ಮಿತಿಯಿಲ್ಲದ್ದು ಮಿತಿಗೆ ಮಾತ್ರ
ಮಿತಿ ಮೀರಿದರೆ ತಿಥಿ ಹತ್ತಿರವಾಗುತ್ತದೆ
ಇತಿ ಮಿತಿ ಅರಿತು ನಡೆವವಗೆ ಗತಿ ತುಂಬಾ ದೊಡ್ಡದು
ಇದನ್ನು ಹದ್ದು ಎಂದೂ ಕರೆಯುತ್ತಾರೆ. ಹದ್ದು ಮೀರಿದರೆ ಗದ್ದುಗೆ ಉರುಳುವುದು
ಮತಿಗೆ ಮತ್ತು ಮಾತಿಗೆ ಮಿತಿ ಹಾಕದಿದ್ದರೆ ಬುದ್ಧಿಜೀವಿಗಳೆಂದು ಸಮಾಜ ನಿಂದಿಸುತ್ತದೆ
ಎಲ್ಲದಕ್ಕೂ ಒಂದು ಮಿತಿ ಎಂಬುದಿರುತ್ತದೆ. ಆದರೆ ಮಿತಿ ಮೀರುವಾಗ ಅದು ನೆನಪಾಗುವುದೇ ಇಲ್ಲ.
ಅತಿ ಶಬ್ದದ ಶತ್ರು
ಇತಿ ಶಬ್ದದ ಸಂಗಡಿಗ
ಹೆಜ್ಜೆ ಹೆಜ್ಜೆಗೂ ಸತಿಗೆ ಮಿತಿ ವಿಧಿಸುವ ಪತಿ ಕಿತಾಪತಿ ಎನಿಸಿಕೊಳ್ಳುತ್ತಾನೆ
ಯಾವ ಸೀಮೆಯ ಗಂಡಾದರೂ ಆತನ ಪರಾಕ್ರಮಕ್ಕೆ ಸೀಮೆ ಇದ್ದೇ ಇದೆ
ಎಲ್ಲ ಮಿತಿಯನ್ನು ಮೀರಿದ ಅನಂತತೆಯೆಂಬ ಮಿತಿಯನ್ನು ಬಿಟ್ಟಿರಲಾರದು
ಇದು ಕನಿಷ್ಠ ಪಕ್ಷ ಮತ್ತು ಗರಿಷ್ಠ ಪಕ್ಷಗಳೆಂದು ಎರಡು ಪಕ್ಷಗಳನ್ನು ಹುಟ್ಟುಹಾಕಿದೆ
ಅಮಿತವಾದ ಆನಂದ ಸಿಗಬೇಕೆಂದರೆ ಮಿತವಾದ ಆಸೆ ಹೊಂದಿರಬೇಕು
-ವಿಶ್ವನಾಥ ಸುಂಕಸಾಳ
vishwasunkasal@yahoo.com