ತೊಡದಿದ್ದರೆ ಕೆಟ್ಟೆ
ಹಾಕಿಕೊಂಡರೆ ಸೆಖೆ, ಬಿಚ್ಚಿದ್ರೆ ಚಳಿ
ಬಿಟ್ಟೇನೆಂದರೂ ಬಿಡದೀ ಬಟ್ಟೆ
ಫ್ಯಾಷನ್ ಎಂಬ ಭ್ರಮಾದರ್ಶಕ ಮಾಧ್ಯಮ
ತುಂಡು ಬಟ್ಟೆಯೂ ಇಲ್ಲದೇ ಸಂಕಟಪಡುವವರು ಒಂದೆಡೆಯಾದರೆ, ಎಲ್ಲ ಇದ್ದೂ ತುಂಡು ಬಟ್ಟೆಯುಟ್ಟು ಮೆರೆಯುವವರು ಇನ್ನೊಂದೆಡೆ
ತೊಟ್ಟೆ ಬಟ್ಟೆಯ ಬಗ್ಗೆಲ್ಲಾ ಹಿಗ್ಗಾಮುಗ್ಗಾ ಹೊಗಳುವ ಹೊಗಳು ಭಟರಿಗೆ ಬಟ್ಟೆಂಗಿಗಳು ಎನ್ನಬಹುದು
ಬಟ್ಟೆ ತೊಡುವುದು ಬಿಟ್ಟವರೆಲ್ಲಾ ಭಟ್ಟಾರಕರಾಗುವುದಿಲ್ಲ
ಹೆಂಡತಿಗೆ ಇಷ್ಟವಾಗುವ ಬಟ್ಟೆ ಆಯ್ಕೆ ಮಾಡುವ ಪುಣ್ಯಾತ್ಮ ಗಂಡ ಜಗತ್ತಿನಲ್ಲೇ ಅಪರೂಪ
ಬಟ್ಟೆ ಖರೀದಿಸುವಾಗ ಹೆಂಡತಿಯ ಜೊತೆ ಹೋದರೆ ಬಟ್ಟೆ ಆರಿಸೋದು ಎಷ್ಟು ಕಷ್ಟದ ಕೆಲಸ ಎಂಬುದನ್ನು ಅರಿಯಬಹುದು
ಬಟ್ಟೆ ತೊಟ್ಟರೂ ಒಳಗಿಂದ ಎಲ್ಲರೂ ಬತ್ತಲೆಯೇ
ಹೆಂಡತಿಗೆ ಗಂಡನ ಪ್ರೀತಿ ಪರೀಕ್ಷಿಸುವ ಅಸ್ತ್ರ ಈ ವಸ್ತ್ರ
ದೇಹದ ವಾಸನೆಯನ್ನು ತಡೆಯುವ ವಸನ
ಅಶನವನ್ನಾದರೂ ಬಿಟ್ಟಾರು ಆದರೆ ವಸನವನ್ನು ಖರೀದಿಸದೇ ಬಿಡರು
ಇದರ ದೊಡ್ಡ ಪ್ರಾಬ್ಲೆಮ್ ಎಂದರೆ ಆಗಾಗ ತೊಳೆಯುತ್ತಿರಬೇಕಾಗುತ್ತದೆ. ಬೇರೆಯವರ ಆರೋಗ್ಯದ ದೃಷ್ಟಿಯಿಂದಲಾದರೂ...
ವಿಶ್ವನಾಥ ಸುಂಕಸಾಳ
vishwasunkasal@yahoo.com