ಹುಡುಗ: ಹೇ ನನ್ನೊಲವ ಅಭಿಸಾರಿಕೆ...ಈ ಸಂಡೇ ಫ್ರೀ ಇದೀಯಾ? ಹೊರಗಡೆ ಸುತ್ತಾಡಿಕೊಂಡು ಬರೋಣ...
ಹುಡುಗಿ: 'ನೋ' ನನ್ನ ಪ್ರಾಣನಾಥ! ನಾನು ನನ್ನ ಫ್ರೆಂಡ್ ಮದುವೆಗೆ ಹೊರಟಿದೀನಿ...
ಹುಡುಗ: ಅಹುದೇ ಸಖಿ? ಛೆ, ಅವತ್ತು ನಿನಗೆ ಹೊಸ ಫೋನ್, ಹೊಸ ಡ್ರೆಸ್ ಕೊಡಿಸ್ಬೇಕು ಅನ್ಕೊಂಡಿದ್ದೆ. ಹೋಗ್ಲಿ ಬಿಡು.
ಹುಡುಗಿ: ಥೊತ್ತೇರಿಕಿ! 'ನಲ್ಲ' ನೀನು ಕರೆದರೆ ನಾನು 'ಇಲ್ಲ' ಅಂತ ಎಂದಾದರೂ ಹೇಳಿದ್ದೇನೆಯೇ?
ಹುಡುಗ: ಮತ್ತೆ ಕೆಲವೇ ನಿಮಿಷದ ಹಿಂದೆ, ಯಾರ್ದೋ ಮದುವೆಗೆ ಹೋಗ್ತಾ ಇದೀನಿ ಅಂದೆಯಲ್ಲ ಪ್ರಿಯೆ?
ಹುಡುಗಿ(ತಡವರಿಸುತ್ತಾ): ಸುಮ್ನೆ ತಮಾಷೆ ಮಾಡಿದೆ ಸಖ...
ಹುಡುಗ: ನಾನೂ ತಮಾಷೆ ಮಾಡಿದೆ ಸಖಿ. ಆಸೆಬುರುಕಿ!