ಸಂಪಾದಕೀಯ

ದಿವಾಕರರನ್ನು ಅಭಿನಂದಿಸಲೊಪ್ಪದ ಆಲೂರು ವೆಂಕಟರಾಯರು

ರಂಗನಾಥ ದಿವಾಕರರು ಅಪ್ಪಟ ಗಾಂಧಿವಾದಿಗಳಾಗಿ, ಸ್ವಾತಂತ್ರ್ಯ ಹೋರಾಟಗಾರರಾಗಿ, ಪತ್ರಕರ್ತರಾಗಿ ಹೆಸರು ಮಾಡಿದವರು. ...

ರಂಗನಾಥ ದಿವಾಕರರು ಅಪ್ಪಟ ಗಾಂಧಿವಾದಿಗಳಾಗಿ, ಸ್ವಾತಂತ್ರ್ಯ ಹೋರಾಟಗಾರರಾಗಿ, ಪತ್ರಕರ್ತರಾಗಿ ಹೆಸರು ಮಾಡಿದವರು. ಭಾರತೀಯ ವಿದ್ಯಾಭವನದ ಬೆಂಗಳೂರು ಶಾಖೆಯ ಶಿಲ್ಪಿಯಾಗಿಯೂ ಅವರು ಹೆಸರುಗಳಿಸಿದ್ದಾರೆ. ಭಾರತ ಸಂವಿಧಾನದ ನಿರ್ಮಾತೃಗಳಲ್ಲಿ ಅವರೂ ಒಬ್ಬರಾಗಿದ್ದರು. ಸ್ವದೇಶಿ ಚಳವಳಿಯ ನೇತಾರರಾಗಿ ಮತ್ತು ಬರಹಗಾರರಾಗಿ ಅನೇಕ ಕೃತಿಗಳನ್ನೂ ರಚಿಸಿದ್ದಾರೆ. ಸ್ವತಂತ್ರ ಭಾರತದಲ್ಲಿ ಬಿಹಾರದ ರಾಜ್ಯಪಾಲರಾಗಿ, ರಾಜ್ಯಸಭೆ ಸದಸ್ಯರಾಗಿ ಸಹ ಸೇವೆ ಸಲ್ಲಿಸಿದ್ದಾರೆ. ಜವಹರಲಾಲ್ ನೆಹರೂರವರ ಪ್ರಥಮ ಸಚಿವ ಸಂಪುಟದಲ್ಲಿ ಸುದ್ದಿ ಹಾಗೂ ಬಾನುಲಿ ಮಂತ್ರಿಗಳಾಗಿ ನೇಮಕವಾದಾಗ ದಿವಾಕರರಿಗೆ ಸಹಜವಾಗಿಯೇ ಸಂತೋಷವಾಗಿತ್ತು. ಕರ್ನಾಟಕದ ಒಬ್ಬ ವ್ಯಕ್ತಿ ನೆಹರೂ ಸಂಪುಟದಲ್ಲಿ ಕೇಂದ್ರ ಮಂತ್ರಿಯಾದದ್ದು ಕನ್ನಡಿಗರೆಲ್ಲರಿಗೆ ಸಂತಸದ ಮತ್ತು ಹೆಮ್ಮೆಯ ವಿಷಯವಾಗಿತ್ತು. ಹೀಗಾಗಿ ಅವರಿಗೆ ಅಭಿನಂದನೆಗಳ ಸುರಿಮಳೆಯೇ ಆಯಿತು. ಅವೆಲ್ಲವುಗಳನ್ನೂ ಅವರು ಆಸ್ಥೆಯಿಂದ ಪರಿಶೀಲಿಸುತ್ತಿರುವಾಗ ಅವರ ಮುಖದ ಮೇಲೆ ಚಿಂತೆಯ ಕಾರ್ಮೋಡ ಸುಳಿಯಿತು. ಅವರಿಗೆ ಪರಿಚಿತರಿದ್ದ ಬಹುತೇಕ ಎಲ್ಲ ಗಣ್ಯರೂ ಸಂದೇಶಗಳನ್ನು ಕಳುಹಿಸಿದ್ದರೂ ಅವರ ಗುರು ಸಮಾನರಾದ ಕನ್ನಡ ಕುಲ ಪುರೋಹಿತ ಎಂದು ಕರೆಸಿಕೊಳ್ಳುತ್ತಿದ್ದ ಆಲೂರು ವೆಂಕಟರಾಯರು ಮಾತ್ರ ಅವರಿಗೆ ಅಭಿನಂದಿಸಿ, ಆಶೀರ್ವದಿಸಿದ ಪತ್ರ ಮಾತ್ರ ಕಂಡು ಬರಲಿಲ್ಲ. ಇಂದಲ್ಲಾ ನಾಳೆ ಬರಬಹುದೆಂದು ಕಾದರೂ ಯಾವ ಉಪಯೋಗವೂ ಆಗಲಿಲ್ಲ. ತಮ್ಮೆಲ್ಲ ಕೆಲಸ ಕಾರ್ಯಗಳಿಗೆ ಬೆನ್ನುತಟ್ಟಿ ಆಶೀರ್ವದಿಸುತ್ತಿದ್ದ ಆಲೂರರು ಮಾತ್ರ ಶುಭಾಶಯ ಹೇಳದಿದ್ದುದು ದಿವಾಕರರಿಗೆ ಚಿಂತೆಗೀಡು ಮಾಡಿತ್ತು. ಆಗ ಅವರೇ ಆಲೂರರಿಗೆ ಪತ್ರ ಬರೆದು, ತಾವು ಎಲ್ಲರಿಂದಲೂ ಶುಭಾಕಾಂಕ್ಷೆ ಪತ್ರವನ್ನು ಪಡೆದರೂ ಸಹ ಆಲೂರರ ಆಶೀರ್ವಾದ ಇಲ್ಲದೇ ಹೋದರೆ ಅವುಗಳಿಗೆ ಅರ್ಥವಿರುವುದಿಲ್ಲವೆಂದು ತಮ್ಮ ಮನದಾಳದ ನೋವನ್ನು ತೋಡಿಕೊಂಡರು. ಆಗ ವೆಂಕಟರಾಯರಿಂದ ತಕ್ಷಣ ದಿವಾಕರರಿಗೊಂದು ಪತ್ರ ಬಂತು. ಅದರಲ್ಲಿ ಹೀಗೆ ಬರೆದಿತ್ತು, "ನಾನು ಉದ್ದೇಶ ಪೂರ್ವಕವಾಗಿಯೇ ಅಭಿನಂದನಾ ಸಂದೇಶ ಕಳಿಸಲಿಲ್ಲ. ನೀವು ಕರ್ನಾಟಕದ ಕೆಲಸ ಬಿಟ್ಟು ಮಂತ್ರಿ ಆದಿರೆಂದು ನಾನು ನಿಮ್ಮನ್ನು ಅಭಿನಂದಿಸಬೇಕಿತ್ತೆ? ಕನ್ನಡಿಗರ ಮನೋಭೀಷ್ಟವನ್ನು ಪೂರೈಸಿಕೊಡುವ ಕೆಲಸವನ್ನು ಅರ್ಧಕ್ಕೇ ನಿಲ್ಲಿಸಿದ ನಿಮಗೆ ಮಂತ್ರಿಪದದ ಆಡಂಬರ ಬೇಕಾಯಿತು. ಅದಕ್ಕಾಗಿ ನಾನು ಸಂತೋಷಪಡಬೇಕಾಗಿತ್ತೆ? ಯಾವ ಕಾರಣಕ್ಕೋಸ್ಕರ ನಾನು ಮೆಚ್ಚುಗೆ ಸೂಚಿಸಬೇಕಾಗಿತ್ತು ನೀವೇ ಹೇಳಿರಿ?"


- ಪ್ರೊ. ಎಂ. ಎನ್. ಸುಂದರರಾಜ್, ಶಿವಮೊಗ್ಗ
rajsundar1957@gmail.com


Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ನಾಳೆ CJPಯ ತಿರಂಗಾ ಮೆರವಣಿಗೆ ನಡೆಯಬೇಕಿದ್ದ ದೆಹಲಿಯ ಸೆಂಟ್ರಲ್ ಪಾರ್ಕ್ ಅನ್ನು 2 ದಿನ ಮುಚ್ಚಿದ NDMC!

ಕನ್ನಡಿಗರು ಕೊಟ್ಟ ದುಡ್ಡಲ್ಲೇ AR Rahman ತಮ್ಮ ಮೊದಲ ಸ್ಟುಡಿಯೋ ಕಟ್ಟಿದ್ದು: ನಟ ಯಶ್

ದೇಶಕ್ಕೆ ಹೇಗೆ ಬೆಂಕಿ ಹಚ್ಚಬೇಕು ಎಂಬುದನ್ನು ಬಾಂಗ್ಲಾದೇಶ ನಮಗೆ ತೋರಿಸಿಕೊಟ್ಟಿದೆ: ನೇಹಾ ಬೋರಾ ಹೇಳಿಕೆಗೆ ಬಿಜೆಪಿ ಆಕ್ರೋಶ!

Ramayana: 'ರಾಮಾಯಣ'ದ ರನ್ ಟೈಮ್ ಮೂರು ಗಂಟೆಗೂ ಹೆಚ್ಚು; ಅಮೆರಿಕದಲ್ಲಿ 'PG-13' ರೇಟಿಂಗ್!

ದೆಹಲಿಯ ರಾಮಲೀಲಾದಲ್ಲಿ ಈ ಬಾರಿ ರಾವಣನ ಜೊತೆಗೆ 30 ಅಡಿ ಎತ್ತರದ ಕಾಕ್ರೋಚ್ ಪ್ರತಿಕೃತಿ ದಹನ!