ಹೆದ್ದಾರಿಯಲ್ಲಿ ಕೋಲ್ಯನ ಕಾರನ್ನು ನಿಲ್ಲಿಸಿದ ಪೊಲೀಸ್: ಇವತ್ತು ಸುರಕ್ಷಾ ದಿನ. ನೀನು ಸುರಕ್ಷಿತವಾಗಿ ಕಾರ್ ಓಡಿಸುತ್ತಿರೋದ್ರಿಂದ ಸಾವಿರ ರುಪಾಯಿ ಬಹುಮಾನ ಕೊಡ್ತೀನಿ. ಏನು ಮಾಡ್ತೀಯ ಈ ಸಾವಿರ ರುಪಾಯಿಯಲ್ಲಿ?
ಕೋಲ್ಯ(ಖುಷಿಯಿಂದ): ಡ್ರೈವಿಂಗ್ ಲೈಸೆನ್ಸ್ ಮಾಡಿಸಿಕೊಳ್ತೀನಿ!
ಪಕ್ಕದಲ್ಲಿದ್ದ ಅವನ ಅಮ್ಮ: ಇವನ ಮಾತು ಕೇಳಬೇಡಿ ಸಾರ್. ಕುಡಿದಾಗ ಏನೇನೋ ಮಾತಾಡ್ತಾನೆ...