ಸಂಪಾದಕೀಯ

ಆದರೆ...

ಮಾತಿಗೊಂದು ಸಣ್ಣ ತಿರುವು
    ಅಪೂರ್ಣ ಕ್ರಿಯಾ ದ್ಯೋತಕ
    ಅಪರ ಕಾರಣ ಪ್ರಸ್ತಾಪಕ
    ಅರೆ ಮಾತಿಗೆ ಮತ್ತೊಂದು ಮಾತನ್ನು ಜೋಡಿಸಿ ಪೂರ್ಣಗೊಳಿಸುವ ಸಂಬಂಧಿಕ
    ಕ್ರಿಯಾ ಅಪೂರ್ಣತೆಯ ಕಾರಣದ ಬಗೆಗಿನ ಸಂದೇಹ ವಾರಣದ ಸೂಚಕ
    ಹೀಗೆ ಆದರೆ ಹಾಗೆ ಆಗಬಹುದೆಂದು ಊಹಿಸಲ್ಪಡುವಾಗ ಬಳಸಲ್ಪಡುವ ಶಬ್ದ
     ಆದರೆಗಳೆಲ್ಲಾ ಆಗಿದ್ದರೆ ಹೀಗಾಗುತ್ತಲೇ ಇರಲಿಲ್ಲ. ಆದರೇನು ಮಾಡುವುದು...
    ಆತ ಒಳ್ಳೆಯವನೇ ಆದರೆ....(ಮಾತೇ ಆಡುವುದಿಲ್ಲ)
    ಆದರೆ ಹೋದರೆಗಳೆಲ್ಲ ಕಲ್ಪನೆಯ ಒಂದೊಂದು ತೆರೆ ಅಷ್ಟೇ
    ಆಧಾರವನ್ನು ಮುಂದಿಡುವಾಗ ಮೊದಲು ಬಳಸಲ್ಪಡುವ ಶಬ್ದ
    ನಿರಾಕರಣೆಯನ್ನು ಚೂರು ಕರುಣಾಪೂರಿತವಾಗಿ ಪ್ರಸ್ತುತಗೊಳಿಸುವ ಶಬ್ದ
    ನಾನು ಬರಬೇಕೆಂದುಕೊಂಡಿದ್ದೆ..ಆದರೆ...
    ನಾನು ಹಾಗೆ ಆಗಿದ್ದರೆ ಹೀಗೆ ಮಾಡುತ್ತಿದ್ದೆ ಎಂದೆಲ್ಲಾ ಕಾಗೆ ಹಾರಿಸಲು ಉಪಯೋಗವಾಗುವ ಶಬ್ದ
    ಆದರೂ ಸರಿ ಆಗದಿದ್ದರೂ ಸರಿಯೇ ಅನ್ನುವವ ಯಾವುದಕ್ಕೂ ಹೆದರಲಾರ
    ಹೇಗಾದರೂ ಸರಿ ಎನ್ನುವವನಿಗೆ ಆದರೆ ಎಂಬ ನೆಪದ ಹಂಗಿಲ್ಲ


-ವಿಶ್ವನಾಥ ಸುಂಕಸಾಳ
vishwasunkasal@yahoo.com


Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

‘ಯುವಕರನ್ನು ಜೈಲಿಗೆ ಕಳುಹಿಸುವುದು ಹೇಡಿತನ’; ಸಿಜೆಪಿ ಪ್ರತಿಭಟನೆಗೆ ರಾಹುಲ್‌ ಗಾಂಧಿ ಬೆಂಬಲ

ವಿಮಾನ ಹೈಜಾಕ್ ಬೆದರಿಕೆ ಎಚ್ಚರಿಕೆ: ಫ್ರಾಂಕ್‌ಫರ್ಟ್‌- ದೆಹಲಿ Air India ಜೈಪುರದಲ್ಲಿ ಎಮೆರ್ಜೆನ್ಸಿ ಲ್ಯಾಂಡಿಂಗ್

ಹಲವು ರಾಜ್ಯಗಳಲ್ಲಿ ಭಾರೀ ಮಳೆ ಮುನ್ಸೂಚನೆ: ಕರ್ನಾಟಕಕ್ಕೂ ಗುಡುಗು, ಮಿಂಚಿನ ಎಚ್ಚರಿಕೆ ಕೊಟ್ಟ ಹವಾಮಾನ ಇಲಾಖೆ!

ಚಲಿಸುವ ರೈಲಿನಲ್ಲಿ ಮೊಬೈಲ್ ಕಳ್ಳತನಕ್ಕೆ ಯತ್ನ: ಕಳ್ಳನ ಕೈ ಹಿಡಿದ ಪ್ರಯಾಣಿಕರು, ಬಿಹಾರದಲ್ಲಿ ರೋಚಕ Video ವೈರಲ್‌

ಬಂಡೀಪುರದಲ್ಲಿ ದಂತವಿಲ್ಲದ ಆನೆಯ ಕಳೇಬರ ಪತ್ತೆ; ನಟೋರಿಯಸ್ ಬವಾರಿಯಾ ಗ್ಯಾಂಗ್‌ ನಂಟಿನ ಶಂಕೆ