ಸಂಪಾದಕೀಯ

ಜಲಮರುಪೂರಣ ಯೋಜನೆ ಮಹತ್ವ

ಜುಲೈ 4ರ ಪತ್ರಪ್ರಭ ವಿಭಾಗದಲ್ಲಿ ಪ್ರಕಟವಾದ 'ಕೊಳವೆ ಬಾವಿಗಳನ್ನು ಮುಚ್ಚಲೇಬೇಕೇ?' ಎಂಬ ಕೆ. ವಿಜಯರಾಘವ ಅವರ ಬರಹದಲ್ಲಿ ಪ್ರಸ್ತಾಪಿಸಿರುವ ಅಂಶಗಳು ಜಲಸಂರಕ್ಷಣೆಯ ದೃಷ್ಟಿಯಿಂದ ಮಹತ್ವಪೂರ್ಣವಾಗಿದೆ. ಅಂತರ್ಜಲವೃದ್ಧಿ, ಜಲಮರುಪೂರಣ ಹಾಗೂ ಸಮರ್ಥ ನಿರ್ವಹಣೆಯ ಸಂಬಂಧವಾಗಿ ರಾಜಸ್ತಾನ ಹಾಗೂ ಮಹಾರಾಷ್ಟ್ರದಲ್ಲಿ ಕೆಲವೊಂದು ಸಂಘಟನೆಗಳು, ಅಣ್ಣಾಹಜಾರೆಯವರಂತಹ ಸಮಾಜ ಸೇವಕರು ಕೈಗೊಂಡ ಯೋಜನೆಗಳು ಯಶಸ್ವಿಯಾಗಿರುವುದಷ್ಟೇ ಅಲ್ಲ, ಬರ ನಿರ್ವಹಣೆಯನ್ನು ಸಮರ್ಥವಾಗಿ ಹೇಗೆ ಮಾಡಬಹುದು ಎಂಬುದಕ್ಕೆ ಇಡೀ ರಾಷ್ಟ್ರಕ್ಕೇ ಮಾದರಿಯಾಗಿವೆ. ಅದೇ ಮಾದರಿಯನ್ನು ದೇಶದ ಇತರ ರಾಜ್ಯಗಳೂ ಅನುಸರಿಸಬಾರದೇಕೆ? ನೀರಿನ ಮೂಲಗಳ ಪುನರ್ ಉತ್ಪತ್ತಿ ಹಾಗೂ ಅಂತರ್ಜಲ ವೃದ್ಧಿಯ ಬಗ್ಗೆ ಗಮನವನ್ನೇ ನೀಡದೇ, ಸರ್ಕಾರವಾಗಲೀ, ಜನಸಾಮಾನ್ಯರಾಗಲೀ ಎಷ್ಟೊಂದು ಕೊಳವೆ ಬಾವಿಗಳನ್ನು ಕೊರೆಸಿದರೂ ನಿರೀಕ್ಷಿತ ಫಲ ಸಿಗುವುದಾದರೂ ಹೇಗೆ? ಬೆಂಕಿ ಬಿದ್ದಾಗ ಬಾವಿ ತೋಡಲು ಹೊರಟಂತೆ ಬರದ ಸಮಸ್ಯೆ ಧುತ್ತೆಂದು ಎದುರಾದಾಗಲಷ್ಟೇ ಭೂಮಾತೆಯ ಗರ್ಭವನ್ನು ಕೊರೆಯುವ ಕೆಲಸ ಭರದಿಂದ ಸಾಗುತ್ತದೆ! ಗಣನೀಯ ಪ್ರಮಾಣದಲ್ಲಿ ಅಂತಹ ಪ್ರಯತ್ನಗಳು ನಿಷ್ಪಲವಾಗುತ್ತಿದ್ದರೂ, ಅದರಿಂದ ಪಾಠವನ್ನು ಕಲಿಯವುದಿಲ್ಲ. ದೀರ್ಘಕಾಲೀನ ಹಾಗೂ ಶಾಶ್ವತವಾದ ಪರಿಹಾರೋಪಾಯಗಳನ್ನು ಕೈಗೊಳ್ಳುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನವನ್ನೂ ಮಾಡುವುದಿಲ್ಲ. ಇದು ಅತಿ ದೊಡ್ಡ ದುರಂತ! ಅದೂ ಸಾಲದೆಂಬಂತೆ, ದೇಶದೆಲ್ಲೆಡೆ ತೆರೆದ ಕೊಳವೆ ಬಾವಿಯೊಳಗೆ ಬಿದ್ದು ಅಮಾಯಕ ಮಕ್ಕಳ ಜೀವಹಾನಿ ಆಗುತ್ತಲೇ ಇದೆ. ಇದಕ್ಕೆಲ್ಲ ಯಾರು ಹೊಣೆ?
ಇನ್ನಾದರೂ ಸಂಬಂಧಪಟ್ಟ ಸರ್ಕಾರಗಳು ಎಚ್ಚೆತ್ತು, ರಾಜಸ್ತಾನ ಹಾಗೂ ಮಹಾರಾಷ್ಟ್ರಗಳಲ್ಲಿ ಜಲಮರುಪೂರಣ ಹಾಗೂ ಸಂರಕ್ಷಣೆಗಾಗಿ ಕೈಗೊಂಡಂತಹ ಯೋಜನೆಗಳನ್ನು ಮಾದರಿಯಾಗಿಟ್ಟುಕೊಂಡು, ಅನುಷ್ಠಾನಕ್ಕೆ ತರುವತ್ತ ದೃಢ ಸಂಕಲ್ಪ ತಳೆದು, ಕಾರ್ಯಪ್ರವೃತ್ತವಾದಲ್ಲಿ ಜಲಾಭಾವದ ಸಮಸ್ಯೆ ದೂರವಾಗಿ ದೇಶವು ಸಮೃದ್ಧಿಯ ದಿನಗಳನ್ನು ಕಾಣುವಂತಾದೀತು.
-ಜಯರಾಮ ರೈ. ಕುಂಜಾಡಿ, ಬೆಂಗಳೂರು

ತೆರಿಗೆ ವಿನಾಯಿತಿ-ಮೂಗಿಗೆ ತುಪ್ಪ

ಈಗಿನ ಹಣದುಬ್ಬರದ ಸನ್ನಿವೇಶದಲ್ಲಿ ಕೇಂದ್ರ ವಿತ್ತ ಸಚಿವರು ವಾಸ್ತವಿಕ ದೃಷ್ಟಿಕೋನದಿಂದ ವರಮಾನ ತೆರಿಗೆ ವಿನಾಯಿತಿ ಮಿತಿಯನ್ನು ನ್ಯಾಯೋಚಿತ ದರಗಳಿಗೆ ಹೆಚ್ಚಿಸುವುದರ ಜೊತೆಗೆ, ತೆರಿಗೆ ಹಂತಗಳಲ್ಲಿ ಶ್ರೀಸಾಮಾನ್ಯನು ಸಮಾಧಾನದ ಉಸಿರು ಬಿಡುವಂತಹ ಬದಲಾವಣೆ ತರುವರೆಂದು ನಿರೀಕ್ಷಿಸಲಾಗಿತ್ತು. ಆದರೆ, ಕೇಂದ್ರ ಅರ್ಥ ಸಚಿವರು ಮಂಡಿಸಿದ 2014-15ನೇ ಸಾಲಿನ ಬಜೆಟ್‌ನಲ್ಲಿ ತೆರಿಗೆದಾರರಿಗೆ- ವಿಶೇಷವಾಗಿ ಮಧ್ಯಮವರ್ಗದವರಿಗೆ ನೀಡಿರುವ ಪರಿಹಾರ ಮೂಗಿಗೆ ತುಪ್ಪವೇ ಸರಿ. ಕಲಂ 80(್ಛ) ಅಡಿ ಮಾಡಿರುವ ಹೆಚ್ಚಳವೂ ಸಹ ಅತ್ಯಲ್ಪ. ವೇತನದಾರರಿಗೆ ಬೆಲೆ ಏರಿಕೆಯನ್ನು ಸ್ಪಲ್ವಮಟ್ಟಿಗೆ ಸರಿದೂಗಿಸಲು ಸರ್ಕಾರಗಳು ನೀಡುವ ತುಟ್ಟಿಭತ್ಯೆ, ಜನರ ಉಳಿತಾಯದ ಮೇಲೆ ಬ್ಯಾಂಕ್‌ಗಳು ಕಡಿಮೆ ದರದಲ್ಲಿ ನೀಡುವ ಬಡ್ಡಿಯನ್ನು ಸಹ ವರಮಾನವೆಂದು ಪರಿಗಣಿಸುವುದು ಅತಾರ್ಕಿಕವಾದದ್ದು. ಸರ್ಕಾರವು, ದೇಶದ ಒಳಗೆ ಮತ್ತು ಹೊರಗೆ ಇರುವ ಕಪ್ಪು ಹಣವನ್ನು ಹೊರತೆಗೆಯುವುದು, ದುಂದುವೆಚ್ಚಗಳಿಗೆ ಕಡಿವಾಣ ಹಾಕುವುದು, ಅನಗತ್ಯ ಇಲಾಖೆಗಳನ್ನು ಗುರ್ತಿಸಿ ಮುಚ್ಚುವ ಹಾಗೂ ಇತರ ಕ್ರಮಗಳಿಂದ ಸಂಪನ್ಮೂಲಗಳ ಕ್ರೋಢೀಕರಣಕ್ಕೆ ಗಮನ ನೀಡಬೇಕು. ಬೆಲೆ ಏರಿಕೆಯಿಂದ ತತ್ತರಿಸುತ್ತಿರುವ ಜನರಿಗೆ ಯಾವುದೇ ಪರಿಹಾರ ನೀಡದೇ ಮತ್ತೆ ಬರೆ ಎಳೆಯುವುದು ತರವಲ್ಲ. ಈ ನಿಟ್ಟಿನಲ್ಲಿ, ನಿವೃತ್ತರೂ ಸೇರಿದಂತೆ, ವೇತನದಾರರು ಹಾಗೂ ಇತರ ಸಂಬಂಧಿತರು ಎಲ್ಲಾ ಅಂಶಗಳನ್ನೊಳಗೊಂಡ ಮನವಿಯನ್ನು ಸೂಕ್ತ ರೀತಿಯಲ್ಲಿ ಕೇಂದ್ರ ಅರ್ಥ ಸಚಿವಾಲಯಕ್ಕೆ ಸಲ್ಲಿಸಿ ಅಗತ್ಯ ಪರಿಹಾರ ಕೋರುವುದು ಅನಿವಾರ್ಯ.
-ಕೆ.ಟಿ.ಕಣ್ಣನ್, ಬೆಂಗಳೂರು

ಕನ್ನಡಪ್ರಭ, ನಂ.1 , ಕ್ವೀನ್ಸ್ ರಸ್ತೆ, ಬೆಂಗಳೂರು-560001.
email: anisikeprabha@gmail.com


Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ನಾಳೆ CJPಯ ತಿರಂಗಾ ಮೆರವಣಿಗೆ ನಡೆಯಬೇಕಿದ್ದ ದೆಹಲಿಯ ಸೆಂಟ್ರಲ್ ಪಾರ್ಕ್ ಅನ್ನು 2 ದಿನ ಮುಚ್ಚಿದ NDMC!

ಕನ್ನಡಿಗರು ಕೊಟ್ಟ ದುಡ್ಡಲ್ಲೇ AR Rahman ತಮ್ಮ ಮೊದಲ ಸ್ಟುಡಿಯೋ ಕಟ್ಟಿದ್ದು: ನಟ ಯಶ್

ದೇಶಕ್ಕೆ ಹೇಗೆ ಬೆಂಕಿ ಹಚ್ಚಬೇಕು ಎಂಬುದನ್ನು ಬಾಂಗ್ಲಾದೇಶ ನಮಗೆ ತೋರಿಸಿಕೊಟ್ಟಿದೆ: ನೇಹಾ ಬೋರಾ ಹೇಳಿಕೆಗೆ ಬಿಜೆಪಿ ಆಕ್ರೋಶ!

Ramayana: 'ರಾಮಾಯಣ'ದ ರನ್ ಟೈಮ್ ಮೂರು ಗಂಟೆಗೂ ಹೆಚ್ಚು; ಅಮೆರಿಕದಲ್ಲಿ 'PG-13' ರೇಟಿಂಗ್!

ದೆಹಲಿಯ ರಾಮಲೀಲಾದಲ್ಲಿ ಈ ಬಾರಿ ರಾವಣನ ಜೊತೆಗೆ 30 ಅಡಿ ಎತ್ತರದ ಕಾಕ್ರೋಚ್ ಪ್ರತಿಕೃತಿ ದಹನ!