ಇದೊಂದು ಮುಗಿಯದ ಕತೆ
ಅಂತ್ಯವೇ ಇಲ್ಲದ ಸರಣಿ
ಗಣಿತದ ಅಗಣಿತ ಸಮಸ್ಯೆಗಳು
ಅಪಾರ, ತುಂಬಾ ಎಂಬರ್ಥದಲ್ಲಿ ಬಳಸಲ್ಪಡುವ ಶಬ್ದ
ಕೆಲವರ ಹೆಸರು ಮಾತ್ರ ಅನಂತ, ಬುದ್ಧಿ ತುಂಬಾ ಸೀಮಿತ
ಲಕ್ಷಗಟ್ಟಲೆ ಮೂರ್ತಿಗಳನ್ನು ಇಟ್ಟಿರುವ ಸಾಲಿಗೆ ಅನಂತ ಮೂರ್ತಿಗಳು.. ಎಂದು ಉದ್ಗರಿಸಬಹುದು
ಕೆಲವರ ಸಾಲ ಮತ್ತು ಬಡ್ಡಿಯ ಲೆಕ್ಕಾಚಾರ
ಇನ್ನು ಕೆಲವರ ಹೆಂಡತಿ ಮಕ್ಕಳ ಸಂಖ್ಯೆ
ಹೆಂಡತಿಯ ಮನದಲ್ಲಿ ಮೂಡುವ ಪ್ರಶ್ನೆಗಳೂ ಅನಂತವೇ
ಎಲ್ಲಿಯೂ ನಿಲ್ಲದ್ದು, ಪೂರ್ಣವಿರಾಮವೇ ಇಲ್ಲದ್ದು
ಪರಬ್ರಹ್ಮನ ಲಕ್ಷಣವಿದು
ಅನಂತವೆಂಬುದರ ಅನುಭವ ಸಾಧ್ಯವಿಲ್ಲ. ಕಲ್ಪನೆಯೂ ಸಾಧ್ಯವಿಲ್ಲ
ಅನಂತವಾಗುವಿಕೆಯೇ ಜೀವನದ ಮಹೋನ್ನತ ಸಾರ್ಥಕ್ಯ, ಇದನ್ನೇ ಅಮೃತ ಎನ್ನುತ್ತಾರೆ
ಯಾವ ವಿಷಯದಲ್ಲಿ ಅನಂತರವೆಂಬುದೇ ಇಲ್ಲವೋ ಅದೇ ಅನಂತ
ಜೀವನ ಸಾಂತ, ಜೀವನದಲ್ಲಿ ಎದುರಾಗುವ ಸಮಸ್ಯೆಗಳು ಮಾತ್ರ ಅನಂತ
-ವಿಶ್ವನಾಥ ಸುಂಕಸಾಳ
vishwasunkasal@yahoo.com