ಮೌಸ್'ನ ಎಷ್ಟೇ ಕ್ಲಿಕ್ ಮಾಡಿದರೂ ಅವಳ ಹೃದಯದ 'ವಿಂಡೋ' ಓಪನ್ ಆಗ್ತಾನೇ ಇಲ್ವಲ್ಲ?
ವಿಂಡೋ ಕರಪ್ಟ್ ಆಗಿರಬೇಕು!
ಫ್ಯಾಷನ್ ಡಿಸೈನರ್ ಮಧು, 9945737427
ದಾಂಪತ್ಯ ಎಂಬ ರಥದಲ್ಲಿ ಸುಖಕ್ಕಿಂತ ಕಷ್ಠಗಳೇ ಜಾಸ್ತಿ ಅಂತಾನಲ್ಲ?
ಅದು ಅವನ ಅನುಭವ. ನಿನ್ನ ಅನುಭವ ಬೇರೆಯೇ ಆಗಿರಬಹುದು.
ಕಾಳೀಹುಂಡಿ ಶಿವಕುಮಾರ, ಮೈಸೂರು
ಕಾವೇರಿ ವಿವಾದದಲ್ಲಿ ಕೇಂದ್ರ ಸರ್ಕಾರ ಕರ್ನಾಟಕವನ್ನು ಸೊಸೆಯಂತೆ, ತಮಿಳುನಾಡನ್ನು ಮಗಳಂತೆ ಕಾಣಲು ಕಾರಣ?
ಅವರು ಅತ್ತೆ ಸ್ಥಾನದಲ್ಲಿರುವುದು!
ಚಿರಪ್ರಭ ನಂಜನಗೂಡು, 8553793107
ಹುಡ್ಗೀರು ಯಾಕೆ ಟೈಟ್ ಪ್ಯಾಂಟನ್ನೇ ಹಾಕ್ತಾರೆ?
ಹುಡುಗರು ಲೂಸ್ಗಳ ಥರ ಆಡೋದ್ರಿಂದ!
ಓಂಚನ್ನೇಶ್, ಅರಬಿಳಚಿ ಕ್ಯಾಂಪ್ ಭದ್ರಾವತಿ
- ಬಾಣಭಟ್ಟ