ಕಪ್ಪು ಬಿಳುಪು ವಿರುದ್ಧ ಸ್ವಭಾವದ್ದಾದರೂ ಒಂದರ ಬೆನ್ನಿಗಿನ್ನೊಂದಿರಬಲ್ಲವು; ಗಂಡ ಹೆಂಡತಿಯಂತೆ
ಒಂದೊಂದು ಬಣ್ಣಕ್ಕೊಂದೊಂದು ಬಣ ಕಟ್ಟುವುದು ಮನುಜನ ಗುಣ
ಕಪ್ಪು ಚೆಂದವಲ್ಲ ಎಂದವರಾರು? ಕಣ್ಣು ಮುಚ್ಚಿ ಒಮ್ಮೆ ನಿಮ್ಮ ನಿಮ್ಮ ಪ್ರೇಯಸಿಯ ಕಣ್ಣನ್ನು ನೆನೆಯಿರಿ
ಬಿಳಿ ಶುದ್ಧ ಬಣ್ಣ ಅಷ್ಟೇ ಅಲ್ಲ, ಅಶುದ್ಧಿಯಾದರೆ ಮೊದಲು ಕಾಣುವುದೇ ಈ ಬಣ್ಣದ ಮೇಲೆ
ಚಿನ್ನದ ಬಣ್ಣ ಎಷ್ಟು ಚೆಂದವೆಂದರೆ ಅದಕ್ಕೇ ಅದು ಸು-ವರ್ಣ
ಬುದ್ಧಿವಂತನ ಪ್ರಕಾರ ಬಣ್ಣಕ್ಕೂ ವಾಸನೆಯಿದೆ. ಅದಕ್ಕೇ ಬುದ್ಧಿವಂತನಿಗೆ ಮೂರು ಕಡೆ
ಹೆಂಡತಿಗೆ ಇಷ್ಟವಾಗುವ ಬಣ್ಣದ ಬಟ್ಟೆಯನ್ನು ಆರಿಸುವ ಗಂಡ ಯಾರಾದರೂ ಇದ್ದರೆ ಅವನು ಬಟ್ಟೆ ವ್ಯಾಪಾರಿಯೇ ಇರಬೇಕು
ಬದಲಾವಣೆ ಜಗದ ಸಹಜ ನಿಯಮ ಎಂದು ಒಪ್ಪುವವರೆಲ್ಲರೂ ಬಟ್ಟೆಯ ಬಣ್ಣ ಬದಲಾದರೆ ಮಾತ್ರ ಬಟ್ಟೆ ಅಂಗಡಿಗೆ ಹೋಗಿ ರೇಗಾಡುತ್ತೇವೆ
'ಕಲರ್' ಶಬ್ದದ ವಿರುದ್ಧ ಪದ ಯಾವುದು? ಕಪ್ಪು ಬಿಳುಪು ಎನ್ನಬೇಕೇ?
ಹೆಂಡತಿಗೆ ಬಣ್ಣಗುರುಡು ಇದ್ದರೆ ಗಂಡನಿಗೆ ಉಳಿತಾಯ
ಗಂಡನಿಗೆ ಬಣ್ಣಗುರುಡು ಇದ್ದರೆ ಹೆಂಡತಿಗೆ ಅಪಾಯ
-ವಿಶ್ವನಾಥ ಸುಂಕಸಾಳ
vishwasunkasal@yahoo.com