ಸಂಪಾದಕೀಯ

ಭಾಷಾ ಮಾಧ್ಯಮ ಸಿ.ಎಂ. ಘೋಷಣೆ

ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಣದ ಭಾಷೆ ಮಾತೃಭಾಷೆ ಅಥವಾ ಪ್ರಾದೇಶಿಕ ಭಾಷೆಯೇ ಆಗಿರಬೇಕು ಎನ್ನುವ ನಿಲವಿಗೆ ನ್ಯಾಯಾಂಗದ ಬೆಂಬಲ ಸಿಕ್ಕಿಲ್ಲ. ಸುಪ್ರೀಮ್ ಕೋರ್ಟಿನಲ್ಲೂ ಆ ವಾದಕ್ಕೆ ಪುರಸ್ಕಾರ ಸಿಗಲಿಲ್ಲ.
ಈ ವಿಚಾರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಿಲವು ಖಚಿತ ಹಾಗೂ ಸ್ಪಷ್ಟ. ಈಗ ಭಾಷಾ ಮಾಧ್ಯಮದ ವಿಚಾರದಲ್ಲಿ ರಾಜ್ಯಗಳ ನಡುವೆ ಸಮಾನ ರೀತಿಯ ಚಿಂತನೆಯನ್ನು ರೂಪಿಸಲು ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳ ಸಭೆಯನ್ನು ಕರೆಯಬೇಕೆಂದು ಅವರು ಕೇಂದ್ರಕ್ಕೆ ಮನವಿ ಮಾಡಿಕೊಂಡಿದ್ದಾರೆ.
ಆದರೆ ಈ ವಿಚಾರದಲ್ಲಿ ಕೇಂದ್ರ ಸರ್ಕಾರ ಹಿಂದೆ ಹೇಳಿಕೊಳ್ಳುವಂತಹ ಉತ್ಸಾಹವನ್ನೇನೂ ತೋರಿಸಲಿಲ್ಲ. ಹಿಂದೆಯೂ ಅದೇ ನಿಲವಿತ್ತು. ಈಗಲೂ ಅದೇ ನಿಲವಿದೆ.
ಸಿದ್ದರಾಮಯ್ಯ ಅವರಿಗೆ ಈ ವಿಚಾರದಲ್ಲಿ ರಾಜ್ಯಗಳ ಜವಾಬ್ದಾರಿ ಹೊತ್ತ ಮುಖ್ಯಮಂತ್ರಿಗಳ ಸಮಾವೇಶ ಕರೆದರೆ, ಭಾರತೀಯ ಭಾಷೆಗಳತ್ತ ಒಲವು ರೂಪಗೊಳ್ಳುವ ವಿಶ್ವಾಸವಿದೆ. ಅದಕ್ಕೇ ಅವರು ಧೈರ್ಯವಾಗಿ ಕೇಂದ್ರ ಅಂತಹ ಸಭೆಯನ್ನು ಕರೆಯದೇ ಹೋದರೆ ತಾವೇ ಕರೆಯಬಹುದೆನ್ನುವ ಸವಾಲಿನ ರೂಪದ ಚಿಂತನೆಯನ್ನು ಪ್ರಕಟಿಸಿದ್ದಾರೆ.
ಇಲ್ಲಿ ಸ್ಪಷ್ಟವಾಗಿ ರಾಜಕೀಯ ನುಸುಳಿದೆ. ಭಾಷಾ ಮಾಧ್ಯಮದ ಪ್ರಶ್ನೆಯಲ್ಲಿ ರಾಜಕೀಯವನ್ನು ತುರುಕಿದರೆ, ನಿಜವಾದ ಪ್ರಾತಿನಿಧಿಕ ಮುಖ್ಯಮಂತ್ರಿಗಳ ಸಭೆ ನಡೆಯುವುದು ಕೇಂದ್ರದ ಸಹಕಾರ ಇಲ್ಲದೇ ಸಾಧ್ಯವೇ ಇಲ್ಲ. ಭಾಷಾ ಮಾಧ್ಯಮ ರಾಜಕೀಯ ವಿಚಾರವಲ್ಲ. ಜನರ ಮನಸ್ಸನ್ನು ಒಲಿಸಿಕೊಂಡು ಕಾರ್ಯ ಸಾಧಿಸಬೇಕಾದ ವಿಚಾರ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ನಾಳೆ CJPಯ ತಿರಂಗಾ ಮೆರವಣಿಗೆ ನಡೆಯಬೇಕಿದ್ದ ದೆಹಲಿಯ ಸೆಂಟ್ರಲ್ ಪಾರ್ಕ್ ಅನ್ನು 2 ದಿನ ಮುಚ್ಚಿದ NDMC!

ಕನ್ನಡಿಗರು ಕೊಟ್ಟ ದುಡ್ಡಲ್ಲೇ AR Rahman ತಮ್ಮ ಮೊದಲ ಸ್ಟುಡಿಯೋ ಕಟ್ಟಿದ್ದು: ನಟ ಯಶ್

ದೇಶಕ್ಕೆ ಹೇಗೆ ಬೆಂಕಿ ಹಚ್ಚಬೇಕು ಎಂಬುದನ್ನು ಬಾಂಗ್ಲಾದೇಶ ನಮಗೆ ತೋರಿಸಿಕೊಟ್ಟಿದೆ: ನೇಹಾ ಬೋರಾ ಹೇಳಿಕೆಗೆ ಬಿಜೆಪಿ ಆಕ್ರೋಶ!

Ramayana: 'ರಾಮಾಯಣ'ದ ರನ್ ಟೈಮ್ ಮೂರು ಗಂಟೆಗೂ ಹೆಚ್ಚು; ಅಮೆರಿಕದಲ್ಲಿ 'PG-13' ರೇಟಿಂಗ್!

ದೆಹಲಿಯ ರಾಮಲೀಲಾದಲ್ಲಿ ಈ ಬಾರಿ ರಾವಣನ ಜೊತೆಗೆ 30 ಅಡಿ ಎತ್ತರದ ಕಾಕ್ರೋಚ್ ಪ್ರತಿಕೃತಿ ದಹನ!