ಸಂಪಾದಕೀಯ

ಸ್ವಾಭಿಮಾನಿ ಸಯ್ಯಾಜಿರಾವ್ ಗಾಯಕ್‌ವಾಡ್

ಬ್ರಿಟಿಷರ ಕಾಲದಲ್ಲಿ ಕೆಲವು ವಿಚಿತ್ರ ಪದ್ಧತಿಗಳನ್ನು ಜಾರಿಗೆ ತರಲಾಗಿತ್ತು. ಅವುಗಳಲ್ಲಿ ಒಂದಂತೂ ಭಾರತದ ರಾಜರುಗಳಿಗೆ ಅವಮಾನ ಮಾಡುವಂತಿತ್ತು. ಅದೆಂದರೆ, ಇಂಗ್ಲೆಂಡಿನ ದೊರೆಯನ್ನು ಭೇಟಿ ಮಾಡಿದಾಗ ಅವನಿಗೆ ನಜರು ಒಪ್ಪಿಸಿ, ಬೆನ್ನು ತೋರಿಸದೆ, ಹಿಮ್ಮುಖವಾಗಿ ನಡೆದು ತಮ್ಮ ಕುರ್ಚಿಯಲ್ಲಿ ಕುಳಿತುಕೊಳ್ಳಬೇಕಾಗಿತ್ತು. ಇದೊಂದು ಗುಲಾಮಗಿರಿಯ ಸಂಕೇತವೂ ಆಗಿತ್ತು. ಒಂದು ವೇಳೆ ಇದಕ್ಕೆ ತಪ್ಪಿದರೆ ಅವರ ಅಧಿಕಾರ ಹರಣ ನಡೆಯುತ್ತಿತ್ತು. ಒಮ್ಮೆ 1911 ರಲ್ಲಿ ಇಂಗ್ಲೆಂಡಿನ ದೊರೆ ಐದನೇ ಜಾರ್ಜ್ ಭಾರತಕ್ಕೆ ಆಗಮಿಸಿದಾಗ ಅವನ ಗೌರವಾರ್ಥ ದೆಹಲಿಯಲ್ಲಿ ಒಂದು ದರ್ಬಾರು ಏರ್ಪಾಡಾಯಿತು. ಅದರಲ್ಲಿ ಪಾಲ್ಗೊಳ್ಳಲು ಭಾರತದ ಎಲ್ಲ ರಾಜರಿಗೂ ನಿರೂಪ ಕಳುಹಿಸಲಾಗಿತ್ತು. ಅಂತಹ ನಿರೂಪ ಪಡೆದವರಲ್ಲಿ ಬರೋಡದ ಮಹಾರಾಜ ಸರ್. ಸಯ್ಯಾಜಿರಾವ್ ಗಾಯಕ್‌ವಾಡ್ ಸಹ ಒಬ್ಬರು. ಅವರು ಇತರ ರಾಜಮನೆತನದವರಂತೆ ಭೋಗಾಸಕ್ತರಾಗಿರದೇ, ಅನೇಕ ಕ್ರಾಂತಿಕಾರಕ ಬದಲಾವಣೆಗಳನ್ನು ತಮ್ಮ ಆಡಳಿತದಲ್ಲಿ ಜಾರಿಗೆ ತಂದಿದ್ದರು. ಕಡ್ಡಾಯ ಶಿಕ್ಷಣ, ಗ್ರಾಮ ಪುಸ್ತಕ ಭಂಡಾರಗಳ ಸ್ಥಾಪನೆ, ಅಸ್ಪೃಶ್ಯತೆ ನಿವಾರಣೆ, ಸಹಕಾರೀ ಚಳವಳಿಗೆ ಚಾಲನೆ, ವ್ಯವಸಾಯ ಶಿಕ್ಷಣ, ಬಾಲ್ಯವಿವಾಹ ರದ್ಧತಿ, ಇವೇ ಮೊದಲಾದ ಕಾರ್ಯಕ್ರಮಗಳ ಮೂಲಕ ಜನರ ಪ್ರೀತಿ ಗಳಿಸಿದ್ದರು. ಅವರು ಸ್ಥಾಪಿಸಿದ ಬ್ಯಾಂಕ್ ಆಫ್ ಬರೋಡ ಇಂದಿಗೂ ಭಾರತದ ಪ್ರಮುಖ ಬ್ಯಾಂಕ್‌ಗಳಲ್ಲಿ ಒಂದಾಗಿದೆ. ಅನೇಕ ಕಲಾವಿದರಿಗೆ ಮತ್ತು ವಿದ್ವಾಂಸರಿಗೆ ಆಶ್ರಯ ನೀಡಿದ್ದರು ಸಯ್ಯಾಜಿರಾವ್ ಗಾಯಕ್‌ವಾಡ್. ಅವರಲ್ಲಿ ರಾಜಾ ರವಿವರ್ಮ ಸಹ ಒಬ್ಬರಾಗಿದ್ದರು. ಪ್ರತಿಭಾಶಾಲಿಗಳಾಗಿದ್ದ ಡಾ.ಬಿ.ಆರ್.ಅಂಬೇಡ್ಕರ್‌ರನ್ನು ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ವಿದೇಶಕ್ಕೆ ಕಳುಹಿಸಿ ಪ್ರೋತ್ಸಾಹಿಸಿದ್ದೂ ಸಹ ಗಾಯಕ್‌ವಾಡ್ ಅವರೇ. ಅಂಬೇಡ್ಕರ್ ಅವರು ವಿದ್ಯಾಭ್ಯಾಸ ಮುಗಿಸಿ ಭಾರತಕ್ಕೆ ಹಿಂದಿರುಗಿದಾಗ ಸರ್ಕಾರದಲ್ಲಿ ಉನ್ನತ ಹುದ್ದೆ ನೀಡಿ ಪ್ರೋತ್ಸಾಹಿಸಿದರು.
ದೆಹಲಿ ದರ್ಬಾರಿನಲ್ಲಿ ಪಾಲ್ಗೊಂಡ ಗಾಯಕ್‌ವಾಡ್ ಸಂಪ್ರದಾಯದಂತೆ ಚಕ್ರವತರ್‌ಗೆ ನಜರು ಒಪ್ಪಿಸಿ, ಒಮ್ಮೆ ಮಾತ್ರ ಗೌರವ ಸಲ್ಲಿಸಿ, ಹಿಮ್ಮುಖವಾಗಿ ನಡೆದು ಬರದೆ, ಚಕ್ರವರ್ತಿಗೆ ಬೆನ್ನು ತೋರಿಸುತ್ತಾ ಹಿಂದಿರುಗಿ ತಮ್ಮ ಸ್ಥಳಕ್ಕೆ ಹೋಗಿ ಕುಳಿತರು. ಇದು ಬ್ರಿಟಿಷರನ್ನು ಕೆರಳಿಸಿತು. ಬ್ರಿಟಿಷ್ ಪಾರ್ಲಿಮೆಂಟಿನಲ್ಲಿ ಈ ಕುರಿತು ಬಿಸಿಬಿಸಿ ಚರ್ಚೆಯಾಗಿ ಗಾಯಕ್‌ವಾಡ್‌ರನ್ನು ಸಿಂಹಾಸನದಿಂದ ಕೆಳಗಿಳಿಸಬೇಕೆಂಬ ಸಲಹೆ ಬಂದಾಗ ಲೇಬರ್ ಪಕ್ಷದ ನಾಯಕರಾಗಿದ್ದ ಕೇರ್ ಹಾರ್ಡಿಯವರು ಗಾಯಕ್‌ವಾಡರನ್ನು ಸಮರ್ಥಿಸಿ ಮಾತನಾಡಿ, ಹಿಮ್ಮುಖನಾಗಿ ನಡೆಯಲು ಮನುಷ್ಯ ಏಡಿಜಾತಿಗೆ ಸೇರದವನಲ್ಲ ಎಂದು ವಾದಿಸಿದರು. ಹೀಗಾಗಿ ಅವರನ್ನು ಸಿಂಹಾಸನದಿಂದ ಪದಚ್ಯುತಗೊಳಿಸುವ ಪ್ರಸ್ತಾಪ ಬಿದ್ದುಹೋಯಿತು. ಈ ಬಗ್ಗೆ ಸಯ್ಯಾಜಿರಾವ್ ಗಾಯಕ್‌ವಾಡ್ ಅವರನ್ನು ಕೇಳಿದಾಗ, "ಅಧಿಕಾರಕ್ಕಾಗಿ ಸ್ವಾಭಿಮಾನಕ್ಕೆ ಧಕ್ಕೆ ತರುವ ಕೆಲಸ ಮಾಡಲಾರೆ" ಎಂದುಬಿಟ್ಟರು.

 ಪ್ರೊ. ಎಂ. ಎನ್. ಸುಂದರರಾಜ್, ಶಿವಮೊಗ್ಗ
rajsundar1957@gmail.com


Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಸರ್ಕಾರದ 200 ಅಧಿಕಾರಿಗಳು ವಿರೋಧ ಪಕ್ಷದ ಸಂಪರ್ಕದಲ್ಲಿ: ಪ್ರತಿಭಟನಾ ಜಾಥಾಕ್ಕೂ ಮುನ್ನ ರಾಹುಲ್ ಗಾಂಧಿ ಹೊಸಬಾಂಬ್!

'ಸುಪ್ರೀಂ ಕೋರ್ಟ್‌ಗೆ ಅಲೆದು, ಅಲೆದು ಸಾಕಾಗಿ ಹೋಗಿದೆ'; ಹಿರಿಯ ವಕೀಲ ಕಪಿಲ್ ಸಿಬಲ್ ಅಚ್ಚರಿ ಹೇಳಿಕೆ, ನ್ಯಾಯಾಲಯ ಹೇಳಿದ್ದೇನು?

ಭಾರತೀಯ ನೌಕಾಪಡೆಗೆ ಮತ್ತಷ್ಟು ಬಲ: 3ನೇ ಜಲಾಂತರ್ಗಾಮಿ ನಿಗ್ರಹ ಯುದ್ಧನೌಕೆ 'INS ಮಂಗ್ರೋಲ್' ಸೇರ್ಪಡೆ-Video

ಪ್ರತಿಭಟನಾಕಾರರಿಗೆ ಬಿಗ್ ಶಾಕ್; ಇನ್ಮುಂದೆ ದೆಹಲಿ Jantar Mantarನಲ್ಲಿ ಧರಣಿ ನಡೆಸುವಂತಿಲ್ಲ..!

'ಹೃದಯದ ಪ್ರಮುಖ ರಕ್ತನಾಳದಲ್ಲಿ ರಕ್ತದ ಹೆಪ್ಪುಗಟ್ಟುವಿಕೆ'; ಮರಣೋತ್ತರ ಪರೀಕ್ಷೆಯಲ್ಲಿ ನಟ ನಾನಾ ಪಟೇಕರ್ ಸಾವಿನ ಕಾರಣ ಬಹಿರಂಗ!