ಕೋಲ್ಯ: ಇತಿಹಾಸ ಸಬ್ಜೆಕ್ಟಲ್ಲಿ ಫೇಲು. ಯಾಕೋ ಸರಿಯಾಗಿ ಓದೋಕ್ಕೆ ಆಗೋದಿಲ್ವಾ ನಿನಗೆ?
ಮರಿಕೋಲ್ಯ: ಅಪ್ಪ, ನಾನು ಹುಟ್ಟೋದಕ್ಕಿಂತ ಮುಂಚೆ ನಡೆದ ಘಟನೆಗಳ ಪ್ರಶ್ನೆ ಕೇಳ್ತಾರಪ್ಪ...ಅದೆಲ್ಲ ನನಗೆ ಹೇಗೆ ಗೊತ್ತಾಗಬೇಕು?
ಕೋಲ್ಯ: ಅದು ಸರಿ. ಯಾವ್ನೋ ಅವ್ನು ನಿಮ್ಮ ಸಿಲೆಬಸ್ ತಯ್ಯಾರು ಮಾಡ್ದೋನು? ಇತಿಹಾಸದಲ್ಲಿ ಹಿಂದೆ ನಡೆದದ್ಯಾಕೆ ಕೇಳಬೇಕು, ಈಗೇನು ನಡೀತಾ ಇದೆ, ಮುಂದೇನು ನಡೆಯುತ್ತೇ ಅಂತ ಕೇಳೋದು ತಾನೇ?!