ಸಂಪಾದಕೀಯ

ಆತ್ಮಹತ್ಯೆ ತಪ್ಪಿಸಿದ ಗೀತೆ

ಯುಗಧರ್ಮದ ರಾಮಣ್ಣ ಮೂಲತಃ ಚನ್ನಗಿರಿ ತಾಲೂಕಿನ ಸಿದ್ಧರಮಠದವರು. ಓದಿದ್ದು ಒಂದನೇ ತರಗತಿಯಾದರೂ ಅಪಾರ ಪಾಂಡಿತ್ಯವನ್ನು ಹೊಂದಿರುವ ಇವರು ಆಶುಕವಿಗಳು. ಕುಳಿತಲ್ಲಿಯೇ ಪದಗಳನ್ನು, ವಚನಗಳನ್ನು ಮತ್ತು ಲಾವಣಿಗಳನ್ನು ಕಟ್ಟಿ ಸುಶ್ರಾವ್ಯವಾಗಿ ಹಾಡುತ್ತಾರೆ. ಇದುವರೆಗೆ ಇನ್ನೂರು ಜಾನಪದಗೀತೆಗಳು, ಮೂರುಸಾವಿರ ವಚನಗಳು, ಮೂರುಸಾವಿರ ಲಾವಣಿಗಳು, ಆರು ಸಾವಿರ ತ್ರಿಪದಿಗಳನ್ನು ರಚಿಸಿದ್ದಾರೆ.  ಯುಗಧರ್ಮ ತತ್ವಪದ, ಯುಗಧರ್ಮ ತ್ರಿಪದಿ, ಕನ್ನಡಮ್ಮನ ತೇರು, ತೋಚಿದ್ದು-ಗೀಚಿದ್ದು ಮತ್ತು ವಚನಧರ್ಮ ಎಂಬ ಕೃತಿಗಳನ್ನು ಹೊರತಂದಿದ್ದಾರೆ. ಇದೀಗ ಹೊಸದುರ್ಗ ತಾಲೂಕಿನ ಬ್ರಹ್ಮವಿದ್ಯಾನಗರದಲ್ಲಿ ದಡ್ರ ವಿಶ್ವವಿದ್ಯಾನಿಲಯ ಸ್ಥಾಪನೆಗೆ ಮುಂದಾಗಿದ್ದಾರೆ. ನಾಡಿನಾದ್ಯಂತ ತಿರುಗಿ ಸಹಸ್ರಾರು ಕಾರ್ಯಕ್ರಮಗಳನ್ನು ನೀಡಿರುವ ಯುಗಧರ್ಮದ ರಾಮಣ್ಣ ಬಾಯಿ ತೆರೆದರೆಂದರೆ ಗ್ರಾಮೀಣ ಸೊಗಡಿನ ನೂರಾರು ಪದಗಳು ಇವರ ಬಾಯಿಂದ ಹೊರಬರುತ್ತವೆ. ಎಪ್ಪತ್ತಾರರ ಇವರು ಇಪ್ಪತ್ತಾರರ ಯುವಕರಂತೆ ಕಂಗೊಳಿಸುತ್ತಾರೆ.
1978ರಲ್ಲಿ ಒಮ್ಮೆ ಚಿಕ್ಕಜಾಜೂರಿನಲ್ಲಿ ಗಣಪತಿ ಉತ್ಸವದ ಕಾರ್ಯಕ್ರಮದಲ್ಲಿ ಇವರ ಗಾಯನ ಏರ್ಪಾಟಾಗಿತ್ತು. ನೂರಾರು ಜನ ಸೇರಿದ್ದ ಸಭೆಯಲ್ಲಿ ಹತ್ತಿರದ ಬಾಣಗರೆಯ ಒಬ್ಬ ಯುವಕನೂ ಇದ್ದ. ಅವನು ಓಸಿ ಆಟದಲ್ಲಿ ಎಲ್ಲವನ್ನೂ ಕಳೆದುಕೊಂಡು, ಮೈತುಂಬಾ ಸಾಲಮಾಡಿಕೊಂಡು ದಾರಿಕಾಣದೆ ಅಂದು ರೈಲಿಗೆ ತಲೆಯೊಡ್ಡಿ ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿ ಬಂದಿದ್ದ. ರೈಲು ಬರಲು ಇನ್ನೂ ಸಮಯವಿದ್ದುದರಿಂದ ಈ ಕಾರ್ಯಕ್ರಮದಲ್ಲಿ ಒಂದೆಡೆ ಕುಳಿತು ಆಲಿಸುತ್ತಿದ್ದ. ಅಂದು ರಾಮಣ್ಣ ಓಸಿ ಆಟದ ಬಗ್ಗೆ ಹಾಡಿದ ಈ ಗೀತೆ ಅವನ ಮೇಲೆ ತುಂಬಾ ಪರಿಣಾಮ ಬೀರಿತಲ್ಲದೆ ಅವನ ಆತ್ಮಹತ್ಯೆಯ ನಿರ್ಧಾರವನ್ನೇ ಬದಲಿಸಿತು. ಆ ಹಾಡಿನ ಮೊದಲ ನಾಲ್ಕು ಸಾಲುಗಳು ಹೀಗಿವೆ,
'ಓಸಿ ಆಡಿ ಆಸ್ತಿ ಕಳೆದು
ಒಡೆಯಾಕತ್ತಿ ಡೋಲು
ಓಪನ್ ಆಗಿ ಕ್ಲೋಸ್ ಆಗಿ
ತಪ್ಪಿ ಬಿಡ್ತು ಕೀಲು'
ಇದಾಗಿ ಹತ್ತು ವರ್ಷದ ನಂತರ ಆ ವ್ಯಕ್ತಿ ರಾಮಣ್ಣನನ್ನು ಭೇಟಿಯಾದಾಗ ದೀರ್ಘದಂಡ ನಮಸ್ಕರಿಸಿ, ಆಗ ಹೇಳಿದ ಗೀತೆಯ ಪ್ರಭಾವದಿಂದ ತಾನೀಗ ಕಷ್ಟ ಪಟ್ಟು ದುಡಿದು ಸುಖವಾಗಿದ್ದೇನೆಂದು ಹೇಳಿದ. ತನ್ನ ಹಾಡು ಒಬ್ಬನ ಜೀವ ಉಳಿಸಿತಲ್ಲಾ ಎಂದು ಯುಗಧರ್ಮದ ರಾಮಣ್ಣನಿಗೆ ಸಮಾಧಾನವಾಯಿತು.

 ಪ್ರೊ. ಎಂ. ಎನ್. ಸುಂದರರಾಜ್, ಶಿವಮೊಗ್ಗ
rajsundar1957@gmail.com


Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ನೀವೂ ಪ್ರಧಾನಿ ಮೋದಿಯಂತೆಯೇ ದಬ್ಬಾಳಿಕೆದಾರರು, ಧೈರ್ಯವಿದ್ದರೆ 'ನಿಮ್ಮ ಆ ಚಿಕ್ಕ ಶಾಲು' ಧರಿಸಿ ಹೊರ ಬಂದು ನೋಡಿ: BJP-RSSಗೆ ರಾಹುಲ್ ಗಾಂಧಿ ಸವಾಲು

SC/ST ಮೀಸಲಾತಿ ಹೆಚ್ಚಳ ರದ್ದು: ರಾಜ್ಯ ಸರ್ಕಾರಕ್ಕೆ ಹೈಕೋರ್ಟ್‌ ಬಿಗ್ ಶಾಕ್, ಭಾರೀ ಹಿನ್ನಡೆ..!

ಕಾವೇರಿ ಕಗ್ಗಂಟು: "ಕುಡಿಯಲು ನಮಗೇ ನೀರಿಲ್ಲ, ತಮಿಳುನಾಡಿಗೆ ಕೊಡೋದು ಹೇಗೆ..?" ಸುಪ್ರೀಂ ಕೋರ್ಟ್‌ನಲ್ಲಿ ಕರ್ನಾಟಕ ವಾದ..!

ಸ್ಥಳೀಯ ಸಂಸ್ಥೆ ಚುನಾವಣೆ: ಕಾಂಗ್ರೆಸ್ ಭದ್ರಕೋಟೆ ಮುರಿಯಲು BJP-JDS ರಣತಂತ್ರ; HDK ನೇತೃತ್ವದಲ್ಲಿ ಮಹತ್ವದ ಸಭೆ..!

ಮಲೆನಾಡು, ಕರಾವಳಿ ರೈಲ್ವೆ ಯೋಜನೆಗಳಿಗೆ ಕೇಂದ್ರ ಸರ್ಕಾರ ಆದ್ಯತೆ: ಕೇಂದ್ರ ಸಚಿವ ವಿ. ಸೋಮಣ್ಣ