ಉತ್ತರ
ಪರೀಕ್ಷೆ ಕೋಣೆಯಲ್ಲಿ ನಮ್ಮನ್ನು ತತ್ತರಿಸುವಂತೆ ಮಾಡುವಂಥದ್ದು
ಉತ್ತರ ಕೊಟ್ಟರೂ ಉತ್ತರಿಸದಿದ್ದರೂ ಸುದ್ದಿ ಮಾಡುವವರೇ ಪತ್ರಕರ್ತರು
ಲಾಂಗ್ ಜಂಪ್ ಮತ್ತು ಹೈ ಜಂಪ್ಗಳ ಬಗೆಗಿನ ಪ್ರಶ್ನೆಗೆ ಹಾರಿಕೆಯ ಉತ್ತರ ಎನ್ನಬಹುದು
ಉತ್ತರ ಗೊತ್ತಿಲ್ಲದಿದ್ದರೂ ಮೂಗು ತೂರಿಸುವ ಮಗನಿಗೆ ಉತ್ತರಕುಮಾರ ಎನ್ನಬಹುದು
ಪ್ರೇಯಸಿಯ ಪ್ರಶ್ನೆಗೆ ಉತ್ತರಿಸಲಾಗದೇ ತತ್ತರಿಸುವವರೇ ಎಲ್ಲ
ಚುಂಬಕ ಗಾಳಿಯು ಬೀಸುವ ಆರಂಭಿಕ ಬಿಂದು
ಹೈ ಕಮಾಂಡ್ ಎಂಬ ಅದೃಶ್ಯ ದೇವತೆಯ ಮಂದಿರವಿರುವ ದಿಕ್ಕು
ಸರ್ ಕೇಳಿದಕ್ಕೆ ಕೊಡುವ ಆನ್ಸರ್
ದಕ್ಷಿಣಕ್ಕೆ ಅಭಿಮುಖವಾಗಿ ನಿಂತರೆ ನಿಮ್ಮ ಪಶ್ಚಿಮಕ್ಕೆ ಇರುವ ದಿಕ್ಕು
ಪ್ರಧಾನಿಯಾಗುವ ಕನಸು ಕಾಣುವವ ಈ ದಿಕ್ಕಿಗೇ ತಲೆ ಹಾಕಿ ಮಲಗಬೇಕು
ಉತ್ತರಿಸುವ ಉತ್ತರದಾಯಿತ್ವ ಮಾತ್ರ ಯಾರೂ ಬಯಸುವುದಿಲ್ಲ
ವಿಶ್ವನಾಥ ಸುಂಕಸಾಳ
vishwasunkasal@yahoo.com