ಸಂಪಾದಕೀಯ

ಓದಿನಲ್ಲಿಯೂ ದಾಖಲೆ ಸ್ಥಾಪಿಸಿದ ಮಿತ್ತಲ್

ಕಲ್ಕತ್ತಾದ ಸೆಲ್ಟ್ ಕ್ಸೇವಿಯರ್ ಕಾಲೇಜು ಅಮೆರಿಕದ ಶಿಕಾಗೋದ ಸೇಂಟ್ ಕ್ಸೇವಿಯರ್ ವಿಶ್ವವಿದ್ಯಾನಿಲಯದ ಅಡಿಯಲ್ಲಿ ಪ್ರಾರಭವಾದ ಕಾಲೇಜು. ಅದು ಪ್ರತಿಭಾವಂತರು ಮತ್ತು ಪ್ರತಿಷ್ಠಿತರಿಗೆ ಮಾತ್ರ ಮೀಸಲಾಗಿದ್ದ ಕಾಲೇಜಾದ್ದರಿಂದ ಅಲ್ಲಿ ಸೀಟು ಗಿಟ್ಟಿಸುವುದು ಸುಲಭಸಾಧ್ಯವಾಗಿರಲಿಲ್ಲ.  ಹಿಂದಿ ಮಾಧ್ಯಮದಲ್ಲಿ ಓದಿ ಮುಂದಿನ ವಿದ್ಯಾಭ್ಯಾಸ ಮಾಡಲು ಆ ಕಾಲೇಜಿಗೆ ಸೇರಲು ಹೋದ ಹಳ್ಳಿಯ ಹಿನ್ನಲೆಯಿದ್ದ ಒಬ್ಬ ಬಾಲಕನಿಗೆ ನಿರಾಶೆ ಕಾದಿತ್ತು. ಇಂಗ್ಲಿಷ್ ಮಾಧ್ಯಮದಲ್ಲಿ ಕಲಿತಿಲ್ಲವಾದ್ದರಿಂದ ಆ ಕಾಲೇಜಿನಲ್ಲಿ ಪ್ರವೇಶ ನಿರಾಕರಿಸಲಾಯಿತು. ಪ್ರಿನ್ಸಿಪಾಲರು ಮತ್ತು ಆಡಳಿತ ಮಂಡಳಿ ಅವನ ಅರ್ಜಿಯನ್ನು ಸಾರಾಸಗಟಾಗಿ ತಿರಸ್ಕರಿಸಿತು. ಸೋಲನ್ನು ಅಷ್ಟು ಸುಲಭವಾಗಿ ಒಪ್ಪದ ಆ ಬಾಲಕ ಪ್ರತಿನಿತ್ಯ ಪ್ರಿನ್ಸಿಪಾಲರ ಮನೆಗೆ ಹೋಗಿ ತನಗೆ ಸೀಟು ನೀಡಬೇಕೆಂದೂ, ತಾನು ಆದಷ್ಟು ಬೇಗ ಇಂಗ್ಲಿಷ್ ಕಲಿತು ಅದರಲ್ಲಿ ಪಾಂಡಿತ್ಯ ಪಡೆಯುವುದಾಗಿ ದುಂಬಾಲು ಬಿದ್ದ. ಕೊನೆಗೂ ಅವನ ಮನವಿಗೆ ಸ್ಪಂದಿಸಿದ ಪ್ರಿನ್ಸಿಪಾಲರು, ಆದಷ್ಟು ಬೇಗ ಇಂಗ್ಲಿಷ್ ಕಲಿಯಬೇಕೆಂಬ ನಿಬಂಧನೆಯ ಮೇಲೆ ಶಾಲೆಗೆ ದಾಖಲು ಮಾಡಿಕೊಂಡರು. ಹಿಂದಿ ಮಾಧ್ಯಮದ ಶಾಲೆಯಿಂದ ಬಂದವನಾದ್ದರಿಂದ ಇಂಗ್ಲಿಷ್ ಕಲಿಯಲು ಪ್ರಾರಂಭದಲ್ಲಿ ಆತನಿಗೆ ತುಂಬಾ ಕಷ್ಟವಾಯಿತು. 'ಏಕಾದರೂ ಈ ಕಾಲೇಜಿಗೆ ಬಂದೆನೋ!' ಎಂದು ಯೋಚಿಸಿದ್ದೂ ಇದೆ. ಆದರೆ ಅಷ್ಟು ಸುಲಭವಾಗಿ ಸವಾಲಿಗೆ ಶರಣಾಗದ ಆ ಹದಿನಾರರ ಪೋರ ತುಂಬಾ ಶ್ರದ್ಧೆಯಿಂದ ಮತ್ತು ಆಸಕ್ತಿಯಿಂದ ದಿನದ ಹೆಚ್ಚು ಕಾಲವನ್ನು ಇಂಗ್ಲಿಷ್ ಕಲಿಯಲು ಮೀಸಲಾಗಿಟ್ಟ. ಪರಿಣಾಮ ಬಿ.ಕಾಂ. ಪದವಿಯ ಅಂತಿಮ ಪರೀಕ್ಷೆಯಲ್ಲಿ ಇಡೀ ಸೇಂಟ್ ಕ್ಸೇವಿಯರ್ ವಿಶ್ವವಿದ್ಯಾನಿಲಯಕ್ಕೇ ಅತಿಹೆಚ್ಚು ಅಂಕ ಗಳಿಸಿದ ಕೀರ್ತಿ ಆತನಿಗೆ ಒಲಿದು ಬಂತು! ಪ್ರವೇಶ ನಿರಾಕರಿಸಿದ್ದ ಪ್ರಿನ್ಸಿಪಾಲರೇ ಸ್ವತಃ ಅಭಿನಂದಿಸಿ, ತಮ್ಮ ಕಾಲೇಜಿನಲ್ಲಿ ಅಧ್ಯಾಪಕರಾಗಿ ಸೇವೆ ಸಲ್ಲಿಸಲು ಕೇಳಿಕೊಂಡರು! ಆ ಯುವಕ ಬೇರೆ ಯಾರೂ ಅಲ್ಲ. 'ಉಕ್ಕಿನ ರಾಜ'ನೆಂದೇ ಕರೆಯಲ್ಪಡುವ, ವಿಶ್ವದ ಶ್ರೀಮಂತರಲ್ಲಿ ಹನ್ನೊಂದನೇ ಸ್ಥಾನ ಗಳಿಸಿದ, ಇಂಗ್ಲೆಂಡಿನ ಅತ್ಯಂತ ಹೆಚ್ಚು ಹಣವಂತ ಎಂದೆಲ್ಲಾ ಹೆಸರು ಪಡೆದ ಉದ್ಯಮಿ ಲಕ್ಷ್ಮಿ ಮಿತ್ತಲ್! ತಮಗೆ ಕ್ಸೇವಿಯರ್‌ನಿಂದ ದೊರೆತ ಅನುಭವಗಳಿಂದಲೇ ಮುಂದೆ ಉಕ್ಕಿನ ಉದ್ಯಮ ಪ್ರಾರಂಭಿಸಿದಾಗ ಎದುರಾದ ಸವಾಲುಗಳನ್ನು ಎದುರಿಸಲು ಸಾಧ್ಯವಾಯಿತು ಎಂದು ಮಿತ್ತಲ್ ಒಂದೆಡೆ ಹೇಳಿಕೊಂಡಿದ್ದಾರೆ. ನಾವೇನು ಮಾಡುತ್ತೇವೆಯೋ ಅದರಲ್ಲಿ ಹಠ ಮತ್ತು ಪ್ರೀತಿ ಇದ್ದರೆ ಏನು ಬೇಕಾದರೂ ಸಾಧಿಸಬಹುದು ಎಂಬುದಕ್ಕೆ ಮಿತ್ತಲ್ ಜೀವಂತ ಉದಾಹರಣೆ. ವಿಶ್ವಾದ್ಯಂತ ಕಾರ್ಖಾನೆಗಳನ್ನು ಸ್ಥಾಪಿಸಿ ಜನಪ್ರಿಯತೆಯ ತುತ್ತ ತುದಿಗೇರಿರುವ ಮಿತ್ತಲ್ ಲಂಡನ್ನಿನ ವೈಭವೋಪೇತ ಬಂಗಲೆಯಲ್ಲಿ ಅನೇಕ ವರ್ಷಗಳಿಂದ ನೆಲೆಸಿದರೂ ಭಾರತೀಯ ನಾಗರಿಕನಾಗಿಯೇ ಉಳಿಯುವ ಸಂಕಲ್ಪ ಮಾಡಿದ್ದಾರೆ. ಮುಂದೊಂದು ದಿನ ನಿವೃತ್ತರಾದಾಗ ಪ್ರಾಧ್ಯಾಪಕರಾಗುವ ಹಿರಿದಾಸೆ ಅವರದು.

 -ಪ್ರೊ. ಎಂ. ಎನ್. ಸುಂದರರಾಜ್, ಶಿವಮೊಗ್ಗ
rajsundar1957@gmail.com


Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಹನಿಟ್ರ್ಯಾಪ್ ಭೀತಿಯಲ್ಲಿದ್ದ ಸಿದ್ದರಾಮಯ್ಯಗೆ ಬಿಗ್ ರಿಲೀಫ್: ಮಾಧ್ಯಮಗಳಿಗೆ ವಿಡಿಯೋ ಪ್ರಸಾರ ಮಾಡದಂತೆ ನಿರ್ಬಂಧ ವಿಧಿಸಿದ ಕೋರ್ಟ್

ಅವಧಿಗೂ ಮುನ್ನವೇ ಕೇಂದ್ರ ಸಚಿವ ಮತ್ತು ರಾಜ್ಯಸಭಾ ಸದಸ್ಯ ಸ್ಥಾನಕ್ಕೆ BJP ನಾಯಕ ಮುರುಗನ್ ರಾಜಿನಾಮೆ: PM ಮೋದಿಗೆ 5 ಪುಟಗಳ ಪತ್ರ!

'ಇಂಡಿಯಾ' ಮೈತ್ರಿಕೂಟದ ಒಗ್ಗಟ್ಟು ಮುರಿಯುತ್ತಿದೆಯೇ? ಜ್ಞಾನೇಶ್ ಕುಮಾರ್ ವಿರುದ್ಧ ಸುಪ್ರೀಂಗೆ ಅರ್ಜಿ, 4 ಪ್ರಮುಖ ಪಕ್ಷಗಳು "ದೂರ ದೂರ"

'ನೀನು ಭಯೋತ್ಪಾದಕ ಇಲ್ಲಿಂದ ಹೋಗು': ಅಮೆರಿಕದಲ್ಲಿ Nobel ಯೂನಸ್ ವಿರುದ್ಧ ಬಾಂಗ್ಲಾ ವಲಸಿಗರಿಂದ ಘೋಷಣೆ, Video

ಮುಖ್ಯ ಚುನಾವಣಾ ಆಯುಕ್ತರಿಗೆ ಪದ್ಮ ಪ್ರಶಸ್ತಿಗಳೇ ಲಂಚ: ಕೇಂದ್ರ ಸಚಿವ ಪಿಯೂಷ್ ಗೋಯಲ್ ಸ್ಫೋಟಕ ಹೇಳಿಕೆ