ಸಂಪಾದಕೀಯ

ಹಿರಿಯಣ್ಣಯ್ಯನವರ ಕಾರ್ಯ ತತ್ಪರತೆ

ರಾಜಸೇವಾಸಕ್ತ ಸಕಲೇಶಪುರದ ಹಿರಿಯಣ್ಣನವರು 1904 ರಲ್ಲಿಯೇ ಪ್ರೊಬೇಷನರಿ ಅಧಿಕಾರಿಯಾಗಿ ಸೇವೆಗೆ ಸೇರಿದವರು. ನಂತರ ಅಸಿಸ್ಟೆಂಟ್ ಕಮೀಷನರಾಗಿ, ಜಿಲ್ಲಾಧಿಕಾರಿಗಳಾಗಿ, ಸರ್.ಎಂ.ವಿಯವರು ದಿವಾನರಾಗಿದ್ದಾಗ ಅವರ ಆಪ್ತಕಾರ್ಯದರ್ಶಿಯಾಗಿ, ಎಕ್ಸೈಜ್ ಕಮೀಷನರ್‌ರಾಗಿ, ರೆವಿನ್ಯೂ ಕಮೀಷನರರಾಗಿ ಸೇವೆ ಸಲ್ಲಿಸಿದರು. ಅವರು ಶಿವಮೊಗ್ಗ ಜಿಲ್ಲೆಯ ಜಿಲ್ಲಾಧಿಕಾರಿಗಳಾಗಿದ್ದಾಗ ಭಾರತದ ವೈಸ್‌ರಾಯ್ ಲಾರ್ಡ್ ಚಲ್ಮ್ ಫೋರ್ಡ್ ಜೋಗ ಜಲಪಾತಕ್ಕೆ ಭೇಟಿ ನೀಡಿದ್ದರು. ಹಿರಿಯಣ್ಣಯ್ಯನವರು ಮಾಡಿದ್ದ ಅತ್ಯಂತ ಸಮರ್ಪಕ ವ್ಯವಸ್ಥೆಯನ್ನು ಕಂಡು ಅಪಾರ ಮೆಚ್ಚುಗೆ ಸೂಚಿಸಿ ನೆನಪಿನ ಕಾಣಿಕೆ ಕಳುಹಿಸಿದ್ದರು. ಯಾವುದೇ ಸ್ಥಾನವಿರಲಿ, ಅವರ ಕ್ಷಮತೆ ಮತ್ತು ಪ್ರಾಮಾಣಿಕತೆಗಳು ಅವರ ಕಾರ್ಯ ನಿರ್ವಹಣೆಯಲ್ಲಿ ವ್ಯಕ್ತವಾಗಿ ಬಿಡುತ್ತಿದ್ದವು. ಅವರು ಕೋಲಾರದಲ್ಲಿ ಜಿಲ್ಲಾಧಿಕಾರಿಗಳಾಗಿ ಸೇವೆ ಸಲ್ಲಿಸುವಾಗ ಪರಿಷತ್ತಿನ ಸದಸ್ಯರೊಬ್ಬರು ಹಿರಿಯಣ್ಣಯ್ಯನವರ ಕಾರ್ಯಕ್ಷಮತೆ ಬಗ್ಗೆ ಟೀಕೆ ಮಾಡಿದರು. ಆದರೆ ಆಗ ದಿವಾನರಾಗಿದ್ದ ಎ.ಎನ್.ಬ್ಯಾನರ್ಜಿಯವರು ಅವರ ದಕ್ಷತೆ ಮತ್ತು ಪ್ರಾಮಾಣಿಕತೆಯನ್ನು ಕೊಂಡಾಡಿ ಸದಸ್ಯರು ತಮ್ಮ ಆಕ್ಷೇಪಣೆ ಹಿಂಪಡೆಯಲು ಕಾರಣರಾದರು.
ಹಿರಿಯಣ್ಣಯ್ಯನವರು, ವಿಶ್ವೇಶ್ವರಯ್ಯನವರು ದಿವಾನರಾಗಿದ್ದ ಸಮಯದಲ್ಲಿ ಅವರ ಆಪ್ತಕಾರ್ಯದರ್ಶಿಯಾಗಿ ಸಲ್ಲಿಸಿದ ಸೇವೆ ಅನನ್ಯವಾದುದು. ಅವರು ಸರ್.ಎಂ.ವಿ ಯವರ ಚಿಂತನೆಯ ಅಂತರಾಳವನ್ನು ಬಲ್ಲವರಾಗಿದ್ದರು. ಹಗಲು ರಾತ್ರಿಯೆನ್ನದೆ ಅವರು ನಾಡಿನ ಸೇವೆ ಸಲ್ಲಿಸಿ ದಿವಾನರಿಂದ ಶಹಬಾಸ್‌ಗಿರಿ ಗಿಟ್ಟಿಸಿದ್ದರು. ತಮ್ಮ ಪ್ರಾಮಾಣಿಕ ಮತ್ತು ಅವಿರತ ಶ್ರಮದಿಂದಾಗಿ ವಿಶ್ವೇಶ್ವರಯ್ಯನವರ ಎಲ್ಲ ಅಭಿವೃದ್ಧಿ ಕಾರ್ಯಗಳಲ್ಲಿಯೂ ತೆರೆಮರೆಯಲ್ಲಿ ಸೇವೆ ಸಲ್ಲಿಸಿ, ಆರು  ವರ್ಷಗಳ ಕಾಲ ಕಪ್ಪುಚುಕ್ಕೆರಹಿತ ಆಡಳಿತ ಮಾಡಿದ ಕೀರ್ತಿ ಹಿರಿಯಣ್ಣಯ್ಯನವರಿಗೆ ಸಲ್ಲುತ್ತದೆ. ವಿಶ್ವೇಶ್ವರಯ್ಯನವರು ದಿವಾನ್ ಪದವಿಗೆ ರಾಜಿನಾಮೆಯಿತ್ತು ಮಹಾರಾಜರನ್ನು ಕಾಣಲು ಹೋಗಿದ್ದಾಗ ತಮ್ಮಿಂದ ಏನಾದರೂ ಸಹಾಯಬೇಕೆ ಎಂದು ಕೇಳಿದ್ದಕ್ಕೆ, ಎಂ.ವಿ.ಯವರು ತಮ್ಮ ಕಾರ್ಯದರ್ಶಿಯ ಕಾರ್ಯದಕ್ಷತೆಯನ್ನು ಪರಿಗಣಿಸಿ ಜಿಲ್ಲಾಧಿಕಾರಿಗಳಾಗಿ ನೇಮಕ ಮಾಡಬೇಕೆಂದು ಕೇಳಿಕೊಂಡರು. ಅದಕ್ಕೆ ಮಹಾರಾಜರೂ ಸಮ್ಮತಿಸಿದ್ದರು. ಆದರೆ ಅದೇಕೋ ಹಿರಿಯಣ್ಣಯ್ಯನವರನ್ನು ಜಿಲ್ಲಾಧಿಕಾರಿ ಹುದ್ದೆಗೆ ನೇಮಕಮಾಡಲು ವಿಳಂಬವಾಯಿತು. ಇದು ವಿದೇಶದಲ್ಲಿದ್ದ ವಿಶ್ವೇಶ್ವರಯ್ಯನವರಿಗೆ ತಿಳಿದು ಅವರು ಮಹಾರಾಜರಿಗೆ ಒಂದು ಪತ್ರ ಬರೆದರು. ಅದರಲ್ಲಿ ಹಿರಿಯಣ್ಣಯ್ಯನವರನ್ನು ಜಿಲ್ಲಾಧಿಕಾರಿಗಳನ್ನಾಗಿ ನೇಮಕ ಮಾಡಲು ಆದ ವಿಳಂಬವನ್ನು ಪ್ರಸ್ತಾಪಿಸಿ, ಅವರನ್ನು ಒಂದು ವೇಳೆ ಜಿಲ್ಲಾಧಿಕಾರಿಗಳಾಗಿ ನೇಮಕ ಮಾಡಲಾಗದಿದ್ದರೆ ದಯಮಾಡಿ ತಮ್ಮ ನಿವೃತ್ತಿ ವೇತನವನ್ನು ನಿಲ್ಲಿಸಬೇಕೆಂದು ಕೋರಿದ್ದರು. ಇದು ಹಿರಿಯಣ್ಣಯ್ಯನವರ ಬಗ್ಗೆ ಇದ್ದ ಪ್ರೀತಿಯನ್ನು ತೋರಿಸುತ್ತದೆ. ಅಲ್ಲದೆ ಹಿರಿಯಣ್ಣಯ್ಯನವರ ಕಾರ್ಯದಕ್ಷತೆಯನ್ನೂ ಅವರು ಆಡಳಿತದಲ್ಲಿ ನೀಡುತ್ತಿದ್ದ ಮಹತ್ವವನ್ನೂ ತಿಳಿಸಿಕೊಡುತ್ತದೆ.

-ಪ್ರೊ. ಎಂ. ಎನ್. ಸುಂದರರಾಜ್, ಶಿವಮೊಗ್ಗ
rajsundar1957@gmail.com

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಮೈಸೂರು ರಾಜಮನೆತನ ಹೊರಗಿಟ್ಟು ಕರ್ನಾಟಕ ಇತಿಹಾಸ ಊಹಿಸುವುದು ಕಷ್ಟ': ಗವಿಸಿದ್ಧೇಶ್ವರ ಶ್ರೀಗಳು; Video

'ಮೊದಲು ನಿಮ್ಮ ಅಮೆರಿಕದಲ್ಲಿ ಕೈಗೆಟುಕುವ ದರದಲ್ಲಿ ಸೇವೆ ಒದಗಿಸಿ': ಒತ್ತಡಕ್ಕೆ ಭಾರತ ಮಣಿಯಲ್ಲ; ಎಲಾನ್ ಮಸ್ಕ್ ವಿರುದ್ಧ ನಿಶಿಕಾಂತ್ ದುಬೆ

'ನನ್ನನ್ನಲ್ಲ, ನಿಮ್ ಗಂಡನ ಗುರಾಯಿಸಿ', ಜಯಾ ಬಚ್ಚನ್‌ ಖಡಕ್ ನೋಟಕ್ಕೆ ಫೋಟೋಗ್ರಾಫರ್ ತಿರುಗೇಟು! Video

ಭೀಕರ ಹಿಟ್‌ ಅಂಡ್ ರನ್‌; ಟೀ ಕುಡಿಯುತ್ತಾ ಬೈಕ್ ಮೇಲೆ ಕುಳಿತಿದ್ದವನಿಗೆ ಶಾಕ್ ಕೊಟ್ಟ ಕಾರು, ಗಾಳಿಯಲ್ಲಿ ಹಾರಿದ ವ್ಯಕ್ತಿ! Video

ಮೈಸೂರು ದಸರಾಕ್ಕೆ ಕೊಪ್ಪಳದ ಗವಿಸಿದ್ದೇಶ್ವರ ಶ್ರೀಗಳಿಂದ ಅಧಿಕೃತ ಚಾಲನೆ