ವಿರೋಧಾಭಾಸ
ಎರಡು ವಿರುದ್ಧ ಅಂಶಗಳು ಒಟ್ಟಿಗೇ ಭಾಸವಾದಾಗ ವಿರೋಧಾಭಾಸ ಎನ್ನುತ್ತಾರೆ
ನಗಿಸಬೇಕಿದ್ದ ಹಾಸ್ಯ ಕೆಲವೊಮ್ಮೆ ಕೋಪ ತರಿಸುತ್ತದೆ
ಶಿಕ್ಷಣ ಪಡೆದಂತೆಲ್ಲ ಮೂರ್ಖರು ಹೆಚ್ಚುತ್ತಾರೆ
ಹೆಚ್ಚು ಸಂಬಳ ಪಡೆವವರು ಕಡಿಮೆ ಶ್ರಮದ ಕೆಲಸ ಮಾಡುತ್ತಾರೆ
ಮೌನ ಮಾತಾಡುತ್ತದೆ. ಮಾತು ಮೌನ ವಹಿಸುತ್ತದೆ
ಗಂಡ ಮನೆಯ ಯಜಮಾನ. ಖರ್ಚಿಗೆ ಮಾತ್ರ ಹೆಂಡತಿ ಹಣ ಕೊಡಬೇಕು .
ಭಯಕ್ಕೆ ಭಯ ಭಯಪಡುವುದಿಲ್ಲ
ಪಾಗಾರವೇ ಎದ್ದು ಮನೆ ನುಂಗುವಿಕೆ
ಯುದ್ಧದಿಂದ ಶಾಂತಿ ಸ್ಥಾಪಿಸುತ್ತೇವೆ
ನೀವು ನಕ್ಕರೆ ಜನರೂ ನಗುತ್ತಾರೆ. ಅತ್ತರೆ ಇನ್ನಷ್ಟು ನಗುತ್ತಾರೆ.
ಎಲ್ಲರಿಗೂ ಒಳ್ಳೆಯ ಸರ್ಕಾರ ಬೇಕು. ಮತದಾನ ಮಾಡಲು ಮಾತ್ರ ಯಾರಿಗೂ ಸಮಯವಿಲ್ಲ
ದುಡ್ಡಿನಿಂದ ಎಲ್ಲವೂ ಸಿಗುವುದಿಲ್ಲ. ದುಡ್ಡಿಲ್ಲದಿದ್ದರೆ ಏನೂ ಸಿಗುವುದಿಲ್ಲ
ಹಣ್ಣು ಹಣ್ಣು ಮುದುಕ. ಹೆಣ್ಣು ಕಂಡರೆ ಮಾತ್ರ ಆಸೆ ಬುರುಕ...
ವಿಶ್ವನಾಥ ಸುಂಕಸಾಳ
vishwasunkasal@yahoo.com