ಅಳು
ಅರಳಿದ ನಗುವ ಅಳಿಸಿ, ಕರುಳ ಹಿಚುಕುವ ಭಾವದ ಪರಿಣಾಮ
ಬಾಷ್ಪೀಭವನ
ಆನಂದ ಹಾಗೂ ಖೇದ ಇವೆರಡರ ಅತಿರೇಕಾವಸ್ಥೆಯ ಬಾಹ್ಯ ಉತ್ಪನ್ನ
ದುಗುಡ ಗೂಡು ಕಟ್ಟಿದ ಮನದ ಪಾಡು
ಗೋಳು ತುಂಬಿದ ಬಾಳಿನಲ್ಲಿ ಪದೇ ಪದೇ 'ಗೋಳೋ' ಎಂದು ಇಡುವ ಗೋಳಾಟ
ಹುಟ್ಟಿನಿಂದಲೇ ಎಲ್ಲರೂ ಜೊತೆಗೆ ತರುವ ಆಸ್ತಿ
ಸತ್ತ ಮೇಲೆ ಸೂಚಿಸುವ 'ಮರಣೋತ್ತರ' ಪ್ರೀತಿಯ ಮಾಧ್ಯಮ
ಚಿಕ್ಕಪುಟ್ಟದ್ದಕ್ಕೆಲ್ಲಾ ಅಳುವವನಿಗೆ ಆಳುವ ಯೋಗ ಒದಗುವುದಿಲ್ಲ
ಸತ್ತವನಿಗಾಗಿ ಅಳುವವರು ಇದ್ದಾರೆ ಆದರೆ ಬದುಕಿದವನ ಜೊತೆ ನಗುವವರು ಇಲ್ಲ
ಅಳುಬುರುಕಿಗೆ ಅಳುವೇ ಅಸ್ತ್ರ. ಅವಳ ಮದುವೆಯಾದವನ ಬದುಕೇ ಒಂದು ಕರವಸ್ತ್ರ.
ಚುನಾವಣೆ ಹತ್ತಿರ ಬಂದಂತೆಲ್ಲ ಕೆಲವು ರಾಜಕಾರಣಿಗಳು ಮಾಡುವ ದೊಡ್ಡ ಪ್ರಹಸನ
ತಡೆಯಲಾರದ ದುಃಖವನ್ನು ಹೊರದೂಡುವ ಮಾರ್ಗ
ಅಳುವವವರನ್ನು ನಂಬಬಾರದು. ನಂಬಿದರೆ ನಂತರ ಅಳುವ ಸರದಿ ನಿಮ್ಮದು
ಗೋಳೋ ಎಂದು ಕಂಡಕಂಡವರ ಮುಂದೆಲ್ಲಾ ಅಳುವವರ ಹಿಂದೆ ಗೊಳ್ ಎಂದು ನಗುವವರಿರುತ್ತಾರೆ
ಇದು ಕೆಲವರ ಕಣ್ಣೊರೆಸುವ ತಂತ್ರ
ವಿಶ್ವನಾಥ ಸುಂಕಸಾಳ
vishwasunkasal@yahoo.com