ಆಡಬಲ್ ಮತ್ತು ನೋಡಬಲ್ ಹಾಡು
ನೃತ್ಯ, ಸಂಗೀತದ ಸಂಮಿಲನ
ದಣಿದ ಮನ ತಣಿಸುವ ಗೀತೆಗಳು
ಮ್ಯುಸಿಕ್ಗೂ ಸೈ, ಡಾನ್ಸ್ಗೂ ಜೈ
ಬೆಳ್ಳಿತೆರೆಯ ಬಂಗಾರದ ಹಾಡುಗಳು
ಇತ್ತೀಚೆಗಿನದ್ದಾದರೆ ವಿಚಿತ್ರಗೀತೆಯೇ ಸರಿ
ಸಿನಿಮಾ ನಡು ನಡುವೆ ಬರುವ ರಸಮಂಜರಿ
ನಾಯಕ ನಾಯಕಿಯ ನಡುವಿನ ಸರಸ ಗಾಥೆ
ಕಿವಿಯ ತೂತಿನಲ್ಲಿ ಇಯರ್ ಫೋನ್ ತೂರಿಸಿಕೊಂಡು ಕೇಳುವುದು ಇದನ್ನೇ
ಹಿಂದಿನ ಚಿತ್ರ ಗೀತೆಗಳು ತಲೆಯಾಡಿಸುವಂತಿದ್ದರೆ ಈಗಿನವು ಕಾಲು ಕುಣಿಸುವಂತಿರುತ್ತವೆ
ನೀತಿಯನ್ನೂ ಕತೆಯನ್ನೂ ಒಟ್ಟಿಗೇ ಹೇಳಿದರೆ ಅದು ಚಿತ್ರಗೀತೆ. ಇವೆರಡೂ ಇಲ್ಲದಿದ್ದರೆ ಅದು ಸಿನಿಮಾ ಗೀತೆ
ಚಿತ್ತಕ್ಕೇ ಕೈ ಹಾಕಿ, ಗುನುಗುನಿಸುವಂತೆ ಮಾಡುವ ಮಾಯಾಜಾಲ
ಚಿತ್ರವನ್ನು ನೋಡಲಾಗದಿದ್ದರೂ ಆಕಾಶವಾಣಿಯಲ್ಲಿ ಚಿತ್ರಗೀತೆ ಅಂತಲೇ ಪದ ಉಪಯೋಗಿಸಲಾಗುತ್ತೆ
ವಿಶ್ವನಾಥ ಸುಂಕಸಾಳ