ಸಂಪಾದಕೀಯ

ಅಧ್ಯಾಪಕ ವೃತ್ತಿಯಲ್ಲಿಯೇ ಮುಂದುವರೆದ ಸಿಡಿಎನ್

ಪದ್ಮಭೂಷಣ ಪ್ರೊ.ಸಿ.ಡಿ.ನರಸಿಂಹಯ್ಯನವರು ಹಳ್ಳಿಯ ಪರಿಸರದಲ್ಲಿ, ಅವಿದ್ಯಾವಂತ ದಾಸಪ್ಪನವರ ಮಗನಾಗಿ ...

ಪದ್ಮಭೂಷಣ ಪ್ರೊ.ಸಿ.ಡಿ.ನರಸಿಂಹಯ್ಯನವರು ಹಳ್ಳಿಯ ಪರಿಸರದಲ್ಲಿ, ಅವಿದ್ಯಾವಂತ ದಾಸಪ್ಪನವರ ಮಗನಾಗಿ ಜನಿಸಿದರೂ. ತಮ್ಮಲ್ಲಿದ್ದ ಅದಮ್ಯ ಪ್ರತಿಭೆಯಿಂದಾಗಿ ಪ್ರಖ್ಯಾತಿ ಪಡೆದರು. ತಮ್ಮ ಹಳ್ಳಿಗೆ ಅಮಲ್ದಾರರು ಕುದುರೆಯ ಮೇಲೆ ಠೀವಿಯಿಂದ ಬರುತ್ತಿದ್ದುದನ್ನು ನೋಡುತ್ತಿದ್ದ ದಾಸಪ್ಪನವರು ತಮ್ಮ ಮಗನೂ ಹಾಗೆ ಆಗಬೇಕೆಂಬ ಕನಸು ಕಂಡು ಒಳ್ಳೆಯ ಶಿಕ್ಷಣ ಕೊಡಿಸಲು ನಿರ್ಧರಿಸಿದರು. ಅದ್ಭುತ ಪ್ರತಿಭೆಯ ನರಸಿಂಹಯ್ಯ ಕೇಂಬ್ರಿಡ್ಜ್‌ನಲ್ಲಿ ಕಲಿತರು. ನಂತರ ರಾಕ್ಫೆಲರ್ ವಿದ್ಯಾರ್ಥಿವೇತನ ಪಡೆದು ಅಮೆರಿಕದ ಪ್ರಿನ್ಸ್‌ಟನ್ ವಿ.ವಿಯಲ್ಲಿ ಹೆಚ್ಚಿನ ವಿದ್ಯಾಭ್ಯಾಸ ಮಾಡಿದರು. ಅಲ್ಲಿ ಐನ್‌ಸ್ಟೀನರ ಪರಿಚಯವಾಗಿದ್ದು ಅವರ ಜೀವನದ ಪ್ರಮುಖ ಘಟನೆಯಾಗಿದೆ. ಮಹಾರಾಜ ಕಾಲೇಜಿನ ಪ್ರಾಚಾರ್ಯರಾಗಿ ನೇಮಕವಾದಾಗ ಅವರು ಒಂದು ವಿದ್ಯಾರ್ಥಿ ನಿಧಿಯನ್ನು ಸ್ಥಾಪಿಸಿ, ಅಗತ್ಯವಿದ್ದ ಬಡ ವಿದ್ಯಾರ್ಥಿಗಳಿಗೆ ಕಾಲೇಜು ಶುಲ್ಕವನ್ನು ನೀಡುತ್ತಿದ್ದರು. ಅಲ್ಲದೆ ತಿಂಗಳಿಗೆ ಹದಿನಾರು ರು.ಗಳಲ್ಲಿ ಎರಡು ಹೊತ್ತು ಊಟ ಮತ್ತು ಉಪಹಾರ ನೀಡುವ ವ್ಯವಸ್ಥೆಯನ್ನು ಜಾರಿಗೆ ತಂದರು. ಇದು ಅನೇಕ ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸ ಮುಂದುವರೆಸಲು ಸಹಾಯಕವಾಯಿತು. ಆಧುನಿಕ ಇಂಗ್ಲಿಷ್ ಸಾಹಿತ್ಯವನ್ನು ಪಠ್ಯವನ್ನಾಗಿ ಮಾಡಿ ಅನೇಕರು ಕಾವ್ಯದ ಪ್ರಭಾವಕ್ಕೆ ಒಳಗಾಗುವಂತೆ ನೋಡಿಕೊಂಡರು. ಇಂಗ್ಲಿಷಿನಲ್ಲಿ ಬರೆದ ಭಾರತೀಯ ಲೇಖಕರಿಗೆ ಮನ್ನಣೆ ದೊರಕುವಂತೆ ನೋಡಿಕೊಂಡರು. ವಿದ್ಯಾರ್ಥಿಗಳ ಬಗ್ಗೆ ಅಪಾರ ಕಾಳಜಿವಹಿಸಿದ್ದ ಸಿಡಿಎನ್ ಒಬ್ಬ ಶಿಸ್ತಿನ ಸಿಪಾಯಿಯಾಗಿದ್ದರು. ನಿವೃತ್ತಿಯ ನಂತರವೂ ಇಂಗ್ಲಿಷ್ ಸಂಶೋಧನಾ ವಿದ್ಯಾರ್ಥಿಗಳಿಗೆ ಮತ್ತು ಅಧ್ಯಾಪಕರುಗಳಿಗೆ ಹೆಚ್ಚಿನ ಜ್ಞಾನ ಸಂಪಾದನೆಗಾಗಿ ಧ್ವನ್ಯಾಲೋಕ ಎಂಬ ಸಂಸ್ಥೆಯನ್ನು ಸ್ಥಾಪಿಸಿ ಭಾರತೀಯ ಕಾವ್ಯಮೀಮಾಂಸೆಯ ಅಧ್ಯಯನಕ್ಕೆ ಒತ್ತು ನೀಡಿದರು. ಇಲ್ಲಿಗೆ ವಿಶ್ವವಿಖ್ಯಾತರಾದ ಚಿನುವಾ ಅಚೀಬೆ, ಹಾಸನದ ರಾಜಾರಾವ್, ಆರ್.ಕೆ.ನಾರಾಯಣ್, ಎ.ಕೆ.ರಾಮಾನುಜಂ, ಶಿವರಾಮಕಾರಂತ, ನೊಬೆಲ್ ಪ್ರಶಸ್ತಿ ವಿಜೇತ ವಿಲಿಯಂ ಗೋಲ್ಡಿಡಿಂಗ್ಸ್ ಮುಂತಾದವರು ಆಗಮಿಸಿ ಅನೇಕ ಸಾಹಿತ್ಯಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದಾರೆ. ಉನ್ನತ ವಿದ್ಯಾಭ್ಯಾಸ ಮಾಡಿದ್ದರಿಂದ ಆಗಿನ ಕಾಲದಲ್ಲಿ ತಂದೆಯ ಆಸೆಯಂತೆ ಅವರಿಗೆ ಅಮಲ್ದಾರ್ ಅಥವಾ ಕಲೆಕ್ಟರ್ ಹುದ್ದೆ ಸಿಗುವುದೇನೂ ಕಷ್ಟವಿರಲಿಲ್ಲ. ಆದರೆ ಅವರು ಅದಕ್ಕೆ ಆಸೆ ಪಡದೇ ಪ್ರಾಧ್ಯಾಪಕರಾದರು. ಈ ಬಗ್ಗೆ ಅವರು ಹೇಳಿದ್ದು- "ಅಧ್ಯಾಪಕ ವೃತ್ತಿಯ ಬಗ್ಗೆ ನನಗಿದ್ದ ಅದಮ್ಯ ಒಲವೇ ಇದಕ್ಕೆ ಕಾರಣ" ಎಂದು. ಗುರುವಾದವನು ಶಿಷ್ಯನ ಸಂವೇದನೆಗಳನ್ನು ಉದ್ದೀಪನಗೊಳಿಸುವ ಸಂವೇಗವಾಗಿ ಮಾತ್ರ ಕೆಲಸ ಮಾಡಬೇಕು ಎಂಬ ಆದರ್ಶವನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡಿದ್ದ ಶ್ರೇಷ್ಟರಲ್ಲಿ ಒಬ್ಬರಾಗಿದ್ದರು ಸಿ.ಡಿ.ನರಸಿಂಹಯ್ಯನವರು.  


 ಪ್ರೊ. ಎಂ. ಎನ್. ಸುಂದರರಾಜ್, ಶಿವಮೊಗ್ಗ
rajsundar1957@gmail.com

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಭಾರತೀಯರ ಸಾಮೂಹಿಕೆ ಹತ್ಯೆಗೆ ಸಂಚು: ರೈಫಲ್ ಹಿಡಿದು ಅಮೆರಿಕದ ಹಿಂದೂ ದೇವಸ್ಥಾನಕ್ಕೆ ನುಗ್ಗಿದ್ದ ಶೂಟರ್; ಕೊನೆ ಕ್ಷಣದಲ್ಲಿ ಗನ್ ಜಾಮ್, ಆರೋಪಿ ಬಂಧನ..!

ಶೃಂಗೇರಿ ಮತ ಎಣಿಕೆ Video ನಾಪತ್ತೆ: ಚುನಾವಣಾ ಆಯೋಗಕ್ಕೆ ಸುಪ್ರೀಂ ಕೋರ್ಟ್ ತರಾಟೆ..!

ಸ್ಥಳೀಯ ಸಂಸ್ಥೆಗಳಿಗೂ ಜಿಎಸ್‌ಟಿ ಆದಾಯ ಹಂಚಿಕೆ: GST ಮಂಡಳಿಗೆ ರಾಜ್ಯ ಸರ್ಕಾರ ಪ್ರಸ್ತಾವನೆ

ಸ್ಟಿಂಗ್‌ ಆಪರೇಷನ್‌ ಬಗ್ಗೆ ಬೇರೆಯವರು ಮಾತನಾಡುವ ಆಗಿಲ್ಲ ಎನ್ನಲು ನೀವೇನು ಸರ್ವಾಧಿಕಾರಿಯೇ ಪ್ರಿಯಾಂಕ್‌ ಖರ್ಗೆ..?

1 ವರ್ಷ ಗ್ಯಾರಂಟಿ ಯೋಜನೆಗಳ ನಿಲ್ಲಿಸಿ, ಹಣವನ್ನು ರೈತರಿಗೆ ನೀಡಿ: ರಾಜ್ಯ ಸರ್ಕಾರಕ್ಕೆ ದಿಂಗಾಲೇಶ್ವರ ಶ್ರೀಗಳ ಆಗ್ರಹ