ಸಂಪಾದಕೀಯ

ತಪ್ಪಾಯ್ತು ತಿದ್ಕೋತೀವಿ

ಬೆಂಗಳೂರಿನಿಂದ ರಾಜೀವ ಪಟವರ್ಧನ್ ಅವರು ಬರೆಯುತ್ತಾರೆ- 'ಇಂದಿನ ದಿನಪತ್ರಿಕೆಯ ಜು.25 ಮುಖಪುಟದಲ್ಲಿ 'ಶಾಲಾ ಬಸ್‌ಗೆ ರೈಲು ಡಿಕ್ಕಿ: ಮಕ್ಕಳು ಸೇರಿ 15 ಸಾವು' ಎಂದಿದೆ. ಆದರೆ ಅದು 'ರೈಲಿಗೆ ಶಾಲಾ ಬಸ್ ಡಿಕ್ಕಿ: ಮಕ್ಕಳು ಸೇರಿ 15 ಸಾವು' ಎಂದಾಗಬೇಕಿತ್ತು. ಮೇಲ್ನೋಟಕ್ಕೆ ಎರಡೂ ವಾಕ್ಯ ಪ್ರಯೋಗ ಸರಿಯಾಗಿದೆ. ಮತ್ತು ಒಂದೇ ಅರ್ಥ ಕೊಡುತ್ತದೆ. ಆದರೆ ಸರಿಯಾಗಿ ಯೋಚಿಸಿದರೆ ರೈಲು ತನ್ನ ನಿರ್ದಿಷ್ಟವಾದ ಪಥದಲ್ಲಿ ಚಲಿಸುತ್ತಿರುತ್ತದೆ.. ಆದರೆ ಬಸ್‌ಗೆ ರಸ್ತೆ ಬಿಟ್ಟು ಅನ್ಯ ಮಾರ್ಗ ಹಿಡಿಯಬಹುದು. ಆದ್ದರಿಂದ ಶಾಲಾ ಬಸ್‌ನದ್ದೇ ತಪ್ಪಾಗಿರುತ್ತದೆ..'
'ಹಾಗಾಗಿ 'ರೈಲಿಗೆ ಶಾಲಾ ಬಸ್ ಡಿಕ್ಕಿ: ಮಕ್ಕಳು ಸೇರಿ 15 ಸಾವು' ಎಂದಾಗಬೇಕಿತ್ತು' ಎಂದಿದ್ದಾರೆ.
ಅಪಘಾತ ಸುದ್ದಿಗಳಲ್ಲಿ ಯಾರು ಯಾರಿಗೆ ಅಥವಾ ಯಾವುದು ಯಾವುದಕ್ಕೆ ಡಿಕ್ಕಿ ಹೊಡೆಯಿತು ಎಂದು ಬರೆಯಬಾರದು ಎಂಬುದು ಅಪರಾಧ ವರದಿಗಾರಿಕೆಯ ಅಲಿಖಿತ ನಿಯಮ. ಯಾಕೆಂದರೆ ಯಾರು ಯಾರಿಗೆ ಡಿಕ್ಕಿ ಹೊಡೆದರು ಎಂಬುದನ್ನು ನಿರ್ಧರಿಸುವುದು ನ್ಯಾಯಾಲಯದ ಕೆಲಸ. ಅದಕ್ಕೆ ಸೂಕ್ತ ತನಿಖೆ ಮೂಲಕ ಸಹಾಯ ಮಾಡುವುದು
ಪೊಲೀಸರ ಕೆಲಸ. ಅಪಘಾತ ನಡೆಯಿತು ಎಂಬುದನ್ನು ವರದಿ ಮಾಡುವುದಷ್ಟೇ ನಮ್ಮ ಕೆಲಸ. 'ಬಸ್ ಮತ್ತು ರೈಲು ನಡುವೆ ಡಿಕ್ಕಿ ಸಂಭವಿಸಿ' ಎಂದು ಬರೆದರೆ ಯಾವುದೇ ತೊಂದರೆಯೂ ಇರುವುದಿಲ್ಲ.
ಬಾಗಲಕೋಟೆ ಜಿಲ್ಲೆ ಹುನಗುಂದದಿಂದ ಸಂಗಪ್ಪ ಗಾಣಿಗೇರ ಅವರು ಬರೆಯುತ್ತಾರೆ- 'ಜೂ.24ರಂದು ಪುಟ (6)ರಲ್ಲಿ ಪ್ರಕಟವಾದ 'ಸದಾಶಯಗಳ ಒತ್ತಡದಲ್ಲಿ ಹೊಸ ಸರ್ಕಾರ' ವೀರೇಂದ್ರ ಕಪೂರ್‌ರವರ ಲೇಖನದಲ್ಲಿ ಕೆಲವು ಮುದ್ರಣ ದೋಷಗಳು ಕಂಡು ಬಂದಿವೆ. ಲೇಖನದ 1ನೇ ಕಾಲಮ್ಮಿನಲ್ಲಿ ಮೊದಲು 'ಈ ಹಿಂದಿನ ಸರ್ಕಾರ ಈ ಮೊದಲು ಸೃಷ್ಟಿಸಿಟ್ಟ ಅಪಸವ್ಯಗಳನ್ನು 'ಹೊಗಲಾಡಿಸಿಕೊಳ್ಳಬೇಕಲ್ಲವೇ' ಎಂಬುದು 'ಹೋಗಲಾಡಿಸಿಕೊಳ್ಳಬೇಕಲ್ಲವೇ?' ಅಂತಾಗಬೇಕಿತ್ತು.'
'2ನೇ ಕಾಲಮ್ಮಿನಲ್ಲಿ ... ಟಿವಿ ವಾಹಿನಿಗಳ ಈ ಯುಗದಲ್ಲಿ ಇಂಥವೆಲ್ಲ ವಿವಾದಗಳಿಗೆ 'ಎಂಡೆ' ಮಾಡಿಕೊಡಬಾರದು ಎಂಬುದು 'ಎಡೆ' ಮಾಡಿಕೊಡಬಾರದು ಅಂತಾಗಬೇಕಿತ್ತು. ಮತ್ತೆ ಅದೇ ಕಾಲಮ್ಮಿನ ಕೆಳಗೆ, ಆದಷ್ಟು ಲಾಭ ಮಾಡಿಕೊಳ್ಳುವ 'ವ್ಯಾಪಾರಿಗಲ' ಬುದ್ಧಿಯಿಂದಾಗಿ ಎಂಬಲ್ಲಿ 'ವ್ಯಾಪಾರಿಗಳ' ಅಂತಾಗಬೇಕಿತ್ತು. 4ನೇ ಕಾಲಮ್ಮಿನಲ್ಲಿ ಸಬ್ ಚಲ್ತಾ 'ಹೌ' ಎಂಬುದು ಸಬ್ ಚಲ್ತಾ 'ಹೈ' ಅಂತಾಗಬೇಕಿತ್ತು. ಅದರಂತೆ ಕೆಲವೇ ಭೂ ಮಾಲೀಕರ ಕೈಯಲ್ಲಿ ಸೇರಿಕೊಂಡು ಸ್ವಾಧೀನಕ್ಕೆ ಅಡ್ಡಿಯಾಗಿರುವಂಥ ಸ್ಥಿತಿಗಳನ್ನು ಹೊಗಲಾಡಿಸಿ ಎಂಬುದು ಹೋಗಲಾಡಿಸಿ ಅಂತಾಗಬೇಕಿತ್ತು.

-ವಿಶ್ವೇಶ್ವರ ಭಟ್

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ನಾಳೆ CJPಯ ತಿರಂಗಾ ಮೆರವಣಿಗೆ ನಡೆಯಬೇಕಿದ್ದ ದೆಹಲಿಯ ಸೆಂಟ್ರಲ್ ಪಾರ್ಕ್ ಅನ್ನು 2 ದಿನ ಮುಚ್ಚಿದ NDMC!

ಕನ್ನಡಿಗರು ಕೊಟ್ಟ ದುಡ್ಡಲ್ಲೇ AR Rahman ತಮ್ಮ ಮೊದಲ ಸ್ಟುಡಿಯೋ ಕಟ್ಟಿದ್ದು: ನಟ ಯಶ್

ದೇಶಕ್ಕೆ ಹೇಗೆ ಬೆಂಕಿ ಹಚ್ಚಬೇಕು ಎಂಬುದನ್ನು ಬಾಂಗ್ಲಾದೇಶ ನಮಗೆ ತೋರಿಸಿಕೊಟ್ಟಿದೆ: ನೇಹಾ ಬೋರಾ ಹೇಳಿಕೆಗೆ ಬಿಜೆಪಿ ಆಕ್ರೋಶ!

Ramayana: 'ರಾಮಾಯಣ'ದ ರನ್ ಟೈಮ್ ಮೂರು ಗಂಟೆಗೂ ಹೆಚ್ಚು; ಅಮೆರಿಕದಲ್ಲಿ 'PG-13' ರೇಟಿಂಗ್!

ದೆಹಲಿಯ ರಾಮಲೀಲಾದಲ್ಲಿ ಈ ಬಾರಿ ರಾವಣನ ಜೊತೆಗೆ 30 ಅಡಿ ಎತ್ತರದ ಕಾಕ್ರೋಚ್ ಪ್ರತಿಕೃತಿ ದಹನ!