ಇವತ್ತಿನ ಕಾಲದಲ್ಲಿ ನೀತಿಕತೆಗಳಲ್ಲಿ ಮಾತ್ರ ಕಂಡುಬರುವಂಥದ್ದು
ಮಾನವರು ಪರಿ-ತ್ಯಾಗ ಮಾಡಿರುವ ದೊಡ್ಡ ಗುಣ
ಆಶೀರ್ವಚನಗಳಲ್ಲಿ, ಉಪದೇಶ ಭಾಷಣಗಳಲ್ಲಿ ಈ ಶಬ್ದ ಕೇಳಿಬರುತ್ತದೆ
ಈ ಶಬ್ದದ ಅರ್ಥವನ್ನು ಶಬ್ದಕೋಶ ನೋಡಿಯೇ ತಿಳಿದುಕೊಳ್ಳಬೇಕು
ಇದನ್ನು ಬಿಟ್ಟವನು ಊರಿಗೇ ಪಟೇಲ
ರಾಜಕಾರಣದಲ್ಲಿ ಇದನ್ನು ಜೊತೆಗಿಟ್ಟುಕೊಂಡವ ಬೇಗ ಮಾಜಿಯಾಗುತ್ತಾನೆ
ಮೋಸ, ದಗಾ, ವಂಚನೆಗಳನ್ನೆಲ್ಲ ಮಾಡಬಾರದೆಂಬ ಕಾಲ್ಪನಿಕ ಅಂಶಗಳನ್ನೊಳಗೊಂಡ ಕತೆ
ಇದು ವ್ಯಾಪಾರ ವ್ಯವಹಾರದಲ್ಲಿ ಲಾಭಕರವಲ್ಲ. ಹಾಗಾಗಿಯೇ ಅದೆಷ್ಟೋ ಜನ ಆಗಲೇ ಬಿಟ್ಟಿರುವುದು
ಈ ಕತೆ ಕೇಳಲು ತುಂಬಾ ಹಿತ. ಅನುಸರಿಸಲು ಅಲ್ಲ
ಇದನ್ನು ಶಾಲೆಯಲ್ಲಿ ಬೋಧಿಸಲಾಗುವುದಿಲ್ಲ. ಮನೆಯಲ್ಲಿ ಕಲಿಸಲು ಸಮಯವಿಲ್ಲ.
ಇಂದಿನ ಮಕ್ಕಳಿಗೆ ಈ ಶಬ್ದ ಅಪರಿಚಿತ. ಕಾರಣ, ಯಾವ ತರಗತಿಯ ಸಿಲೇಬಸ್ನಲ್ಲೂ ಈ ಪಾಠವನ್ನು ಇಟ್ಟಿರುವುದಿಲ್ಲ
ಓಬೀರಾಯನ ಕಾಲದ ಕತೆಗಳಲ್ಲಿ ಒಂದು
ಅನಾಯಾಸೇನ ಪ್ರಖ್ಯಾತಿಮ್ ವಿನಾ ದೈನ್ಯೇನ ಜೀವನಮ್/ ನೀತಿಸತ್ಯಪರಿತ್ಯಾಗದ್ವಾರಾ ಹಿ ಸುಲಭಂ ನೃಣಾಮ್
ಇದು ಹೆಚ್ಚಾದಂತೆಲ್ಲಾ ಪೊಲೀಸರಿಗೆ ಕೆಲಸ ಕಡಿಮೆಯಾಗುತ್ತದೆ
-ವಿಶ್ವನಾಥ ಸುಂಕಸಾಳ
vishwasunkasal@yahoo.com