ಸಂಪಾದಕೀಯ

ಭರತನಂತೆ ತಲೆಯ ಮೇಲಿಟ್ಟುಕೊಳ್ಳುತ್ತೇನೆ

ಹಿರೇಮಗಳೂರು  ಕೋದಂಡರಾಮನ ದೇವಾಲಯದಲ್ಲಿ ಪೂಜೆಯು ಕನ್ನಡದಲ್ಲೇ ನಡೆಯುತ್ತದೆ. ಇದೇ ಕಾರಣದಿಂದಲೇ ಆ ದೇವಾಲಯ ಪ್ರಖ್ಯಾತಿ ಪಡೆದಿದೆ. ಹಿಂದೆ ಅಲ್ಲೊಂದು ಸಾಹಿತ್ಯಿಕ ಕಾರ್ಯಕ್ರಮ ಏರ್ಪಾಟಾಗಿತ್ತು. ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಮತ್ತು ಕವಿಗೋಷ್ಠಿ ಆಯೋಜಿಸಲಾಗಿತ್ತು. ಅದರಲ್ಲಿ ಭಾಗವಹಿಸಲು, ಸಾಹಿತ್ಯ ಸಂವಾದವನ್ನು ಆಲಿಸಲು ಹಲವಾರು ಜನ ಸಾಹಿತ್ಯಾಸಕ್ತರು ಅಲ್ಲಿಗೆ ಬಂದಿದ್ದರು. ಸಾಹಿತ್ಯ ಪ್ರಿಯರಿಗೆ ಅದೊಂದು ಅಪರೂಪದ ಕಾರ್ಯಕ್ರಮ. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದವರು ಕವಿಗಳೂ, ಸಂಗೀತಪ್ರೇಮಿಗಳೂ, ಮೆಲುನುಡಿಯ ಸಜ್ಜನ ಪುತ್ತೂರಿನ ಮಾಧವನಾಯಕರು. ಅವರ ದೃಷ್ಟಿಯಲ್ಲಿ ವೇದಿಕೆ ಬೃಹಸ್ಪತಿ, ಪ್ರೇಕ್ಷಕರು ಸರಸ್ಪತಿ ಸ್ವರೂಪವಾದ್ದರಿಂದ ಪಾದರಕ್ಷೆಯನ್ನು ವೇದಿಕೆಯ ಮೇಲೆ ಹಾಕಿಕೊಂಡು ಬರದೆ ಕೆಳಗೆ ಒಂದೆಡೆ  ಇರಿಸಿ, ಮೇಲೇರಿದರು. ಬೆಳಗಿನ ಕಾರ್ಯಕ್ರಮ ಮುಗಿದು ಭೋಜನಕ್ಕಾಗಿ ಕೆಳಗಿಳಿದು ನೋಡಿದರೆ ಅವರ ಪಾದರಕ್ಷೆ ಮಾಯ! ಎಲ್ಲಿ ಹುಡುಕಿದರೂ ಕಾಣಲೊಲ್ಲದು.
ಯಾರೋ ಅದನ್ನು ಹಾಕಿಕೊಂಡು ಹೋಗಿದ್ದಾರೆ. ಅವರು ಹುಡುಕುತ್ತಿದ್ದ ಪರಿಯನ್ನು ನೋಡಿದ ಹಿರೇಮಗಳೂರು ಕಣ್ಣನ್‌ರಿಗೆ ಪರಿಸ್ಥಿತಿಯ ಅರಿವಾಯಿತು. ಪಾಪ, ದೂರದಿಂದ ಅತಿಥಿಗಳಾಗಿ ಬಂದವರು ತಮ್ಮ ಊರಿನಲ್ಲಿ, ಅದೂ ಕೋದಂಡರಾಮನ ಸನ್ನಿಧಿಯಲ್ಲಿ ಪಾದರಕ್ಷೆ ಕಳೆದುಕೊಂಡದ್ದು ಅವರಿಗೆ ಬೇಸರ ತರಿಸಿತು.
ಮಧ್ಯಾಹ್ನ ಮತ್ತೆ ಕಾರ್ಯಕ್ರಮ ಪ್ರಾರಂಭವಾದಾಗ ಅತಿಥಿಗಳನ್ನು ಪರಿಚಯ ಮಾಡಿಕೊಡುತ್ತಾ ಕಣ್ಣನ್ ಹೇಳಿದರು, 'ಹಿಂದೆ ಭರತ ರಾಮನ ಪಾದುಕೆಯನ್ನೊಯ್ದು ಅವನ ಹೆಸರಿನಲ್ಲಿ ರಾಜ್ಯಭಾರ ಮಾಡಿದ. ಯಾರೋ ಪುಣ್ಯಾತ್ಮರು ರಾಮನ ಪ್ರಸಾದವೆಂದು ತಿಳಿದು ಮಾಧವನಾಯಕರ ಪಾದರಕ್ಷೆಗನ್ನು ಒಯ್ದಿದ್ದಾರೆ. ಅದಕ್ಕಾಗಿ ರಾಮ ಅಯೋಧ್ಯೆಗೆ ವನವಾಸದಿಂದ ಮರಳಿದಾಗ ಭರತ ಪಾದುಕೆಗಳನ್ನು ಅರ್ಪಿಸಿದಂತೆ, ತಾನು ಹೊಸ ಪಾದರಕ್ಷೆಗಳನ್ನು ಮುಖ್ಯ ಅತಿಥಿಗಳಿಗೆ ಅರ್ಪಿಸುತ್ತಿದ್ದೇನೆ' ಎಂದು ಅತಿಥಿಗಳ ಮುಂದೆ ತಾವು ತಂದ ಹೊಸ ಪಾದರಕ್ಷೆಗಳನ್ನು ಇಟ್ಟು, ಒಪ್ಪಿಸಿಕೊಳ್ಳಬೇಕೆಂದು ಮನವಿಮಾಡಿದರು. ಕಣ್ಣನ್ ಅವರ ಹೃದಯ ಶ್ರೀಮಂತಿಕೆಗೆ ಬೆರಗಾದ ನಾಯಕರು ಭಾವಪರವಶತೆಯಿಂದ ಮಾತನಾಡಿ, 'ತಾವೂ ಸಹ ರಾಮನಂತೆ ಈ ಪಾದುಕೆಗಳನ್ನು ಧರಿಸದೇ, ಹನುಮಂತನಂತೆ ಅವುಗಳನ್ನು ತಲೆಯ ಮೇಲಿರಿಸಿಕೊಂಡು ಮನೆಗೆ ಹೋಗುತ್ತೇನೆ' ಎಂದಾಗ ಜನ ಕಿವಿಗಡಚಿಕ್ಕುವಂತೆ ಚಪ್ಪಾಳೆ ತಟ್ಟಿದರು. ಈ ಪ್ರಸಂಗ ವಿದ್ವಾಂಸರಿಬ್ಬರ ಹೃದಯ ವೈಶಾಲ್ಯತೆಯನ್ನೂ, ಪರಸ್ಪರ ಗೌರವಿಸುವ ಮನೋಭಾವವನ್ನೂ ತಿಳಿಸಿಕೊಡುತ್ತದೆ.

 ಪ್ರೊ. ಎಂ. ಎನ್. ಸುಂದರರಾಜ್, ಶಿವಮೊಗ್ಗ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಹನಿಟ್ರ್ಯಾಪ್ ಭೀತಿಯಲ್ಲಿದ್ದ ಸಿದ್ದರಾಮಯ್ಯಗೆ ಬಿಗ್ ರಿಲೀಫ್: ಮಾಧ್ಯಮಗಳಿಗೆ ವಿಡಿಯೋ ಪ್ರಸಾರ ಮಾಡದಂತೆ ನಿರ್ಬಂಧ ವಿಧಿಸಿದ ಕೋರ್ಟ್

ಅವಧಿಗೂ ಮುನ್ನವೇ ಕೇಂದ್ರ ಸಚಿವ ಮತ್ತು ರಾಜ್ಯಸಭಾ ಸದಸ್ಯ ಸ್ಥಾನಕ್ಕೆ BJP ನಾಯಕ ಮುರುಗನ್ ರಾಜಿನಾಮೆ: PM ಮೋದಿಗೆ 5 ಪುಟಗಳ ಪತ್ರ!

'ಇಂಡಿಯಾ' ಮೈತ್ರಿಕೂಟದ ಒಗ್ಗಟ್ಟು ಮುರಿಯುತ್ತಿದೆಯೇ? ಜ್ಞಾನೇಶ್ ಕುಮಾರ್ ವಿರುದ್ಧ ಸುಪ್ರೀಂಗೆ ಅರ್ಜಿ, 4 ಪ್ರಮುಖ ಪಕ್ಷಗಳು "ದೂರ ದೂರ"

'ನೀನು ಭಯೋತ್ಪಾದಕ ಇಲ್ಲಿಂದ ಹೋಗು': ಅಮೆರಿಕದಲ್ಲಿ Nobel ಯೂನಸ್ ವಿರುದ್ಧ ಬಾಂಗ್ಲಾ ವಲಸಿಗರಿಂದ ಘೋಷಣೆ, Video

ಮುಖ್ಯ ಚುನಾವಣಾ ಆಯುಕ್ತರಿಗೆ ಪದ್ಮ ಪ್ರಶಸ್ತಿಗಳೇ ಲಂಚ: ಕೇಂದ್ರ ಸಚಿವ ಪಿಯೂಷ್ ಗೋಯಲ್ ಸ್ಫೋಟಕ ಹೇಳಿಕೆ