ಸಂಪಾದಕೀಯ

ಬಲಿದಾನಕ್ಕಾಗಿ ಪೈಪೋಟಿ

1871 ರ ಜೂನ್ ತಿಂಗಳ ಮಧ್ಯಭಾಗ. ಪಂಜಾಬ್‌ನ ಮಾಲೇರ್ ಕೋಟ್ಲಾದಲ್ಲಿ ಬಾಬಾ ರಾಮಸಿಂಗ್ ನೇತೃತ್ವದಲ್ಲೊಂದು ಚಳವಳಿ ಪ್ರಾರಂಭವಾಯಿತು. ಭಾರತೀಯರೆಲ್ಲರಿಗೂ ಪವಿತ್ರವಾದ ಗೋಮಾತೆಯನ್ನು ವಧಿಸಿ ಮಾರಾಟ ಮಾಡುವ ಬುಚರ್ ಖಾನಾದ ಪ್ರಾರಂಭಕ್ಕೆ ಬ್ರಿಟಿಷ್ ಸರ್ಕಾರ ಅನುಮತಿ ನೀಡಿತು. ಇದು ಸಿಖ್ಖರಲ್ಲಿ ಅಸಮಾಧಾನ ಉಂಟುಮಾಡಿತು. ಅವರೆಲ್ಲ ಸೇರಿ ಸದ್ಗುರು ರಾಮಸಿಂಗರ ನೇತೃತ್ವದಲ್ಲಿ ಹೋರಾಟ ಪ್ರಾರಂಭಿಸಿದರು. ಎಲ್ಲ ಗೋವಧಾಸ್ಥಾನಗಳನ್ನೂ ನಾಶಮಾಡುವ ಕಾರ್ಯಕ್ರಮವನ್ನು ಹಾಕಿಕೊಂಡು ಕೆಲವು ಅಂತಹ ಕೆಲವು ಪ್ರದೇಶಗಳನ್ನು ನಾಶಮಾಡಿದರು. ಇದರಿಂದ ಕೆರಳಿದ ಬ್ರಿಟಿಷ್ ಸರ್ಕಾರ ರಾಮಸಿಂಗರ ಕೂಕಾ ಪಡೆಯ, ಹೋರಾಟದಲ್ಲಿ ಪಾಲ್ಗೊಂಡಿದ್ದರೆನ್ನಲಾದ ಐವತ್ತು ಜನರನ್ನು ಬಂಧಿಸಿ ವಿಚಾರಣೆ ನಡೆಸಿ ಮರಣದಂಡನೆ ಶಿಕ್ಷೆಗೆ ಗುರಿಮಾಡಿತು. ಆ ಶಿಕ್ಷೆಯನ್ನು ಜಾರಿಮಾಡಲು ಬ್ರಿಟಿಷ್ ಅಧಿಕಾರಿ ಕಾವನ್‌ನನ್ನು ನೇಮಿಸಲಾಯಿತು. ಎಲ್ಲರನ್ನೂ ಒಂದೆಡೆ ಸೇರಿಸಿ ತೋಪಿನ ಬಾಯಿಗೆ ಕಟ್ಟಿ ಉಡಾಯಿಸಲು ತೀರ್ಮಾನಿಸಲಾಯಿತು. ಬಹಿರಂಗವಾಗಿ ನಡೆದ ಈ ಮರಣದಂಡನೆಗೆ ಸಾಕ್ಷಿಯಾಗಿ ಅಸಂಖ್ಯಾತ ಜನರೂ ಸಹ ಸೇರಿದ್ದರು. ಅವರನ್ನು ಬೆನ್ನುಮಾಡಿ ತೋಪಿಗೆ ಕಟ್ಟಿದಾಗ ಎಲ್ಲರೂ ಪ್ರತಿಭಟಿಸಿ, ತಮ್ಮನ್ನು ಎದುರಿನಿಂದಲೇ ಕಟ್ಟಿ ಉಡಾಯಿಸಬೇಕೆಂದೂ, ಬೆನ್ನಿಗೆ ತೋಪುಹಾರಿಸಿ ಕೊಲ್ಲಬಾರದೆಂದು ಮನವಿ ಮಾಡಿದರು. ಅದರಂತೆ ಒಬ್ಬೊಬ್ಬ ಸ್ವಾತಂತ್ರ್ಯ ಯೋಧನೂ ನಾ ಮುಂದೆ, ತಾ ಮುಂದೆ ಎಂದು ಬಂದು ನಿಲ್ಲುತ್ತಿದ್ದರು. ಒಬ್ಬೊಬ್ಬರನ್ನೂ ತೋಪಿನ ಬಾಯಿಗೆ ಕಟ್ಟಿ ಕೊಲ್ಲಲಾಯಿತು. ಹೀಗೆ ಕೊಲ್ಲುವಾಗ ಎಲ್ಲರೂ ಜಯಘೋಷಹಾಕುತ್ತಾ ಅಸುನೀಗಿದರು. ಇದರ ಮಜವನ್ನು ಆಂಗ್ಲ ಅಧಿಕಾರಿಗಳು ಮತ್ತು ಅವರ ಕುಟುಂಬವಗದವರು ಸವಿಯುತ್ತಿದ್ದರು. ಒಬ್ಬ ಯೋಧನಂತೂ ಕುಳ್ಳಗಿದ್ದು ತೋಪಿನ ಬಾಯಿಗೆ ಸಿಗುತ್ತಿರಲಿಲ್ಲ. ಅವನನ್ನು ಬಿಟ್ಟು ಬಿಡಲು ಅಧಿಕಾರಿಗಳು ನಿರ್ಧರಿಸಿದ್ದರು. ಆದರೆ ಆ ವ್ಯಕ್ತಿ ಅಲ್ಲಿ ಇಲ್ಲಿ ಇದ್ದ ಕಲ್ಲು ಚಪ್ಪಡಿಗಳನ್ನು ತಂದು, ಒಂದರ ಮೇಲೊಂದು ಇಟ್ಟು ಎತ್ತರಮಾಡಿಕೊಂಡು ತೋಪಿನ ಬಾಯಿಗೆ ಎದುರಾಗಿ ನಿಂತು ಬಲಿದಾನಕ್ಕಾಗಿ ಕಾದುನಿಂತ. ಏನು ಹೇಳಿದರೂ ಕೇಳದಿದ್ದಾಗ ಅವನನ್ನೂ ತೋಪು ಹಾರಿಸಿ ಕೊಲ್ಲಲಾಯಿತು. ಕೊನೆಗೆ ಉಳಿದವನು ಒಬ್ಬ ಬಾಲಕ. ಅದುವರೆಗೆ ನೋಡುತ್ತಿದ್ದ ಭಾರತೀಯರ ದುಃಖ ಕಟ್ಟೆಯೊಡೆದಿತ್ತು. ಬ್ರಿಟಿಷ್ ಅಧಿಕಾರಿ ಕಾವನ್‌ನ ಪತ್ನಿಗೆ ಸಹಿಸದಾಯಿತು. ಇಂತಹ ಮುದ್ದಾದ ಪುಟ್ಟ ಬಾಲಕನನ್ನು ಕೊಲ್ಲುವುದೆ ಎಂದು ಅವಳು ತನ್ನ ಪತಿಯಲ್ಲಿ ಕೇಳಿಕೊಂಡು ಆ ಬಾಲಕನನ್ನು ಬಿಟ್ಟುಬಿಡಲು ವಿನಂತಿಸಿದಳು. ಆ ಅಧಿಕಾರಿ "ಮೂರ್ಖ ರಾಮಸಿಂಗನ ಸಹವಾಸವನ್ನು ಬಿಟ್ಟರೆ ಆ ಬಾಲಕನನ್ನು ಕೊಲ್ಲದೆ ಬಿಡುವುದಾಗಿ" ತಿಳಿಸಿದ. ಆದರೆ ಆ ಬಾಲಕನ ಸ್ವಾಭಿಮಾನ ಎಷ್ಟಿತ್ತೆಂದರೆ, ತನ್ನ ಗುರುನಿಂದನೆಯನ್ನು ಕೇಳಿ ಸಹಿಸದೆ, ಕಾವನ್‌ನನ ಮೈಮೇಲೆರಗಿ ಅವನ್ನು ಹಿಗ್ಗಾ ಮುಗ್ಗ ಥಳಿಸಿಬಿಟ್ಟ. ಆಗ ಅಲ್ಲಿಯೇ ಇದ್ದ ಸೈನಿಕರು ಆ ಬಾಲಕನನ್ನು ನಿರ್ದಾಕ್ಷಿಣ್ಯವಾಗಿ ಕೊಚ್ಚಿಹಾಕಿದರು.
( ವಿವೇಕ ಸಂಪದ, ಜನವರಿ-ಏಪ್ರಿಲ್ 2014 ಮತ್ತು ಅಂತರ್ಜಾಲ ತಾಣ)

 ಪ್ರೊ. ಎಂ. ಎನ್. ಸುಂದರರಾಜ್, ಶಿವಮೊಗ್ಗ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ನಾಳೆ CJPಯ ತಿರಂಗಾ ಮೆರವಣಿಗೆ ನಡೆಯಬೇಕಿದ್ದ ದೆಹಲಿಯ ಸೆಂಟ್ರಲ್ ಪಾರ್ಕ್ ಅನ್ನು 2 ದಿನ ಮುಚ್ಚಿದ NDMC!

ಕನ್ನಡಿಗರು ಕೊಟ್ಟ ದುಡ್ಡಲ್ಲೇ AR Rahman ತಮ್ಮ ಮೊದಲ ಸ್ಟುಡಿಯೋ ಕಟ್ಟಿದ್ದು: ನಟ ಯಶ್

ದೇಶಕ್ಕೆ ಹೇಗೆ ಬೆಂಕಿ ಹಚ್ಚಬೇಕು ಎಂಬುದನ್ನು ಬಾಂಗ್ಲಾದೇಶ ನಮಗೆ ತೋರಿಸಿಕೊಟ್ಟಿದೆ: ನೇಹಾ ಬೋರಾ ಹೇಳಿಕೆಗೆ ಬಿಜೆಪಿ ಆಕ್ರೋಶ!

Ramayana: 'ರಾಮಾಯಣ'ದ ರನ್ ಟೈಮ್ ಮೂರು ಗಂಟೆಗೂ ಹೆಚ್ಚು; ಅಮೆರಿಕದಲ್ಲಿ 'PG-13' ರೇಟಿಂಗ್!

ದೆಹಲಿಯ ರಾಮಲೀಲಾದಲ್ಲಿ ಈ ಬಾರಿ ರಾವಣನ ಜೊತೆಗೆ 30 ಅಡಿ ಎತ್ತರದ ಕಾಕ್ರೋಚ್ ಪ್ರತಿಕೃತಿ ದಹನ!