ಉಳಿದ ದೇಶಗಳೆಲ್ಲಾ ಜನಸಂಪತ್ತು ಇಲ್ಲವೆಂದು ಕೊರಗುತ್ತಿದ್ದರೆ ನಮಗೆ ಜನಸಂಪತ್ತೇ ಆಪತ್ತು ಎಂಬಂತಾಗಿದ್ದು ವಿಪರ್ಯಾಸ
ನೂರು ಕೋಟಿ ಜನರಲ್ಲಿ ಒಬ್ಬನೇ ಒಬ್ಬ ಒಲಿಂಪಿಕ್ಸ್ನಲ್ಲಿ ಚಿನ್ನದ ಪದಕ ತರುವಂಥವರು ತಯಾರಾಗುವುದಿಲ್ಲವಲ್ಲ, ಅದು ವಿಪರ್ಯಾಸ
ಸಾಕ್ಷರತೆ ಏರಿದಂತೆಲ್ಲಾ ಮಾನವೀಯತೆ ಕಡಿಮೆಯಾಗುತ್ತಿರುವುದೂ ವಿಪರ್ಯಾಸ
ನೈತಿಕತೆ ಬೋಧಿಸಬೇಕಾದ ವಿಶ್ವವಿದ್ಯಾನಿಲಯಗಳೇ ಭ್ರಷ್ಟರ ಕೂಪವಾಗುತ್ತಿರುವುದು ವಿಪರ್ಯಾಸ
ನಮ್ಮ ಗುರುಕುಲ ಪದ್ಧತಿ ಬಿಟ್ಟು ಗೊತ್ತುಗುರಿಯಿಲ್ಲದ ಮೆಕಾಲೆ ಪದ್ಧತಿಯನ್ನು ಮೇಕೆಗಳಂತೆ ಅನುಸರಿಸುತ್ತಿರುವುದು ವಿಪರ್ಯಾಸ
ಬಿ.ಕಾಂ. ಮುಗಿಸಿದವನಿಗೆ ಮಗ್ಗಿಯೂ ಬರುವುದಿಲ್ಲವಲ್ಲ, ಅದು ವಿಪರ್ಯಾಸ
ವೇದಿಕೆಯ ಮೇಲೆ ಬುದ್ಧಿಜೀವಿ, ನಿಜದಲ್ಲಿ ಲದ್ದಿ ತಿನ್ನುವಿಕೆಯೊಂದು ವಿಪರ್ಯಾಸವೇ
ತಾನು ಜಾತ್ಯತೀತ ಎನ್ನುತ್ತಾ ಹೆಸರ ಕೊನೆಯಲ್ಲಿ ಜಾತಿ ಸೇರಿಸಿಕೊಳ್ಳಲು ಮರೆಯುವುದಿಲ್ಲವಲ್ಲ, ಅದು ವಿಪರ್ಯಾಸ
ಅಧಿಕಾರಶಾಹಿಗಳಿಗೆ ಬಕೇಟ್ ಹಿಡಿದು ವಿವಿಧ ಆಯಕಟ್ಟಿನ ಹುದ್ದೆ ಆಕ್ರಮಿಸಿಕೊಂಡು ಯೋಗ್ಯರ ಅನ್ನ ಕಸಿಯುತ್ತಾರಲ್ಲ ಅದು ವಿಪರ್ಯಾಸ
ಉನ್ನತ ಅಂಕ ಗಳಿಸಿದರೂ ಜಾತಿಯ ಕಾರಣಕ್ಕಾಗಿ ಕೆಲಸ ಸಿಗದೇ, ಮತ್ಯಾರೋ ಜಸ್ಟ್ಪಾಸ್ಗೂ ನೌಕರಿ ಸಿಗುತ್ತಲ್ಲಾ ಅದು ವಿಪರ್ಯಾಸ
ನಾವೆಲ್ಲಾ ಒಂದು ಎನ್ನುತ್ತಾ ನಮ್ಮ ನಮ್ಮ ಜಾತಿಯವರು ಸಂಘಟಿತರಾಗಬೇಕು ಎನ್ನುತ್ತಾರಲ್ಲಾ, ಅದು ವಿಪರ್ಯಾಸ
ಸತ್ಯ ಹೇಳಿದರೆ ಸುಳ್ಳುಗಾರನ ಪಟ್ಟ, ಸುಳ್ಳು ಹೇಳಿದರೆ ಪ್ರಶಸ್ತಿ ಸಿಗುತ್ತದೆ, ಅದು ವಿಪರ್ಯಾಸ
ತಿಲಕ ಇಟ್ಟುಕೊಂಡರೆ ಮೂಢನಂಬಿಕೆ, ಟೊಪ್ಪಿ ಹಾಕಿಕೊಳ್ಳುವುದು ಪ್ರಶ್ನಾತೀತ- ಇದೂ ವಿಪರ್ಯಾಸವೇ
ನ್ಯಾಯ ಹೇಳುವ ನ್ಯಾಯಾಧೀಶನೇ ಅನ್ಯಾಯ ಮಾಡಿ ರಾಜಾರೋಷವಾಗಿ ತಿರುಗುವುದು ವಿಪರ್ಯಾಸ
-ವಿಶ್ವನಾಥ ಸುಂಕಸಾಳ
vishwasunkasal@yahoo.com