ಬರ್ಕಲಿ ರಮೇಶ ಕಿರಗಂದೂರು, ಮಂಡ್ಯ, 9009741348
ದ್ರೌಪದಿ ಸೀರೆ ಬದಲು ಜೀನ್ಸ್ ಧರಿಸಿದ್ದರೆ ಕೃಷ್ಣ ಏನ್ಮಾಡ್ತಿದ್ದ?
ಆಗ ಕಷ್ಟ ಆಗ್ತಿದ್ದದ್ದು ಕೃಷ್ಣನಿಗಲ್ಲ ದುಶ್ಶಾಸನನಿಗೆ!
ವಿ. ಹೇಮಂತಕುಮಾರ, 9035992900
ಹೊಲದಲ್ಲಿ ಬೆದರುಗೊಂಬೆಯಾಗಿ ಗಂಡನ್ನೇ ನಿಲ್ಲಿಸುತ್ತಾರೆ ಏಕೆ?
ಹೆಣ್ಣು ಗೊಂಬೆಗೆ ರಾತ್ರಿ ಒಬ್ಬಳೇ ಇರಲು ಭಯವಾಗುತ್ತೆ ಅಂತ!
ಶ್ರೀಧರ ಡಿ. ರಾಮಚಂದ್ರಪ್ಪ, 9880791106
ಹುಟ್ಟುಹಬ್ಬದ ಕೇಕ್ ಕಟ್ ಮಾಡುವಾಗ ಕ್ಯಾಂಡಲ್‌ಗಳನ್ನು ಯಾಕೆ ಆರಿಸುತ್ತಾರೆ?
ನಿಮ್ಮ ಆಯಸ್ಸಿನಲ್ಲಿ ಅಷ್ಟು ವರ್ಷಗಳು ನಂದಿಹೋದವು ಎಂಬುದನ್ನು ಸೂಚಿಸಲು.
ಶ್ರೀಧರ ಡಿ. ರಾಮಚಂದ್ರಪ್ಪ, 9880791106
ಕೇಜ್ರಿವಾಲ್ ಹೋದೆಡೆಯಲ್ಲೆಲ್ಲಾ ಏಟುಗಳು ಬಿದ್ದಿದ್ದು ಯಾವುದರ ಸಂಕೇತ?
ಆಮ್ ಆದ್ಮಿಗೆ ಎಷ್ಟು ಆಕ್ರೋಶ ಇದೆ ಎಂಬುದರ ಸಂಕೇತ!
ಓಂ ಚನ್ನೇಶ್ ಅರಬಿಳಚಿಕ್ಯಾಂಪ್, 9901257131
ಶ್ರೀಮಂತ ಹುಡುಗಿಯರೇಕೆ ಯಾವಾಗ್ಲೂ ನಾಯಿಮರಿಯನ್ನೇ ಅಪ್ಪಿಕೊಂಡಿರುತ್ತಾರೆ?
ನಾಯಿಮರಿಯಂತೆ ಬಾಲ ಅಲ್ಲಾಡಿಸಿಕೊಂಡಿರುವವರು ಅವರಿಗೆ ಇಷ್ಟ!
ಬಾಣಭಟ್ಟ