ಸಂಪಾದಕೀಯ

ಚೊಕ್ಕ

Vishwanath S

ಪಕ್ಕಾ ಕ್ಲೀನ್
    ಛಕ್‌ಛಕ್ ಎಂದು ಮಾಡಿದ ಸ್ವಚ್ಛತಾ ಕಾರ್ಯದ ಪರಿಣಾಮ
    ಚಿಕ್ಕದಾಗಿದ್ದಷ್ಟೂ ಚೊಕ್ಕವಾಗಿಟ್ಟುಕೊಳ್ಳುವುದು ಸುಲಭ. ಯಾವುದಾದರೂ....
    ಅಬದ್ಧಗಳನ್ನೆಲ್ಲ ಶುದ್ಧವಾಗಿಸಿಕೊಂಡ ಸ್ಥಿತಿ
    ಲೆಕ್ಕ ಪಕ್ಕಾ ಇಟ್ಟುಕೊಂಡರೂ ಇದನ್ನೇ ಹೇಳುತ್ತಾರೆ
    ಚೊಕ್ಕ ಇರುವವರೆಲ್ಲ ಚೊಕ್ಕಾಡಿ ಆಗಲಾಗದು
    ಕೊಂಡದ್ದನ್ನೆಲ್ಲ ಚುಕ್ತಾ ಮಾಡಿಕೊಂಡರೆ ಚೊಕ್ಕ ವ್ಯವಹಾರ ಎನ್ನಲಾಗುತ್ತದೆ
    ಪರಿಶುದ್ಧ ಎಂಬ ಸಿಕ್ಕಾ ಹಾಕಲು ಅರ್ಹವಾದದ್ದು
    ಗುಡಿಸಿದಾಗ ಚೊಕ್ಕ ಆಗುತ್ತದೆ. ಗುಡಿಸಿ ಗುಂಡಾಂತರ ಮಾಡಿದರೂ ಚೊಕ್ಕ ಆಗುತ್ತದೆ
    ಶಿಸ್ತು ಪದದ ಸಮಾನಾರ್ಥಕ.
    ಕಸಿವಿಸಿ ಉಂಟುಮಾಡುವ ಕಸವನ್ನು ಕಸಬರಿಕೆಯಿಂದ ಹೊಡೆದೋಡಿಸಿದಾಗ
    ಛಕಛಕ ಹೊಳೆಯಲು ಇದೂ ಕಾರಣ
    ಚೆಕ್ ಬೌನ್ಸ್ ಆದರೆ ಕತೆ ಚೊಕ್ಕ ಆದಂತೆಯೇ ಲೆಕ್ಕ


-ವಿಶ್ವನಾಥ ಸುಂಕಸಾಳ
vishwasunkasal@yahoo.com


SCROLL FOR NEXT